News

Stratup ಪ್ರಧಾನ ಮಂತ್ರಿ ಉದ್ಯೋಗ ಯೋಜನೆ: 20ರಿಂದ 50 ಲಕ್ಷದ ವರೆಗೆ ನೆರವು!

11 July, 2023 11:02 AM IST By: Hitesh
Startup Pradhan Mantri Udyog Yojana: 20 to 50 Lakh Assistance!
Stratup ಸ್ಟಾರ್ಟ್‌ಅಪ್‌ ಯೋಜನೆಗಳನ್ನು ಪ್ರಾರಂಭಿಸಬೇಕಾದರೆ, ಮುಖ್ಯವಾಗಿ ಫ್ಯಾಷನ್‌, ಒಂದು ಪ್ಲಾನ್‌ ಇರಬೇಕು. ಅದರ ಜೊತೆಗೆ ಮುಖ್ಯವಾಗಿ ಹಣವೂ ಬೇಕು.

ರಾಜ್ಯ ಮತ್ತು ಕೇಂದ್ರ ಸರ್ಕಾರವು ಸ್ಟಾರ್ಟ್‌ಅಪ್‌ ಪ್ರಾರಂಭಿಸುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹತ್ವದ ಯೋಜನೆಯೊಂದನ್ನು ಪರಿಚಯಿಸಿದೆ.

ಈ ಯೋಜನೆಯ ಮೂಲಕ ಸ್ಟಾರ್ಟ್‌ ಅಪ್‌ ಪ್ರಾರಂಭಿಸಲು ಇಚ್ಛಿಸುವವರಿಗೆ 20 ಲಕ್ಷ ರೂಪಾಯಿಯಿಂದ 50 ಲಕ್ಷದ ವರೆಗೆ ಸಾಲ ಸೌಲಭ್ಯವು ಸಬ್ಸಿಡಿ ದರದಲ್ಲಿ ಸಿಗಲಿದೆ. 

ಅಲ್ಲದೇ ವಿವಿಧ ವರ್ಗದವರಿಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಅಲ್ಪ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿ ಕೇಂದ್ರ ಸರ್ಕಾರದ

ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ. 

ಪ್ರಧಾನ ಮಂತ್ರಿಗಳ ಉದ್ಯೋಗ ಯೋಜನೆ ಅಥವಾ pmegp ಸಮಾಜದಲ್ಲಿ ಉದ್ಯೋಗ ಮತ್ತು ಉತ್ಪಾದನಾ ಸಾಮರ್ಥ್ಯವನ್ನು

ಹೆಚ್ಚಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಯೋಜನೆಯಾಗಿದೆ.

ಇದು ಉತ್ಪಾದನಾ ವಲಯದಲ್ಲಿ ರೂ 50 ಲಕ್ಷಗಳವರೆಗೆ ಮತ್ತು ಸೇವಾ ವಲಯದಲ್ಲಿ ರೂ 20 ಲಕ್ಷಗಳವರೆಗೆ ಮತ್ತು ಉದ್ಯಮಗಳ

ವೆಚ್ಚದಲ್ಲಿ ಸಬ್ಸಿಡಿಯನ್ನು ಒದಗಿಸುವ ಸಾಲ ಯೋಜನೆಯಾಗಿದೆ.

10 ಲಕ್ಷಕ್ಕಿಂತ ಹೆಚ್ಚು ವೆಚ್ಚದ ಉತ್ಪಾದನಾ ಉದ್ಯಮಗಳು ಮತ್ತು 5 ಲಕ್ಷಕ್ಕಿಂತ ಹೆಚ್ಚು ವೆಚ್ಚದ ಸೇವಾ ಉದ್ಯಮಗಳಿಗೆ

ಅರ್ಜಿ ಸಲ್ಲಿಸುವವರು 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

www.kviconline.gov.in ವೆಬ್‌ಸೈಟ್ ಮೂಲಕ ಅರ್ಜಿ ಮತ್ತು ಸಂಬಂಧಿತ ದಾಖಲೆಗಳನ್ನು ಕಳುಹಿಸಬಹುದು.

ಈ ಯೋಜನೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, KVIC ಮತ್ತು KVIB ನ ಏಜೆನ್ಸಿಗಳು ಅನುಷ್ಠಾನಗೊಳಿಸುತ್ತವೆ.

ಸಾಮಾನ್ಯ ವರ್ಗದವರಿಗೆ ಸ್ವಂತ ಹೂಡಿಕೆ ಶೇ.10, ಬ್ಯಾಂಕ್ ಸಾಲ ಶೇ.90, ಸಬ್ಸಿಡಿ ದರ ನಗರ ಪ್ರದೇಶಗಳಿಗೆ ಶೇ.15 ಮತ್ತು ಗ್ರಾಮೀಣ ಪ್ರದೇಶಗಳಿಗೆ ಶೇ.25 ಇರುತ್ತದೆ.

ಆದ್ಯತೆಯ ವರ್ಗದಲ್ಲಿ ಅಂದರೆ ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಬಿಸಿಗಳು,

ಅಲ್ಪಸಂಖ್ಯಾತರು ಮತ್ತು ಮಾಜಿ ಸೈನಿಕರು, ಸ್ವಂತ ಹೂಡಿಕೆ 5 ಪ್ರತಿಶತ ಮತ್ತು ಬ್ಯಾಂಕ್ ಸಾಲ 95 ಪ್ರತಿಶತ ಇರುತ್ತದೆ.

ಸಬ್ಸಿಡಿ ದರವು ನಗರ ಪ್ರದೇಶಗಳಿಗೆ 25% ಮತ್ತು ಗ್ರಾಮೀಣ ಪ್ರದೇಶಗಳಿಗೆ 35% ಆಗಿರುತ್ತದೆ.