News

ರಾಜ್ಯದ 49 ತಾಲ್ಲೂಕುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಇಳಿಕೆ!

22 November, 2022 3:05 PM IST By: Hitesh
Substantial decrease in ground water level in 49 taluks of the state!

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆ ಆಗಿರುವ ಹೊರತಾಗಿಯೂ ಕರ್ನಾಟಕದ 49 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದು ವರದಿ ಆಗಿದೆ.

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ 

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಟ್ಟಾರೆ ಮಳೆ ಪ್ರಮಾಣ ಹೆಚ್ಚಾಗಿದ್ದು, ಐದು ವರ್ಷಗಳಲ್ಲಿ ಅತಿವೃಷ್ಟಿಯಿಂದ

ಬಸವಳಿದ ಬಳಿಕವೂ ರಾಜ್ಯದ 49 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಇಳಿಕೆ ಆಗಿದೆ.

ಹೌದು ಈ ವಿಷಯವನ್ನು ಖುದ್ದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ.

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

ಕೇಂದ್ರ ಜಲಶಕ್ತಿ ಸಚಿವಾಲಯವು ಕೇಂದ್ರ ಅಂತರ್ಜಲ ಮಂಡಳಿಯ ಸಹಕಾರದೊಂದಿಗೆ ದೇಶದ ಅಂತರ್ಜಲ ಸ್ಥಿತಿಗತಿ–2020ರ ಕುರಿತು

ವಿಸ್ತೃತವಾದ ವರದಿಯನ್ನು ಸಿದ್ಧಪಡಿಸಿದೆ. ಇದರ ಅನ್ವಯ ರಾಜ್ಯದ ಕೆಲವು ನಿರ್ದಿಷ್ಟ ಭಾಗದಲ್ಲಿ ನಿರಂತರ ಮಳೆಯ

ಹೊರತಾಗಿಯೂ ಕೆಲವು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಇಳಿಕೆ ಆಗಿದೆ.    

ರಾಜ್ಯದಲ್ಲಿ 2020ಕ್ಕೆ ಹೋಲಿಸಿದರೆ 2022ರಲ್ಲಿ ಅಂತರ್ಜಲ ಹೊರ ತೆಗೆಯುವಿಕೆ ಹೆಚ್ಚಾಗಿದೆ ಎನ್ನುವುದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ರೈತರಿಗೆ ಸಿಹಿಸುದ್ದಿ | ಜಮೀನಿನಲ್ಲಿ ಶ್ರೀಗಂಧದ ಬೆಳೆಯಲು ಸಚಿವ ಸಂಪುಟ ಒಪ್ಪಿಗೆ, ಸರ್ಕಾರದಿಂದ ಸಹಾಯ ಕೂಡ ಲಭ್ಯ! 

2020ರ ವರದಿಯ ಪ್ರಕಾರ, ರಾಜ್ಯದಲ್ಲಿ ವಾರ್ಷಿಕ ಅಂತರ್ಜಲ ಹೊರ ತೆಗೆಯುವಿಕೆ ಪ್ರಮಾಣ 10.63 ಶತಕೋಟಿ ಘನಮೀಟರ್‌ (ಶೇ 64.85) ಇರುವುದು ವರದಿ ಆಗಿತ್ತು.

ಅದೇ 2020ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಪ್ರಮಾಣವು 11.22 ಶತಕೋಟಿ ಘನಮೀಟರ್‌ಗೆ (ಶೇ 69.93) ಏರಿಕೆ ಆಗಿರುವುದು ವರದಿ ಆಗಿದೆ.  

ರಾಜ್ಯದ 234 ತಾಲ್ಲೂಕುಗಳಲ್ಲಿ ನೀರಿನ ಪ್ರಮಾಣವನ್ನು ಅಧ್ಯಯನ ನಡೆಸಿ ವರದಿ ರಚಿಸಲಾಗಿದ್ದು, ಶೇ 20.94
(49 ತಾಲ್ಲೂಕುಗಳು) ಪ್ರದೇಶದಲ್ಲಿ ಅಂತರ್ಜಲದ ಹೆಚ್ಚಾಗಿ ಬಳಕೆ ಆಗುತ್ತಿರುವುದು ಕಂಡುಬಂದಿದೆ.

11 ತಾಲ್ಲೂಕುಗಳ (ಶೇ 4.70) ಸ್ಥಿತಿ ಗಂಭೀರವಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.   

ಈ ರೀತಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವ ಪ್ರದೇಶಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳ ಸಂಖ್ಯೆಯೇ ಹೆಚ್ಚಾಗಿದೆ.

ಅಂತರ್ಜಲ ಇಳಿಕೆ ಆಗಿರುವ ಪ್ರಮುಖ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿವೆ.

2020ರ ವರದಿಯಲ್ಲಿ 52 ತಾಲ್ಲೂಕುಗಳನ್ನು ಅಂತರ್ಜಲ ಅತಿ ಬಳಕೆಯ ತಾಲ್ಲೂಕುಗಳೆಂದು ಪರಿಗಣಿಸಲಾಗಿತ್ತು.

ಅದೇ ಪ್ರಸಕ್ತ ಸಾಲಿನಲ್ಲಿ ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳ ಸಂಖ್ಯೆಯಲ್ಲಿ ಮೂರು ತಾಲ್ಲೂಕುಗಳಷ್ಟೇ ಪಟ್ಟಿಯಿಂದ ಹೊರಗುಳಿದಿವೆ.

ಎರಡು ವರ್ಷಗಳೇ ಕಳೆದರೂ ತಾಲ್ಲೂಕುಗಳ ಸಂಖ್ಯೆ 49ಕ್ಕೆ ಇಳಿದಿದೆ.  

ಏರಿಕೆ ಆಗದೆ ಇಳಿಕೆ ಕಂಡಿರುವುದು ಸಹ ಉತ್ತಮ ಬೆಳವಣಿಗೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.   

PaddyPrice | ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ; ಜಿಲ್ಲಾಡಳಿತ ಸ್ಪಷ್ಟನೆ|ಇಲ್ಲಿವೆ ಈ ದಿನದ ಪ್ರಮುಖ ಕೃಷಿ ಸುದ್ದಿಗಳು