News

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರೆಗೆ 50 ಸಾವಿರ ಬಹುಮಾನ

05 January, 2021 8:20 PM IST By:

ನೆಲಜಿ ಫಾರ್ಮಸ್ ಮತ್ತು ರಿಕ್ರಿಯೇಷನ್ ಅಸೋಷಿಯೇಷನ್ ವತಿಯಿಂದ ಎರಡನೇ ವರ್ಷದ ರಾಜ್ಯ ಮಟ್ಟದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಜ.9ರಂದು ಕೊಡಗಿನ ನೆಲಜಿ ಅಂಬಲ ಮೈದಾನದಲ್ಲಿ ಏರ್ಪಡಿಸಲಾಗಿದೆ.

ವಿಜೇತರಾದವರಿಗೆ 0.22 ರೈಫಲ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ ನೀಡಲಾಗುವುದು.

12 ಬೋರ್ ಬಂದೂಕು ವಿಭಾಗದಲ್ಲಿ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ, ತೃತೀಯ ಬಹುಮಾನ 5 ಸಾವಿರ ನೀಡಲಾಗುವುದು.

ಮಡಿಕೇರಿ ತಾಲ್ಲೂಕು ನಾಪೋಕ್ಲು ನೆಲಜಿ ಗ್ರಾಮದಲ್ಲಿ ನಡೆಯುವ ಸ್ಪರ್ಧೆಯಲ್ಲಿ 0.22 ರೈಫಲ್ ಹಾಗೂ 12 ಬೋರ್ ಬಂದೂಕು ಬಳಸಬಹುದು. ಬಂದೂಕು ಬಳಸುವವರು ರಾಷ್ಟ್ರೀಯ ಪರವಾನಗಿ (ನ್ಯಾಷನಲ್ ಲೈಸನ್ಸ್) ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380303387, 9448326055 ಗೆ ಸಂಪರ್ಕಿಸಲು ಕೋರಲಾಗಿದೆ.