ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಕಬ್ಬು ಖರೀದಿ ಮಂಡಳಿ ಸಭೆ ವಿಫಲವಾಗಿದ್ದು,
ಪ್ರತಿಭಟನೆ ಮುಂದುವರಿಸುವುದಾಗಿ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ ಶಾಂತಕುಮಾರ್ ತಿಳಿಸಿದ್ದಾರೆ.
38.30 ಲಕ್ಷ ಕೋಟಿ ಡಿಜಿಟಲ್ ಪಾವತಿ; ಚಿನ್ನ- ಬೆಳ್ಳಿ ದರ ತುಸು ಹೆಚ್ಚಳ!
ಕಬ್ಬಿಗೆ ನ್ಯಾಯ ಸಮ್ಮತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ, ಕಬ್ಬು ಬೆಳೆಗಾರರು ಕಳೆದ 13ದಿನಗಳಿಂದ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಸೋಮವಾರ ಸಂಜೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿತ್ತು.
PmKisan | ಪಿ.ಎಂ ಕಿಸಾನ್ ಸಮ್ಮಾನ್ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!
ಸಭೆಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಬ್ಬಿನ ಉಪ ಉತ್ಪನ್ನಗಳಿಂದ ಟನ್ ಕಬ್ಬಿಗೆ 126ರೂಪಾಯಿ ಲಾಭ ಬರುತ್ತದೆ.
ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಎಫ್‌ಆರ್‌ಪಿಗೆ ಹೆಚ್ಚುವರಿಯಾಗಿ 50ರೂಪಾಯಿ ನೀಡುವಂತೆ ಕಾರ್ಖಾನೆಗಳಿಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಸಾಧ್ಯತೆ!
ಸರ್ಕಾರದ ನಿಲುವನ್ನು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ ಶಾಂತಕುಮಾರ್ ತಿರಸ್ಕಾರ ಮಾಡಿ,
ಚಳವಳಿ ಮುಂದುವರಿಯುತ್ತದೆ ಎಂದು ತಿಳಿಸಿದರು. ನಂತರ ಸಚಿವರು ಮಂಗಳವಾರ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಿನ್ನದ ಬೆಲೆಯಲ್ಲಿ ಅಲ್ಪ ಬದಲಾವಣೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ?
ಸಕ್ಕರೆ ಕಾರ್ಖಾನೆಗಳು ಯೆಥನಾಲ್ ಉತ್ಪಾದನೆಗೆ ಪ್ರೋತ್ಸಾಹಧನ, ಕಡಿಮೆ ಬಡ್ಡಿ ಸಾಲ, ಎಥೆನಾಲ್ ಖಚಿತ ಖರೀದಿ ಭರವಸೆ,
ತೆರಿಗೆ ವಿನಾಯಿತಿ, ವಿದ್ಯುತ್ ಖರೀದಿ ಭರವಸೆ,ಕಡಿಮೆ ಬಡ್ಡಿ ಧನಸಹಾಯ, ಸಕ್ಕರೆ ರಪ್ತು ಪ್ರೋತ್ಸಾಹಧನ, ಇನ್ನಿತರ ಸವಲತ್ತುಗಳನ್ನು ಸರ್ಕಾರದಿಂದ ಪಡೆದು, ಸರ್ಕಾರದ ಆದೇಶಗಳನ್ನು ಪಾಲಿಸಬೇಕು.
ಸಕ್ಕರೆ ಕಾರ್ಖಾನೆಗಳು ಕಟಾವ್ ಕೂಲಿ ಸಾಗಾಣಿಕೆ ವೆಚ್ಚವನ್ನು 250 ರಿಂದ 300 ಏರಿಕೆ ಮಾಡಿದ್ದಾರೆ, ಈ ವೆಚ್ಚವನ್ನು ಕಡಿಮೆ
ಮಾಡಿದರೆ ಟನಗೆ ರೈತರಿಗೆ 150 -200 ಉಳಿಯಬಹುದು ಈ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ರೈತ ಮುಖಂಡರು ಆಗ್ರಹಿಸಿದರು.
38.30 ಲಕ್ಷ ಕೋಟಿ ಡಿಜಿಟಲ್ ಪಾವತಿ; ಚಿನ್ನ- ಬೆಳ್ಳಿ ದರ ತುಸು ಹೆಚ್ಚಳ!
ಉತ್ತರ ಪ್ರದೇಶ್, ಪಂಜಾಬ್, ಹರಿಯಾಣ , ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲೂ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಿದ್ದಾರೆ,
ಅದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿಮಾಡಲಿ, ಸಕ್ಕರೆ ಇಳುವವರಿಯಲ್ಲಿ ಮೋಸ ತಪ್ಪಿಸಿದರೆ ರೈತರಿಗೆ ಶೇಕಡ
ಒಂದು ಇಳುವರಿಗೆ 300 ಹೆಚ್ಚಳವಾಗುತ್ತದೆ ಎಲ್ಲವನ್ನು ಸರ್ಕಾರ ಗಮನಿಸಿ ತೀರ್ಮಾನ ಮಾಡಿ ಎಂದು ಸಚಿವರಿಗೆ ತಿಳಿಸಿದರು.
ಅಲ್ಲದೇ 14ನೇ ದಿನದ ಧರಣಿ ಮುಂದುವರಿಯುತ್ತದೆ, ಎಂದು ಎಚ್ಚರಿಸಿದರು.
ಕಬ್ಬು ಮಂಡಳಿ ಸಭೆಯಲ್ಲಿ ಕಬ್ಬು ಖರೀದಿ ಮಂಡಳಿ ಸದಸ್ಯರು, ಕೈಗಾರಿಕ ಇಲಾಖೆ ಕಾರ್ಯದರ್ಶಿ,
ಪಂಕಜ್ ಕುಮಾರ್ ಪಾಂಡೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲ್ಕರಿ ಸೇರಿದಂತೆ ಹಲವರು ಹಾಜರಿದ್ದರು.