ರಾಜ್ಯದಲ್ಲಿ ಕೆಲವು ಪ್ರಭಾವಿ ನಾಯಕರು ಕಬ್ಬು ಕಾರ್ಖಾನೆಯ (Sugar factory owners) ಮಾಲೀಕರಾಗಿದ್ದಾರೆ. ಇವರು ರಾಜಕೀಯವಾಗಿಯೂ ಪ್ರಭಲವಾಗಿದ್ದು,
ಅಂತವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ರೈತ ಮುಖಂಡರು ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಎಂದು ಹೊಸ ಸರ್ಕಾರಕ್ಕೆ ಸೂಚನೆ ಕೊಡಿ ಎಂದು ಮನವಿ ಮಾಡಲಾಗಿದೆ.
ಮಂಗಳವಾರ 11:30ಕ್ಕೆ ರಾಜಭವನದಲ್ಲಿ ಐವರು ಪ್ರಮುಖ ಮುಖಂಡರಿಗೆ ಸಮಯ ಅವಕಾಶ ನೀಡಲಾಗಿತ್ತು.
ಭೇಟಿಗೆ ಹೋದಾಗ ಎಲ್ಲ ಮುಖಂಡರಿಗೂ ಅವಕಾಶ ನೀಡಬೇಕೆಂದು ಕೋರಿಕೊಂಡಾಗ ರಾಜ್ಯಪಾಲರು ಸಮ್ಮತಿಸಿ ಎಲ್ಲರನ್ನೂ ರಾಜ ಭವನದ ಒಳಗೆ ಆಹ್ವಾನಿಸಿದರು.
ಸುಮಾರು 15 ನಿಮಿಷಗಳ ಕಾಲ ಎಲ್ಲ ಮುಖಂಡರ ಪರಿಚಯ ಮಾಡಿಕೊಂಡು ಕೃಷಿ ಚಟುವಟಿಕೆಯ ಬಗ್ಗೆ ಪ್ರತಿಯೊಬ್ಬರಿಂದಲೂ ತಿಳಿದುಕೊಂಡರು.
ರೈತ ಮುಖಂಡರ ಎಲ್ಲ ಒತ್ತಾಯಗಳ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆರಂಭದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ (Kuruburu Shanthakumar)
ಕುರುಬೂರು ಶಾಂತಕುಮಾರ್ ವಿವರವಾಗಿ ಸಮಸ್ಯೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್ ಅವರು, ರಾಜ್ಯದಲ್ಲಿರುವ 78 ಸಕ್ಕರೆ ಕಾರ್ಖಾನೆಗಳಲ್ಲಿ
ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಮಾಲೀಕರು ಇರುವ ಕಾರಣ ಯಾವುದೇ ಸರ್ಕಾರ ಬಂದರೂ ಸಚಿವ
ಸಂಪುಟದಲ್ಲಿ ಸೇರುವುದರಿಂದ 30 ಲಕ್ಷ ಕಬ್ಬು ಬೆಳೆಗಾರರ ರೈತರಿಗೆ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಹಿ೦ದಿನ ಸರ್ಕಾರ ಕಬ್ಬಿನ ಎಫ್ಆರ್‌ಪಿ (FRP) ದರವನ್ನು 150 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಇದಕ್ಕೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಹೆಚ್ಚುವರಿ ಹಣ ಪಾವತಿಸದೆ ರೈತರನ್ನ ಸಂಕಷ್ಟಕ್ಕೆ ತಳಿದ್ದಾರೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಬ್ಬಿನ ದರವನ್ನ 3800 ರಿಂದ 4500 ತನಕ ನೀಡುತ್ತಿದ್ದಾರೆ.
ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಿದ ಹಿ೦ದಿನ ಎಲ್ಲ ವರ್ಷಗಳಲ್ಲೂ ಇದೇ ರೀತಿ ಚಟುವಟಿಕೆ ನಡೆಸುತ್ತಿದ್ದಾರೆ.
ಸರ್ಕಾರ ಜಿಲ್ಲಾಡಳಿತಕ್ಕೆಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಆ ಜಿಲ್ಲೆಯ ಉಸ್ತುವಾರಿ ಸಚಿವರು ಬಹಳಷ್ಟು ಸಾರಿ ಸಕ್ಕರೆ
ಕಾರ್ಖಾನೆ ಮಾಲೀಕರು ಸಚಿವರಾಗಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ಸಕ್ಕರೆ ಅಭಿವೃದ್ಧಿ ಆಯುಕ್ತರು ಕೂಡ ಪದೇ ಪದೇ ಬದಲಾಗುತ್ತಿರುವುದರಿಂದ ಯಾವುದೇ ಕಾನೂನು ಆದೇಶಗಳನ್ನು ಸಮರ್ಪಕ ಜಾರಿ ಮಾಡುವಲ್ಲಿ ಸಾಧ್ಯವಾಗುತ್ತಿಲ್ಲ.
ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡು ಕ್ರಮ ಕೈಗೊಳ್ಳುವ ಹ೦ತಕ್ಕೆ ಹೋದಾಗ ಆ ಅಧಿಕಾರಿ ವರ್ಗಾವಣೆ ಮಾಡಲಾಗುತ್ತಿದೆ.
ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದ್ದೇವೆ ಆದ್ದರಿಂದ ಇಲಾಖೆಯ ಮುಖ್ಯಸ್ಥರನ್ನು ಸರ್ಕಾರದ ಅಧಿಕಾರಿಗಳ
ವರ್ಗಾವಣೆ ನಿಯಮದಂತೆ ಕನಿಷ್ಠ ಮೂರು ವರ್ಷಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು.
ಬ್ಯಾಂಕುಗಳಲ್ಲಿ ರೈತರು ಸಾಲ ಪಡೆಯಲು ಸಿಬಿಲ್ ಸ್ಕೋರ್ ಮಾನದಂಡವನ್ನು ಅನುಸರಿಸುತ್ತಿರುವ ಕಾರಣ ರೈತರಿಗೆ ಕೃಷಿ ಸಾಲ ಸಿಗುತ್ತಿಲ್ಲ.
ತುಂಬ ಸಂಕಷ್ಟ ಅನುಭವಿಸುವಂತಾಗಿದೆ ರೈತರಿಗೆ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡವನ್ನು ಕೈ ಬಿಡಲು ಸೂಚನೆ ನೀಡಬೇಕು
ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನುರದ್ದು ಮಾಡಬೇಕು.
ಈ ಬಗ್ಗೆ ನೂತನ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯ ರೈತ ಸಂಘದ ನಾರಾಯಣರೆಡ್ಡಿ ಪ್ರಸನ್ನ ಕುಮಾರ್. ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವಕುಮಾರ
ಕಾನೂನು ಸಲಹೆಗಾರರು ಕಿಸಾನ್ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿದೇವರಾಜ್ ಬರಡನಪುರ ನಾಗರಾಜ್ ಮು೦ತಾದವರು ಇದ್ದರು.