News

ಬೇಸಿಗೆ ಹಂಗಾಮು-ಮಣ್ಣು ಪರೀಕ್ಷೆಗೆ ಸಕಾಲ

29 April, 2021 6:26 PM IST By:
soil test

ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಮಹತ್ತರ ಪಾತ್ರವಿದೆ. ಕಾರಣ ಯಾವುದೇ ಬೆಳೆಯ ಉತ್ತಮ ಬೆಳವಣಿಗೆಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆಯು ಉನ್ನತ ಮಟ್ಟದಲ್ಲಿರಬೇಕಾದ ಅಗತ್ಯವಿದೆ. ಒಂದು ಸಮೀಕ್ಷೆ ಪ್ರಕಾರ 2030 ರ ಒಳಗಾಗಿ ಶೇ. 75 ರಷ್ಟು ಮಣ್ಣು ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ.

ಹೀಗಾಗಿ ರೈತ ಬಾಂಧವರು ಮಣ್ಣಿನ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬಹುತೇಕ ರೈತರು  ಪ್ರತಿವರ್ಷ ಮಣ್ಣು ಪರೀಕ್ಷೆ ಮಾಡಿಸದೆ ತಮಗಿಷ್ಟವಾದ ಬೆಳೆಗಳನ್ನು ಬೆಳೆಯುತ್ತಾರೆ.  ಅಲ್ಲದೆ ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳ ಸರಿಯಾದ ಮಾಹಿತಿಯಿಲ್ಲದೇ ಅನಾವಶ್ಯಕವಾಗಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳು ನಾಶವಾಗಿ ಕ್ರಮೇಣ ಭೂಮಿಯು ಬರಡಾಗುತ್ತಿದೆ. ಅದಕ್ಕಾಗಿ ರೈತರು ತಮ್ಮ ಜಮೀನಿನ ಮಣ್ಣನ್ನು ಬಿತ್ತನೆಗೆ ಪೂರ್ವದಲ್ಲಿ ವೈಜ್ಞಾನಿಕವಾಗಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆ ವರದಿ ಆಧಾರದ ಮೇಲೆ ಬೆಳೆ ಆಯ್ಕೆ ಮತ್ತು ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು.  ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಇಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಕೊರತೆಯಿರುವ ಪೋಷಕಾಂಶಗಳ ನಿರ್ವಹಣೆ ಮಾಡಿ ಅಗತ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದರಿಂದ ಇಳುವರಿಜೊತೆಗೆ ಆರ್ಥಿಕ ದೃಷ್ಟಿಕೋನದಿಂದಲ್ಲದೇ ಮಾನವರ ಹಾಗೂ ಮಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕವಾಗಿದೆ. ಬೇಸಿಗೆಯ ಮಳೆಯ ನಂತರಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಬಹುಪಯೋಗಿ ಕೃಷಿ ಚಟುವಟಿಕೆಯಾದ ಮಾಗಿ ಉಳುಮೆಯಂತಹ ಸಾಂಪ್ರದಾಯಿಕ ಪದ್ದತಿಯನ್ನು ಇಳಿಜಾರಿಗೆ ಅಡ್ಡಲಾಗಿ ಕೈಗೊಳ್ಳುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಮಳೆ ನೀರನ್ನು ಸಂಗ್ರಹಿಸುವುದರಿಶದ ಅಲ್ಪಖರ್ಚಿನಲ್ಲಿ ಉತ್ತಮ ಫಸಲನ್ನು ತೆಗೆಯಬಹುದು.

ಇದರಿಂದ ಮಣ್ಣಿನ ಆರೋಗ್ಯಕಾಪಾಡುವುದರ ಮೂಲಕ ವಿಷಮುಕ್ತ ಕೃಷಿಯನ್ನು ಕೈಗೊಂಡು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯವರಾದ ಡಾ. ಶ್ರೀನಿವಾಸ ಬಿ.ವಿ.ಮಣ್ಣಿನ ಪರೀಕ್ಷೆ ಮತ್ತು ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಆಳಂದ ರಸ್ತೆಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಸಮೀಪದ ರೈತ ಸಂಪರ್ಕಕೇಂದ್ರವನ್ನು ಸಂಪರ್ಕಿಸಬಹುದು.