ಉದ್ಯೋಗ ನಿರೀಕ್ಷೆಯಲ್ಲಿರುವ ಯುವಜನತೆಗೆ ಇಲ್ಲಿದೆ ಅದ್ಬುತ ಅವಕಾಶ. ಎಸ್‌ಎಸ್‌ಸಿ 70,000 ಹುದ್ದೆಗಳ ನೇಮಕಾತಿಗೆ ಸೂಚನೆ ಹೊರಡಿಸಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿರಿ:
ESIC ನಲ್ಲಿ 491 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ₹2,08,700 ಸಂಬಳ..!
Breaking: ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ; 920 ಜನ ಸಾವು; ಸಾವಿರಾರು ಜನರಿಗೆ ಗಂಭೀರ ಗಾಯ..!
ಸಿಬ್ಬಂದಿ ನೇಮಕಾತಿ ಆಯೋಗವು ಪ್ರತಿ ವರ್ಷವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಿಗೆ ವಿವಿಧ ಗ್ರೂಪ್‌ನ ಹುದ್ದೆಗಳ ಭರ್ತಿಗೆ ನೇಮಕ ಪರೀಕ್ಷೆ ನಡೆಸುತ್ತದೆ. ಇದೀಗ ಭರ್ಜರಿ ಸಿಹಿ ಸುದ್ದಿ ನೀಡಿದ್ದು, 70 ಸಾವಿರ ಹುದ್ದೆಗಳಿಗೆ ನೇಮಕ ಪರೀಕ್ಷೆ ನಡೆಸುವುದಾಗಿ ಹೇಳಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಗ್ರೂಪ್‌ನ ಹುದ್ದೆಗಳನ್ನು ಪ್ರತಿ ವರ್ಷವು ಭರ್ತಿ ಮಾಡಲು ನೇಮಕಾತಿ ಪರೀಕ್ಷೆ ನಡೆಸುತ್ತದೆ.
ಎಸ್‌ಎಸ್‌ಸಿ ಇದೀಗ ದೇಶದ ಯುವಜನತೆಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ಸಿಬ್ಬಂದಿ ನೇಮಕಾತಿ ಆಯೋಗವು 70,000 ಹುದ್ದೆಗಳನ್ನು ಹೆಚ್ಚುವರಿ ಆಗಿ ಭರ್ತಿ ಮಾಡಲು ನೇಮಕ ಪ್ರಕ್ರಿಯೆ ನಡೆಸುವುದಾಗಿ ನೋಟಿಸ್ ಬಿಡುಗಡೆ ಮಾಡಿದೆ.
ಈ ಕುರಿತು ನೋಟಿಸ್ ಪ್ರಕಟಿಸಿರುವ ಎಸ್‌ಎಸ್‌ಸಿ'ಯು, ' ನಮ್ಮ ನಿರಂತರ ಶ್ರಮದೊಂದಿಗೆ ಇದೀಗ 70,000 ಹೆಚ್ಚುವರಿ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ.
ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..
Audi E-rickshaw: 2023 ಹೊತ್ತಿಗೆ ಭಾರತದ ರೋಡಿಗೆ ಬರಲಿವೆ ಆಡಿ ಇ-ರಿಕ್ಷಾಗಳು..! ಇವುಗಳ ವಿಶೇಷತೆ ಏನು ಗೊತ್ತೆ?
ನಿರ್ಧಿಷ್ಟ ಪರೀಕ್ಷೆಗಳಿಗೆ ಮುಂದಿನ ದಿನಗಳಲ್ಲಿ ಒಂದೊಂದರಂತೆ ಅಧಿಸೂಚನೆ ಪ್ರಕಟಿಸಲಾಗುವುದು. ಎಸ್‌ಎಸ್‌ಸಿ ಪರೀಕ್ಷೆ ಎದುರಿಸಲು ಆಸಕ್ತ ಅಭ್ಯರ್ಥಿಗಳು ಆಗಾಗ ಎಸ್‌ಎಸ್‌ಸಿ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರಿ' ಎಂದು ಹೇಳಲಾಗಿದೆ.
ದೇಶದಾದ್ಯಂತ ಇರುವ ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಯ ಕಛೇರಿಗಳಲ್ಲಿ ಕೆಲಸ ಪಡೆಯಬೇಕು ಎಂದು ಕನಸು ಹೊತ್ತ ಯುವಜನತೆಯೂ ಇಂದಿನಿಂದಲೇ ಎಸ್‌ಎಸ್‌ಸಿ ನಡೆಸುವ ವಿವಿಧ ಗ್ರೂಪ್ ಹುದ್ದೆಗಳ ಪರೀಕ್ಷೆಗಳಿಗೆ ಇಂದಿನಿಂದಲೇ ಸಿದ್ಧತೆ ನಡೆಸಿ.
ನಿರಂತರ ಓದುವುದನ್ನು ರೂಢಿಸಿಕೊಳ್ಳಿ. ಎಸ್‌ಎಸ್‌ಸಿ ಯಾವೆಲ್ಲ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಎಸ್‌ಎಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ / ತತ್ಸಮಾನ ವಿದ್ಯಾರ್ಹತೆ ಪಡೆದ ಎಲ್ಲರೂ ಅರ್ಜಿ ಸಲ್ಲಿಸಬಹುದಾದ ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ ಅವುಗಳ ಲಿಸ್ಟ್ ಈ ಕೆಳಗಿನಂತಿದೆ.
ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!
ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!
ಎಸ್‌ಎಸ್‌ಸಿ ನಡೆಸುವ ಪರೀಕ್ಷೆಗಳ ಪಟ್ಟಿ
- ಎಸ್ಎಸ್‌ಸಿ ಸಿಜಿಎಲ್ (ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ)
- ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್ (ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ)
- ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್ ಎಕ್ಸಾಮಿನೇಷನ್
- ಸೆಲೆಕ್ಷನ್ ಪೋಸ್ಟ್ ಎಕ್ಸಾಮಿನೇಷನ್, ಫೇಸ್-10, 2022
- ದೆಹಲಿ ಕಾನ್ಸ್‌ಟೇಬಲ್ ಪರೀಕ್ಷೆ
- ದೆಹಲಿ ಎಸ್‌ಐ ಪರೀಕ್ಷೆ
- ಸೀನಿಯರ್, ಜೂನಿಯರ್ ಹಿಂದಿ ಭಾಷಾಂತರಕಾರರ ನೇಮಕ ಪರೀಕ್ಷೆ
- ವೈಜ್ಞಾನಿಕ ಸಹಾಯಕರ ನೇಮಕ ಪರೀಕ್ಷೆ
- ಜೂನಿಯರ್ ಇಂಜಿನಿಯರ್ ನೇಮಕ ಪರೀಕ್ಷೆ
- ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಪರೀಕ್ಷೆ 2021
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಕಾನ್ಸ್ಟೇಬಲ್ ನೇಮಕ ಪರೀಕ್ಷೆಗಳು (ಎನ್‌ಐಎ, ಎಸ್‌ಎಸ್‌ಎಫ್, ರೈಫಲ್‌ಮೆನ್ ಇನ್ ಅಸ್ಸಾಂ ರೈಫಲ್ಸ್
ಈ ಮೇಲಿನ ಎಲ್ಲ ಪರೀಕ್ಷೆಗಳ ಮೂಲಕ ವಿವಿಧ ಗ್ರೂಪ್ ಹುದ್ದೆಗಳನ್ನು ಕೇಂದ್ರ ಸರ್ಕಾರದಡಿ ನೇಮಕ ಮಾಡಲಾಗುತ್ತದೆ.