News

SSLC ರಿಸಲ್ಟ್‌ ಔಟ್‌.. ಈ ಬಾರಿ ಯಾವ ಜಿಲ್ಲೆ ಫಸ್ಟ್, ಲಾಸ್ಟ್‌ ಗೊತ್ತಾ..?

08 May, 2023 12:32 PM IST By: KJ Staff
SSLC result out.. Do you know which district is first and last

8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ SSLC ಪರೀಕ್ಷೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ಈ ಫಲಿತಾಂಶ ದಾಖಲೆಯ ಫಲಿತಾಂಶವಾಗಿದ್ದು, ರಾಜ್ಯಾದ್ಯಾಂತ 4 ವಿದ್ಯಾರ್ಥಿಗಳು 625 ಅಂಕಕ್ಕೆ ಬರೋಬ್ಬರಿ 625 ಅಂಕಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಅಚ್ಚರಿ ಎಂಬಂತೆ 15 ಸಾವಿರ ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ ಫುಲ್‌ ಮಾರ್ಕ್ಸ್‌ ಪಡೆದುಕೊಂಡಿದ್ದಾರೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದ ಈ ಪರೀಕ್ಷೆಯಲ್ಲಿ ಈ ಬಾರಿ 80% ರಷ್ಟು ರಿಸಲ್ಟ್‌ ದಾಖಲಾಗಿದೆ. ಇತ್ತೀಚಿಗೆ ನಡೆದ ಈ ಪರೀಕ್ಷೆಯಲ್ಲಿ 8 ಲಕ್ಷ 35 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 7 ಲಕ್ಷದ 617 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅತಿ ಹೆಚ್ಚು ಫಲಿತಾಂಶದೊಂದಿಗೆ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಅಲಂಕರಿಸಿದೆ. ಈ ಜಿಲ್ಲೆಗಳು ಕ್ರಮವಾಗಿ 96.86 % ಹಾಗೂ 96.55 % ಪಡೆದುಕೊಂಡಿವೆ.ಇನ್ನು ಯಾದಗಿರಿ ಜಿಲ್ಲೆ .75.49ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ

 

ಜಿಲ್ಲೆಗಳು

ಫಲಿತಾಂಶ (ಶೇಕಡಾವಾರು)

ಚಿತ್ರದುರ್ಗ

96.8

ಮಂಡ್ಯ

96.74

ಹಾಸನ

96.68

ಬೆಂಗಳೂರು ಗ್ರಾಮೀಣ

96.48

ಚಿಕ್ಕಬಳ್ಳಾಪುರ

96.48

ಕೋಲಾರ

94.6

ಚಾಮರಾಜನಗರ

96.15

ಮಧುಗಿರಿ

93.23

ಕೊಡಗು

93.19

ವಿಜಯನಗರ

91.41

ವಿಜಯಪುರ

91.23

ಚಿಕ್ಕೋಡಿ

91.07

ಉತ್ತರ ಕನ್ನಡ

90.53

ದಾವಣಗೆರೆ

90.43

ಕೊಪ್ಪಳ

90.27

ಮೈಸೂರು

89.75

ಚಿಕ್ಕಮಗಳೂರು

89.69

ಉಡುಪಿ

89.49

ದಕ್ಷಿಣ ಕನ್ನಡ

89.47

ತುಮಕೂರು

89.43

ರಾಮನಗರ

89.42

ಹಾವೇರಿ

89.11

ಶಿರಸಿ

88.39

ಧಾರವಾಡ

86.55

ಗದಗ

86.51

ಬೆಳಗಾವಿ

85.85

ಬಾಗಲಕೋಟೆ

85.14

ಕಲಬುರಗಿ

 

ಶಿವಮೊಗ್ಗ

84.04

ರಾಯಚೂರು

84

ಬಳ್ಳಾರಿ

81.54

ಬೆಂಗಳೂರು ಉತ್ತರ

80.93

ಬೆಂಗಳೂರು ದಕ್ಷಿಣ

78.7

ಬೀದರ್

78.95

ಯಾದಗಿರಿ

75.49