MFOI Awards 2023 : ಕೃಷಿ ಜಾಗರಣ ಮೀಡಿಯಾ ಗ್ರೂಪ್ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ (MFOI) ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ತಮಗೆಲ್ಲ ತಿಳಿದಿದೆ. ಸದ್ಯ ಈ ಕುರಿತ ಇನ್ನು ಪ್ರಮುಖವಾದ ಅಪ್‌ಡೇಟ್ ನಿಮಗಾಗಿ ಇದ್ದು ಈ ಮಹೋನ್ನತ ಕಾರ್ಯಕ್ಕೆ ದೇಶದ ಪ್ರಸಿದ್ಧ ವಿಶ್ವ ವಿದ್ಯಾಲಯಗಳು ಬೆನ್ನು ತಟ್ಟಿ ಕೈ ಜೋಡಿಸಿವೆ.
ಎಂಎಫ್‌ಒಐ (MFOI) ಪ್ರಶಸ್ತಿ ಪ್ರದಾನ ಸಮಾರಂಭದ ಟ್ರೋಫಿ ಮತ್ತು ಲಾಂಛನ ಬಿಡುಗಡೆ ಸಮಾರಂಭವು ಕಳೆದ ಜುಲೈನಲ್ಲಿ ದೆಹಲಿಯ ದಿ ಅಶೋಕ್ ಹೋಟೆಲ್‌ನಲ್ಲಿ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಪರ್ಶೋತ್ತಮ್ ರೂಪಲಾ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಸದ್ಯ ಭಾರತದಾದ್ಯಂತ ರೈತರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಭಾರತದ ಪ್ರಸಿದ್ಧ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಜಾಗರಣದ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ನೀಡಿದ ನಂತರ MFOI ಈವೆಂಟ್‌ಗೆ ಇನ್ನಷ್ಟು ಬಲ ಬಂದಂತಾಗಿದೆ.
ಕೃಷಿ ಜಾಗರಣ ಅವರ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿಗಳೊಂದಿಗೆ ಕೈಜೋಡಿಸಿರುವ ವಿಶ್ವವಿದ್ಯಾನಿಲಯಗಳು ಈ ಕೆಳಗಿನಂತಿವೆ:
- ತಮಿಳುನಾಡು ಕೃಷಿ ವಿಶ್ವವಿದ್ಯಾಲಯ
- ಗೋವಿಂದ್ ಬಲ್ಲಭ್ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ
- ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
- ಡಾ.ವೈಎಸ್ಆರ್ ತೋಟಗಾರಿಕಾ ವಿಶ್ವವಿದ್ಯಾಲಯ
- ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್
- ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ - KUFOS
- ಬಿಹಾರ ಕೃಷಿ ವಿಶ್ವವಿದ್ಯಾಲಯ
- ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ
- ಡಾ. ಯಶವಂತ್ ಸಿಂಗ್ ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ
- ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
- ಪ್ರೊಫೆಸರ್ ಜಯಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯ
- ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ
ಇನ್ನು ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿರುವುದನ್ನು ಖಚಿತಪಡಿಸಿದ್ದಾರೆ. ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್ ಹಾಗೂ ಸಂಸ್ಥೆಯ ನಿರ್ದೇಶಕಿ ಶೈನಿ ಡೊಮಿನಿಕ್ ಜಗತ್ತನ್ನು ಪೋಷಿಸುವ ಅನ್ನದಾತನ ಆ 'ಗೌರವಾನ್ವಿತ ಕೈಗಳನ್ನು' ಗುರುತಿಸಲು ಈ ಉಪಕ್ರಮವನ್ನು ಕೈಗೊಂಡಿದ್ದಾರೆ.
MFOI ರಿಜಿಸ್ಟ್ರೇಶನ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ