ಕೊಬ್ಬರಿ ಧಾರಣೆ ತೀವ್ರ ಇಳಿಕೆಯಿಂದ ಕಂಗಾಲಾಗಿದ್ದ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಕೊಬ್ಬರಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ.
ಕಳೆದ ಒಂದು ತಿಂಗಳಿನಿಂದ ಕೊಬ್ಬರಿಯ ಬೆಲೆಯು ತೀವ್ರವಾಗಿ ಕುಸಿತ ಕಂಡಿತ್ತು. ಇದರಿಂದ ರೈತರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದರು.
ವಿಧಾನಸಭೆ ಅಧಿವೇಶನದಲ್ಲೂ ಈ ಕುರಿತು ತೀವ್ರ ಚರ್ಚೆಗಳು ನಡೆದಿತ್ತು.
ರೈತರ ಕೊಬ್ಬರಿ ಧಾರಣೆಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.
ಇದೀಗ ಕೊಬ್ಬರಿಗೆ ಬೆಳೆಗಾರರ ಬೆಂಬಲಕ್ಕೆ ರಾಜ್ಯ ಸರ್ಕಾರ ಧಾವಿಸಿದ್ದು, ಬುಧವಾರದಿಂದಲೇ ಜಾರಿಗೆ
ಬರುವಂತೆ ಪ್ರತಿ ಕ್ವಿಂಟಾಲ್‌ಗೆ 1,250 ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.
ಇನ್ನು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಈಗಾಗಲೇ 11,750 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.
ಇದೀಗ ರಾಜ್ಯ ಸರ್ಕಾರವೂ ಸಹ 1,250 ರೂಪಾಯಿ ಮೊತ್ತವನ್ನು ಪ್ರೋತ್ಸಾಹ ಧನವಾಗಿ ನೀಡಲು
ಮುಂದಾಗಿರುವುದರಿಂದಾಗಿ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ಒಟ್ಟಾರೆಯಾಗಿ 13,000 ಸಾವಿರು ರೂಪಾಯಿ ಸಂದಾಯವಾಗಲಿದೆ.
ಈಚೆಗೆ ಕೊಬ್ಬರಿ ಧಾರಣೆಯಲ್ಲಿ ತೀವ್ರ ಕುಸಿತ ಉಂಟಾಗಿ ರೈತರು ಕಂಗಾಲಾಗಿದ್ದರು.
ಇದರ ಬಗ್ಗೆ ಚರ್ಚೆ ನಡೆದ ನಂತರದಲ್ಲಿ ಸರ್ಕಾರವು ಕೊಬ್ಬರಿ ಬೆಳೆದ ರೈತರ ನೆರವಿಗೆ ಧಾವಿಸಿದ್ದು,
ಬುಧವಾರದಿಂದಲೇ ಜಾರಿಗೆ ಬರುವಂತೆ ಕ್ವಿಂಟಾಲ್‌ಗೆ 1,250 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ.
ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ
ಕೊಬ್ಬರಿ ಧಾರಣೆಯಲ್ಲಿ ಇಳಿಕೆ ಆಗಿರುವುದರಿಂದ ತೆಂಗು ಬೆಳೆಗಾರರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಿ,
ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಚರ್ಚೆ ನಡೆದಿತ್ತು. ಇದಕ್ಕೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಮಾಜಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಬೆಂಬಲ ಘೋಷಿಸಿದ್ದರು.
ಈ ಸಂಬಂಧ ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ಮಾತನಾಡಿದ್ದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು
ಬುಧವಾರದಿಂದಲೇ ಜಾರಿಗೆ ಬರುವಂತೆ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 1,250 ರೂಪಾಯಿ ಮೊತ್ತವನ್ನು
ಪ್ರೋತ್ಸಾಹ ಧನವನ್ನಾಗಿ ರಾಜ್ಯ ಸರ್ಕಾರವು ನೀಡಲಿದೆ.
ಅಲ್ಲದೇ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಎಂಎಸ್‌ಪಿಯಡಿ ಕೊಬ್ಬರಿ ಖರೀದಿಸುವ ಪ್ರಮಾಣ
ಹೆಚ್ಚಳ ಮಾಡುವುದರೊಂದಿಗೆ ಖರೀದಿ ಅವಧಿ ವಿಸ್ತರಿಸುವಂತೆ ಮನವಿ ಸಲ್ಲಿಸಿದೆ.
ಅವಧಿ ವಿಸ್ತರಣೆಗೆ ಅನುಮತಿ ನೀಡಿದ ನಂತರದ ಅವಧಿಯಲ್ಲಿ ನೋಂದಣಿಯಾಗುವ ರೈತರಿಗೂ ಘೋಷಿತ ಬೆಂಬಲದ
ಬೆಲೆಯೊಂದಿಗೆ ರಾಜ್ಯ ಸರ್ಕಾರದಿಂದಲೂ ಪ್ರತಿ ಕ್ವಿಂಟಾಲ್‌ಗೆ 1,250 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
ಇನ್ನು ಕಳೆದ ಆರ್ಥಿಕ ವರ್ಷದ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ,
ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 22.06 ಲಕ್ಷ ಟನ್ ತೆಂಗು, ಕೊಬ್ಬರಿ ಬೆಳೆಯಲಾಗಿದೆ.
ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ 11,750 ರೂ. ಎಂಎಸ್‌ಪಿ ನಿಗದಿ ಮಾಡಿದ್ದು,
ಕೇಂದ್ರ ಸರ್ಕಾರವು ನಾಫೆಡ್ ಮೂಲಕ ರಾಜ್ಯದ ಏಜೆನ್ಸಿಯಾದ ರಾಜ್ಯ ಸಹಕಾರ ಮಾರಾಟ
ಮಹಾಮಂಡಳದ ಮೂಲಕ ಮಂಗಳವಾರದವರೆಗೆ 45,038 ಟನ್ ಕೊಬ್ಬರಿ ಖರೀದಿಸಿದೆ ಎಂದು ಹೇಳಿದರು.