ರೈತ ಬಾಂಧವರಿಗೆ ಸಂತಸದ ಸುದ್ದಿ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಟ್ರ್ಯಾಕ್ಟರ್ ಬಾಡಿಗೆ ಹಾಗೂ ಟ್ರ್ಯಾಕ್ಟರ್ ನಡೆಸುವುದೂ ಕಷ್ಟವಾಗಿತ್ತು. ಈಗ ಪೆಟ್ರೋಲ್ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಮೊಬೈಲ್ ಚಾರ್ಜ್ ಮಾಡಿದಂತೆ ಚಾರ್ಜ್ ಮಾಡಿ ಟ್ರ್ಯಾಕ್ಟರ್ ನಡೆಸಬಹುದು.
ಸೋನಾಲಿಕಾ ಟ್ರ್ಯಾಕ್ಟರ್ ಕಂಪನಿಯು ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್ ಟ್ಯಾಕ್ಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.' ಟೈಗರ್ ಎಲೆಕ್ಟ್ರಿಕ್' ಟ್ರ್ಯಾಕ್ಟರ್ ನ ಬೆಲೆ 5.99 ಲಕ್ಷ ರೂಪಾಯಿಗಳು. ಈ ಟ್ರ್ಯಾಕ್ಟರ್ ದೇಶಿಯ ಮಾರುಕಟ್ಟೆಯಲ್ಲಿ ಡಿಸೆಂಬರ್ 23 2020 ರಂದು ಬಿಡುಗಡೆಯಾಗಿದೆ.
ಸೋನಾಲಿಕಾ ಟ್ರ್ಯಾಕ್ಟರ್ 11KW ಇಂಡಕ್ಷನ್ ಮೋಟರ್ ಹಾಗೂ 25KWH ಲಿತಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಟ್ರ್ಯಾಕ್ಟರ್ ಚಾರ್ಜ್ ಮಾಡುಲು ಎಷ್ಟು ಸಮಯ ಹೋಗುತ್ತೆ ಎಂದು ಯೋಚನೆ ಮಾಡಿದರೆ? ಮನೆಯಲ್ಲಿ ಬಳಸುವಂತಹ ಸಾಮಾನ್ಯ ವಿದ್ಯುತ್ ನಿಂದ 10 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸಿಸ್ಟಮ್ ನೊಂದಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಇದನ್ನು ಚಾರ್ಜ್ ಮಾಡಬಹುದು.
ಇದು ಇನ್ನು ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಗಂಟೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಯೋಚನೆ ಮಾಡಿದಾಗ ಒಂದೇ ಚಾರ್ಜ್ ನಲ್ಲಿ ಎರಡು ಟ್ರಿಲಿಯನ್ ಟೇಲರ ನೊಂದಿಗೆ ಕಾರ್ಯನಿರ್ವಹಿಸುವಾಗ ಸುಮಾರು 8 ಗಂಟೆಗಳ ಕಾಲ ಇದು ಕಾರ್ಯವನ್ನು ನಿರ್ವಹಿಸುತ್ತದೆ.
ಮೂರು ವರ್ಷಗಳ ಹಿಂದೆ ಈ ಟ್ರಾಕ್ಟರ್ ಅಭಿವೃದ್ಧಿಯಾಗಿದ್ದು ಇದು ಹಲವಾರು ಬೇರೆ ರಾಷ್ಟ್ರಗಳಿಗೆ ರಫ್ತಾಗಿ ಅಲ್ಲಿ ಬಿಡುಗಡೆಯಾಗಿತ್ತು ಆದರೆ ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಟ್ರ್ಯಾಕ್ಟರ್ ಗಳು ಯುರೋಪಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಡಿಸೈಲ್ ಟ್ರಾಕ್ಟರುಗಳಿಗೆ ಹೋಲಿಸಿದಾಗ ಅದರಲ್ಲಿ ತುಂಬಾ ಹೋಗೆ ಬರುತ್ತದೆ ಆದರೆ ಅದನ್ನು ಇಲ್ಲಿ ನಾವು ತಡೆಗಟ್ಟಬಹುದು.
ಟ್ರಾಕ್ಟರ್ ಗಳನ್ನು ನಾವು ಸಾಂಪ್ರದಾಯಿಕ ಡೀಸಲ್ ಟ್ರಾಕ್ಟರುಗಳಿಗೆ ಹೋಲಿಸಿದಾಗ ಇವು ರೈತನಿಗೆ ಅತ್ಯುನ್ನತ ಹಾಗೂ ಒಳ್ಳೆಯ ಸಹಾಯವನ್ನು ನೀಡುತ್ತವೆ. ಇದರಲ್ಲಿ ಒಂದು ಭಾಗದಲ್ಲಿ ಉತ್ಪತ್ತಿಯಾಗುವ ಹೀಟ್ ಕಡಿಮೆ ಭಾಗಗಳಿಗೆ ತಲಪುತ್ತದೆ ಹಾಗೂ ಇದರಿಂದ ವೈಬ್ರೇಶನ್ ಕೂಡ ಕಡಿಮೆಯಾಗುತ್ತದೆ, ಇದರ ಮೂಲಕ ನಾವು ಗಾಡಿಯ ಮೆಂಟೇನೆನ್ಸ್ ಕಾಸ್ಟ್ ಅನ್ನು ಕೂಡ ಕಡಿಮೆ ಮಾಡಬಹುದು ಹಾಗೂ ನಾವು 1/4 ರಷ್ಟು ಖರ್ಚನ್ನು ಸಾಂಪ್ರದಾಯಕ ಟ್ರಾಕ್ಟರ್ಗಳಿಗೆ ಹೋಲಿಸಿದರೆ ಕಡಿಮೆ ಮಾಡಬಹುದು.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ