News

ಪ್ರಧಾನಮಂತ್ರಿ ಕಿಸಾನ್‌ ಮಾನ್‌-ಧನ್‌ ಯೋಜನೆಗೆ(ಪಿಎಂ-ಕೆಎಂವೈ) ಇಂದೇ ನೊಂದಣಿ ಮಾಡಿ

07 May, 2020 7:44 PM IST By:

ರೈತರ ಕಲ್ಯಾಣಕ್ಕಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಪರಿಚಯಿಸಿವೆ.  ರೈತರ ಹಿತಕ್ಕಾಗಿ ಪ್ರಧಾನಮಂತ್ರಿ ರೈತರ ಪಿಂಚಣೆ ಯೋಜನೆ, ರೈತರ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ,  ಕೃಷಿಭಾಗ್ಯ, ರೈತಸಿರಿ ಹೀಗೆ ಹಲವಾರು ಯೋಜನೆಗಳಲ್ಲಿ ರೈತರ ಪಿಂಚಣಿ ಯೋಜನೆಯೂ ಒಂದಾಗಿದೆ.

ಕಷ್ಟಪಟ್ಟು ಕೆಲಸ ಮಾಡಿದರೂ ರೈತರಿಗೆ ಅಗತ್ಯದಷ್ಟು ಸಂಪಾದನೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಭದ್ರತೆಯ ಯೋಜನೆ ಅತ್ಯಗತ್ಯ. ರೈತರ ಆದಾಯ ವೃದ್ಧಿಗೆ ಕೇಂದ್ರ ಸರಕಾರವು ನಾನಾ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿಯೇ ಪಿಂಚಣಿ ಯೋಜನೆಯನ್ನೂ ರೂಪಿಸಿದೆ.

ಈ ಯೋಜನೆ ಅಡಿ ರೈತರಿಗೆ ಪಿಂಚಣಿ ರೂಪದಲ್ಲಿ 60 ವರ್ಷ ವಯಸ್ಸು ತುಂಬಿದ ನಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾಸಿಕ ಕನಿಷ್ಠ 3000 ಪಿಂಚಣಿ ಸಿಗಲಿದೆ. ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಗರಿಷ್ಠ 2 ಎಕರೆ ಸಾಗುವಳಿ ಭೂಮಿ ಹೊಂದಿರುವ 18 ರಿಂದ 40 ವರ್ಷದ ಒಳಗಿನ ಎಲ್ಲ ರೈತರು  ನೋಂದಣಿ ಮಾಡಿಸಬಹುದು. ಒಂದು ವೇಳೆ ಫಲಾನುಭವ ಪಡೆಯಬೇಕಿದ್ದ ರೈತ ಸಾವನ್ನಪ್ಪಿದ್ದರೆ ಅವರ ಪತ್ನಿಗೆ ಶೇ. 50ರಷ್ಟು ಪ್ರಯೋಜನ ಸಿಗಲಿದೆ.  ಈಗಾಗಲೇ ಹಲವಾರು ರೈತರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಮಾಸಿಕ ಹಣ ವಯಸ್ಸಿಗೆ ತಕ್ಕಂತೆ

ನೋಂದಣಿ ಮಾಡಿಸಿದ ನಂತರ ವಯಸ್ಸಿನ ಆಧಾರದ ಮೇಲೆ 55 ರಿಂದ 200 ರುಪಾಯಿಯವರೆಗೆ ಮಾಸಿಕ ಹಣವನ್ನು ಅವರ ವಯಸ್ಸಿಗೆ ತಕ್ಕಂತೆ ಕಟ್ಟಬೇಕು. ಕಟ್ಟಿದ ರೈತರಿಗೆ ಅರವತ್ತು ವರ್ಷದ ನಂತರ ಮಾಸಿಕ ಪಿಂಚಣಿ ಹಣವನ್ನು ನೀಡಲಾಗುವುದು.  ಇದಲ್ಲದೆ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ ಸಹ ಹಣವನ್ನು ಪಾವತಿ ಮಾಡಬಹುದು. ರೈತರು ಪಾವತಿಸುವ ಹಣಕ್ಕೆ ಸಮನಾಗಿ ಕೇಂದ್ರ ಸರ್ಕಾರವು ಪಿಂಚಣಿ ನಿಧಿ ಪಾವತಿಸುತ್ತದೆ.  ಅಂದರೆ ರೈತರು ಠೇವಣಿ ಇರಿಸುವ ಕಂತಿಗೆ ಸಮನಾದ ಕಂತು ಮೊತ್ತ ಸರ್ಕಾರ ಜಮಾ ಮಾಡುತ್ತದೆ. ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ನೋಂದಣಿ ಮಾಡಿಸಲು ಎಲ್ಲಾ ನಾಗರಿಕ ಸೇವಾ ಕೇಂದ್ರಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ ನೊಂದಣಿ ಮಾಡಲು ರೈತರು ನಾಗರಿಕ ಸೇವಾ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಬಹುದು.
 ರೈತರಿಗೆ 60 ವರ್ಷದ ನಂತರ ಪಾವತಿಸಿದ ಹಣ ಹಾಗೂ ಅದರ ಬಡ್ಡಿ ಸಿಗಲಿದೆ. ಯಾರಾದರೂ ಮಧ್ಯದಲ್ಲಿಯೇ ಯೋಜನೆಯಿಂದ ಹೊರ ಬರಲು ಬಯಸಿದರೆ ಠೇವಣಿ ಮೊತ್ತ ಮತ್ತು ಬಡ್ಡಿದರ ಪಡೆಯುತ್ತಾರೆ.

ರೈತ ಸಾವನ್ನಪ್ಪಿದರೆ?  ಒಂದು ವೇಳೆ 60 ವರ್ಷಗಳ ಒಳಗಾಗಿ ರೈತ ಸಾವನ್ನಪ್ಪಿದರೆ ಪತ್ನಿಗೆ ಪ್ರತಿ ತಿಂಗಳು ರೂ. 1500 ಪಿಂಚಣಿ ಸಿಗಲಿದೆ. 60 ವರ್ಷಗಳ ನಂತರ ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 3 ಸಾವಿರ ರೂಪಾಯಿ ಸಿಗಲಿದೆ.

ದಾಖಲಾತಿಗಳೇನು? - ಆರ್ಧಾ ಕಾರ್ಡ್ - ಅರ್ಜಿ ಸಲ್ಲಿಸುವ ರೈತರಿಗೆ ಆರ್ಧಾ ಕಾರ್ಡ್ ಇರುವುದು ಅವಶ್ಯಕ. - ಆದಾಯ ದಾಖಲಾತಿಯನ್ನು ರೈತರು ಒದಗಿಸಬೇಕಾಗುತ್ತದೆ. ಕೃಷಿ ಭೂಮಿ ವಿವರ ನೀಡಬೇಕು. - ಉಳಿತಾಯ ಖಾತೆ/ಜನ ಧನ್ ಖಾತೆ- ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. - ರೈತರು ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು. - ರೇಷನ್ ಕಾರ್ಡ್, ಎರಡು ಫೊಟಟೋಗಳು ಬೇಕು.

ಹೆಚ್ಚಿನ ಮಾಹಿತಿಗಾಗಿ ರೈತರು ಕಿಸಾನ್ ಕಾಲ್ ಸೆಂಟರ್ ನಂಬರ್ 1800-180-1551 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.