News

SSLC' 'ITI' ಪಾಸಾದವರಿಗೆ ಸಂತಸದ ಸುದ್ದಿ : ರೈಲ್ವೆ ಇಲಾಖೆಯಲ್ಲಿ 432 ಹುದ್ದೆಗಳಿಗೆ ಅರ್ಜಿ ಆಹ್ವಾನ

25 August, 2020 1:02 PM IST By:

ಎಸ್ ಎಸ್ ಎಲ್ ಸಿ ಅಥವಾ ಐಟಿಐ ಪಾಸಾದವರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸೌಥ್‌ ಈಸ್ಟ್‌ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 432 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ .

ಸೌಥ್‌ ಈಸ್ಟ್‌ ಸೆಂಟ್ರಲ್ ರೈಲ್ವೆ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಫಿಟ್ಟರ್, ಟರ್ನರ್‌, ಎಲೆಕ್ಟ್ರಿಷಿಯನ್, ಮೆಕಾನಿಸ್ಟ್‌, ಪ್ಲಂಬರ್‌, ಪೇಂಟರ್‌, ಕೊಪರ್‌, ಸ್ಟೆನೋ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಒಟ್ಟು ಹುದ್ದೆಗಳ ಸಂಖ್ಯೆ: 432

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು

ತರಬೇತಿ ಭತ್ಯೆ:  ಭರಾತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. .ಮಾಸಿಕ 8,000 ರಿಂದ15,200 ಭತ್ಯೆ ನೀಡಲಾಗುತ್ತದೆ.

ವಯೋಮಿತಿ:  31 ಆಗಸ್ಟ್‌ 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್‌ಸೈಟ್‌ https://secr.indianrailways.gov.in ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 30