2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ. ಗುಣಮಟ್ಟದ ಬಿಳಿ ಜೋಳ ಖರೀದಿಸಲು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ತೀರ್ಮಾನದಂತೆ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒಟ್ಟು 9 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಬೆಳಿಜೋಳ ಬೆಳೆದ ರೈತರು ಸಂಬಂಧಪಟ್ಟ ಆಯಾ ತಾಲೂಕಿನ ಸಮೀಪದ ಖರೀದಿ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ವಿ.ವಿ. ಜ್ಯೋತ್ಸ್ನಾ ಅವರು ಮನವಿ ಮಾಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಲ್‍ಗೆ 2,620 ರೂ.ಗಳ ದರವನ್ನು ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಲ್‍ಗೆ 2.640 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಬಿಳಿ ಜೋಳ ಬೆಳೆದ ರೈತರು 2021ರ ಮಾರ್ಚ್ 31 ರೊಳಗಾಗಿ ದಿನಾಂಕ ತಮ್ಮ ಸಮೀಪದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.
ರೈತರು ತಮ್ಮ ಬೆಳೆಯ ವಿವರವನ್ನು ಕೃಷಿ ಇಲಾಖೆಯ ಫÀ್ರೂಟ್ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳುವ ಕಾರ್ಯ ಚಾಲ್ತಿಯಲ್ಲಿದ್ದು, ನೋಂದಾಯಿತ ರೈತರು ಈ ಕೆಳಕಂಡ ಕೇಂದ್ರಗಳಲ್ಲಿ ಬಿಳಿ ಜೋಳವನ್ನು ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ದರದಂತೆ ಮಾರಾಟ ಮಾಡಬಹುದಾಗಿದೆ. ತಾಲೂಕುವಾರು ಖರೀದಿ ಕೇಂದ್ರಗಳ ವಿವರ ಕೆಳಗಿನಂತಿದೆ.
ತಾಲೂಕುವಾರು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ (ಕೆ.ಎಫ್.ಸಿ.ಎಸ್.ಸಿ.) ಸಗಟು ಮಳಿಗೆಗಳ ಹೆಸರು ಹಾಗೂ ಸಗಟು ಮಳಿಗೆಗಳ ವ್ಯವಸ್ಥಾಪಕರ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರ ಇಂತಿದೆ. ಅಫಜಲಪೂರ-(ಸಿ.ಎಸ್. ಬೆಣ್ಣಿಸೂರ ಮೊಬೈಲ್ ಸಂಖ್ಯೆ 9448133987). ಆಳಂದ-ರಾಜಕುಮಾರ ಮೊಬೈಲ್ ಸಂಖ್ಯೆ 8880659915. ಚಿಂಚೋಳಿ-(ಮಲ್ಲಣ್ಣ-ಮೊಬೈಲ್ ಸಂಖ್ಯೆ 9686287261). ಚಿತ್ತಾಪೂರ-(ಎಸ್.ಬಿ.ಬಿರಾದಾರ ಮೊಬೈಲ್ ಸಂಖ್ಯೆ 9448880409). ಕಲಬುರಗಿ ಗ್ರಾಮಾಂತರ-(ಎಂ.ಕೆ.ಪರಗೊಂಡ ಮೊಬೈಲ್ ಸಂಖ್ಯೆ 9901089922). ಜೇವರ್ಗಿ-(ಸಿದ್ದಮ್ಮ ಮೊಬೈಲ್ ಸಂಖ್ಯೆ 9353773244). ಸೇಡಂ-(ಎಂ.ಎನ್. ತಾಳಿಕೋಟಿ ಮೊಬೈಲ್ ಸಂಖ್ಯೆ 9901496987). ಕಲಬುರಗಿ ಪಡಿತರ-(ಪ್ರಕಾಶ ಮೊಬೈಲ್ ಸಂಖ್ಯೆ 9845359642) ಹಾಗೂ ಶಹಾಬಾದ (ಮಹ್ಮದ್ ಕರಿಮುಲ್ಲಾ ಮೊಬೈಲ್ ಸಂ. 9845217682).
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 9448496023 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಮೊಬೈಲ್ ಸಂಖ್ಯೆ 9448384981 ಗೆ ಸಂಪರ್ಕಿಸಲು ಕೋರಲಾಗಿದೆ.