News

SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ; ಯಾವ ದಿನ ಯಾವ ಸಬ್ಜೆಕ್ಟ್ ಇಲ್ಲಿದೆ ವಿವರ

20 May, 2020 9:05 PM IST By:

ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4ರವರೆಗೆ ಹಾಗೂ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಜೂನ್‌ 18ರಂದು ನಡೆಯಲಿದೆ. ಇಂಗ್ಲಿಷ್‌, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಒಂದೊಂದು ದಿನ ಅಂತರ ಇರುವ ಹಾಗೆ ನೋಡಿಕೊಂಡು ಪರೀಕ್ಷೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌‌
ಕೊರೋನಾ ಸಂಬಂಧಿತ ಲಾಕ್ ಡೌನ್ ಕಾರಣದಿಂದ ರಾಜ್ಯದಲ್ಲಿ ಅನಿರ್ಧಾಷ್ಟವಧಿಗೆ ಮುಂದೂಡಲ್ಪಟ್ಟಿದ್ದ SSLC ಪರೀಕ್ಷಾ ದಿನಾಂಕವನ್ನು ಮಂಡಳಿಯು ಇದೀಗ ಪ್ರಕಟಿಸಿದ್ದು, ಪರೀಕ್ಷಾ ದಿನಾಂಕ ವಿವರಗಳು ಈ ಕೆಳಗಿನಂತಿವೆ.

ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ಅವಧಿಯಲ್ಲಿ ನಡೆಯಲಿವೆ.

SSLC ಪರೀಕ್ಷೆಯ ಪ್ರಾರಂಭದ ವಿಷಯವಾಗಿ ಜೂನ್ 25, ಗುರುವಾರದಂದು ದ್ವಿತೀಯ ಭಾಷಾ (ಇಂಗ್ಲಿಷ್/ಕನ್ನಡ) ಪರೀಕ್ಷೆಗಳು ನಡೆಯಲಿದೆ. ಜೂನ್ 27ರಂದು ಗಣಿತ, ಜೂನ್ 29ರಂದು ವಿಜ್ಞಾನ, ಜುಲೈ 01ಕ್ಕೆ ಸಮಾಜ ವಿಜ್ಞಾನ, ಜುಲೈ 2ರಂದು ಪ್ರಥಮ ಭಾಷಾ ಪರೀಕ್ಷೆಗಳು ನಡೆಯಲಿವೆ ಹಾಗೂ ಕೊನೆಯದಾಗಿ ಜುಲೈ 2ರಂದು ಪ್ರಥಮ ಭಾಷಾ ಪರೀಕ್ಷೆಗಳು ನಡೆಯಲಿದೆ.

ಪ್ರಥಮ ಭಾಷೆಗೆ ಗರಿಷ್ಠ 125 ಅಂಕಗಳಿರುತ್ತವೆ ಉಳಿದ ವಿಷಯಗಳಿಗೆ ಗರಿಷ್ಠ 100 ಅಂಕಗಳನ್ನು ನಿಗದಿ ಮಾಡಲಾಗಿದೆ. ಪ್ರಥಮ ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ 3 ಗಂಟೆ ಬರೆಯಲು ಮತ್ತು 15 ನಿಮಿಷ ಪ್ರಶ್ನೆಪತ್ರಿಕೆ ಓದಲು ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆಗೆ 2 ಗಂಟೆ 45 ನಿಮಿಷ ಬರೆಯಲು ಹಾಗೂ 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಓದಲು ನಿಗದಿಪಡಿಸಲಾಗಿದೆ.

ಜೂನ್ 25 (ಗುರುವಾರ) ದ್ವಿತೀಯ ಭಾಷೆ

ಜೂನ್ 27 (ಶನಿವಾರ) ಗಣಿತ

ಜೂನ್ 29 (ಸೋಮವಾರ) ವಿಜ್ಞಾನ

ಜುಲೈ 01 (ಬುಧವಾರ) ಸಮಾಜ ವಿಜ್ಞಾನ

ಜುಲೈ 02 (ಗುರುವಾರ) ಪ್ರಥಮ ಭಾಷೆ

ಜುಲೈ 03 (ಶುಕ್ರವಾರ) ತೃತೀಯ ಭಾಷೆ

ಜೆ.ಟಿ.ಎಸ್. ವಿದ್ಯಾರ್ಥಿಗಳಿಗೆ ಕೋರ್ ಸಬ್ಜೆಕ್ಟ್ (ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ & ಎಲೆಕ್ಟ್ರಿಕ್ ಇಂಜಿನಿಯರಿಂಗ್ 2, ಇಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್) ಪರೀಕ್ಷೆ ಜೂನ್ 26 ಶುಕ್ರವಾರದಂದು ನಡೆಯಲಿದೆ.
ಪ್ರಥಮ ಭಾಷೆ ಹಾಗೂ ಐಚ್ಛಿಕ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ನಡೆದರೆ ದ್ವಿತೀಯ ಭಾಷೆ ಹಾಗೂ ತೃತೀಯ ಭಾಷಾ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.