News

ಹಸಿರೆಲೆ ಗೊಬ್ಬರ ಬೆಳೆಸಿದರೆ ಸಿಗಲಿದೆ 50ರಷ್ಟು ಸರ್ಕಾರದಿಂದ ಸಹಾಯಧನ

30 December, 2020 1:29 PM IST By:

ಹಸಿರೆಲೆ ಗೊಬ್ಬರ ಬೀಜ ವಿತರಣೆಗೆ 50ರಷ್ಟು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಹೌದು ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಗೊತ್ತು ಹಸಿರೆಲೆ ಗೊಬ್ಬರಗಳ ಪ್ರಾಮುಖ್ಯತೆ ಏನು  ಅಂತ,  ಈ ಹಸಿರೆಲೆಗೊಬ್ಬರ ಸಸ್ಯಗಳನ್ನು ನಾವು ಹೊಲಗಳಲ್ಲಿ ಬಿತ್ತನೆ ಮಾಡುವುದರಿಂದ,  ಖರ್ಚು ಕಡಿಮೆಯಾಗುತ್ತದೆ ಮತ್ತು ನೀವು ರಾಸಾಯನಿಕ ಬಳಸುವುದು ಸಹ ನಿಯಂತ್ರಣ ಮಾಡಬಹುದು, ರಾಸಾಯನಿಕ ಗೊಬ್ಬರಗಳ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಇದರ ನಿಟ್ಟಿನಲ್ಲಿ ಸರಕಾರವು ಹಸಿರೆಲೆಗೊಬ್ಬರ ಗಳನ್ನು ಸಸ್ಯಗಳನ್ನು ಪ್ರೋತ್ಸಾಹಿಸಲು ಸಲುವಾಗಿ 50ರಷ್ಟು ಸಹಾಯಧನ ನೀಡಲಾಗುತ್ತಿದೆ.

  ಲಭ್ಯವಾಗಿರುವ ತ್ಯಾಜ್ಯ ವಸ್ತುಗಳನ್ನು ಗೊಬ್ಬರವನ್ನಾಗಿ ತಯಾರಿಸಿ ಉಪಯೋಗಿಸುವುದನ್ನು ಸಾವಯವ ಕೃಷಿಯನ್ನು ಲಾಗುತ್ತದೆ. ಹಸಿರೆಲೆ ಗೊಬ್ಬರ ಗಳು ಕಡಿಮೆ ವೆಚ್ಚದಲ್ಲಿ ಸ್ಥಳದಲ್ಲಿಯೇ, ಸಸ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಮಣ್ಣಿನ ರಚನೆ, ನೀರು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯ ಹೆಚ್ಚಿಸುತ್ತದೆ. ಮತ್ತು ಜೈವಿಕ ಕ್ರಿಯೆಗಳು ವೇಗ ಗೊಳಿಸುವ ಶಕ್ತಿಯ ಸಿರ್ಲೆ ಗೊಬ್ಬರಗಳು ಹೊಂದಿವೆ. ಇದರಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕಾಪಾಡಿಕೊಳ್ಳುತ್ತಾ ಹೋಗುತ್ತವೆ. ಇವಂದು ನಿಟ್ಟಿನಲ್ಲಿ ಸ್ವತಃ ಸರ್ಕಾರವೇ ಹಸಿರೆಲೆ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು 50ರಷ್ಟು ಸಹಾಯಧನ ನೀಡಲಾಗುತ್ತಿದೆ.

ಹಸಿರೆಲೆ ಗೊಬ್ಬರ ಗಳಾದ ಡಯಾಂಚ, ಪಿಳ್ಳೆ ಪಿಸುರು, ಸಸ್ಬೇನಿಯಾ, ಸನ್ ಹೆಂಪು, ಗ್ಲಿರಿಸಿಡಿಯಾ, ದ್ವಿದಳ ಧಾನ್ಯ ಸಸ್ಯಗಳು, ಇತ್ಯಾದಿ ಇವುಗಳು ಹಸಿರೆಲೆಗೊಬ್ಬರ ಗಳಾಗಿ ಉಪಯೋಗಿಸಿಕೊಳ್ಳುವುದು ಸೂಕ್ತ,

  ಈ ಹಸಿರೆಲೆ ಗೊಬ್ಬರಗಳ ಬಿತ್ತನೆ ಬೀಜಗಳು ರೈತರಿಗೆ ವಿತರಿಸುವುದರ ಜೊತೆಗೆ 50ರಷ್ಟು ರಿಯಾಯಿತಿ ನೀಡಲಾಗುತ್ತದೆ, ಅಥವಾ ಒಂದು ಹೆಕ್ಟೇರ್ಗೆ ಸುಮಾರು 2000/- ರೂಪಾಯಿಗಳು ಸಹಾಯಧನ ನೀಡಲಾಗುತ್ತದೆ.  ಒಬ್ಬ ರೈತ 2 ಹೆಕ್ಟರ್ ವರೆಗೂ ಸಹಾಯಧನ ಪಡೆಯಬಹುದು,  4000 ಪಡೆಯಬಹುದು.ಆದ್ದರಿಂದ ಯಾವುದು ಕಡಿಮೆಯೋ ಅದನ್ನು ರೈತರಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 2019 -20 ಸಾಲಿನಲ್ಲಿ 350 ಲಕ್ಷ ರೂಪಾಯಿಗಳು ಅನುದಾನ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ. https://raitamitra.karnataka.gov.in/info

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ