News

ತೆಂಗು ಬೆಳೆಗಾರರರಿಗೆ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ತಗಲುವ ವೆಚ್ಚಕ್ಕೆ ಶೇ 35ರಷ್ಟು ಸಾಲ ಸೌಲಭ್ಯ

07 February, 2021 9:00 PM IST By:
coco nut

ತೆಂಗು ಬೆಳೆಯುವ ರೈತರಿಗೆ ಸಂತಸದ ಸುದ್ದಿ. ತೆಂಗು ಬೆಳೆಯಲು ಹಣಕಾಸಿನ ತೊಂದರೆ ಅನುಭವಸುತ್ತಿದ್ದವರಿಗಾಗಿಯೇ ಕೃಷಿ ಇಲಾಖೆಯು ರೈತರಿಗೆ ಕಡಿಮೆ ಬಡ್ಡಿದರದಲ್ಲ್ಲಿ ಹಣ ನೀಡಿ ತೆಂಗು ಬೆಳೆ ಆಹಾರ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಾರ್ಯಾಲಯದಿಂದ 2020–21ನೇ ಸಾಲಿನ ಪಿಎಂ–ಎಫ್‌ಎಂಇ ಯೋಜನೆಯಯಡಿ ತೆಂಗು ಬೆಳೆ ಆಯ್ಕೆಯಾಗಿರುತ್ತದೆ.

ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ  10 ಲಕ್ಷ ಗರಿಷ್ಠ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ 35ರಷ್ಟು ಮೌಲ್ಯದ ಸಾಲ ಸಂಪರ್ಕ ಬಂಡವಾಳಕ್ಕೆ ಸಹಾಯಧನ ಒದಗಿಸಲಾಗುವುದು.‌

ಒಟ್ಟು 15 ಅರ್ಜಿದಾರರಿಗೆ ಅವಕಾಶವಿದೆ. ಸಾಮಾನ್ಯ ವರ್ಗಕ್ಕೆ 11, ಪರಿಶಿಷ್ಟ ಜಾತಿ–2, ಪರಿಶಿಷ್ಟ ಪಂಗಡ–2 ನಿಗದಿಯಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿಗೆ ಬಂದು ಸಂಪರ್ಕಿಸಿ ಅರ್ಜಿ ಪಡೆದು ಭರ್ತಿ ಮಾಡಬಹುದು ಎಂದು ಎಂದು ಹಿರಿಯ ಸಹಾಯಕ ನಿರ್ದೇಶಕ ಬಿ.ಎನ್‌.ನಾಗರಾಜು ತಿಳಿಸಿದ್ದಾರೆ.