News

Shocking news: ತಾಳೆ ಎಣ್ಣೆ ರಫ್ತು ನಿಷೇಧಿಸಿದ ಇಂಡೊನೇಷ್ಯಾ! ಅಡುಗೆ ಎಣ್ಣೆ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ!

26 April, 2022 11:02 AM IST By: Kalmesh T
Shocking news: Indonesia bans export of palm oil The possibility of further increase in the price of cooking oil!

ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತಿಗೆ ನಿಷೇಧ ವಿಧಿಸಿರುವುದರಿಂದ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಖರೀದಿದಾರ ರಾಷ್ಟ್ರಗಳಿಗೆ ಪರ್ಯಾಯ ಆಯ್ಕೆಗಳು ಸೀಮಿತವಾಗಿವೆ. ಈ ಕೊರತೆಯನ್ನು ನಿಭಾಯಿಸುವುದು ಕಷ್ಟ ಎಂದು ತಜ್ಞರು ಹೇಳಿದ್ದಾರೆ.

ತಾಳೆ ಎಣ್ಣೆ ರಫ್ತಿನ ಮೇಲೆ ಇಂಡೋನೇಷ್ಯಾ ದಿಢೀರ್ ನಿಷೇಧ ಹೇರಿದೆ. ಇದರಿಂದಾಗಿ ಜಾಗತಿಕ ಅಡುಗೆ ಎಣ್ಣೆ ಆಮದುದಾರ ರಾಷ್ಟ್ರಗಳಿಗೆ ಪರ್ಯಾಯ ಮಾರ್ಗಗಳು ಸೀಮಿತವಾಗಿವೆ. ಭಾರತದಲ್ಲಿ ಅಡುಗೆ ಎಣ್ಣೆ ದರ ಶೇ.15 ಹೆಚ್ಚಳವಾಗುವ ಸಾಧ್ಯತೆ ಇದೆ. ಖಾದ್ಯ ತೈಲ ಬಳಕೆ ಕಡಿಮೆ ಮಾಡಲು ಮಲೇಷ್ಯಾ ಸಲಹೆ ನೀಡಿದೆ. ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತಿಗೆ ನಿಷೇಧ ವಿಧಿಸಿರುವುದರಿಂದ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಖರೀದಿದಾರ ರಾಷ್ಟ್ರಗಳಿಗೆ ಪರ್ಯಾಯ ಆಯ್ಕೆಗಳು ಸೀಮಿತವಾಗಿವೆ. ಈ ಕೊರತೆಯನ್ನು ನಿಭಾಯಿಸುವುದು ಕಷ್ಟ ಎಂದು ತಜ್ಞರು ಹೇಳಿದ್ದಾರೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ಇಂಡೊನೇಷ್ಯಾ ರಫ್ತು ನಿಷೇಧಿಸಿದ್ದೇಕೆ?

ಜಗತ್ತಿನಲ್ಲಿಯೇ ಅತಿ ಹೆಚ್ಚು ತಾಳೆ ಎಣ್ಣೆಯನ್ನು ಉತ್ಪಾದಿಸುವ ಇಂಡೊನೇಷ್ಯಾದಲ್ಲೇ ತಾಳೆ ಎಣ್ಣೆಗೆ ಕೊರತೆ ಉಂಟಾಗಿದೆ. ಆದ್ದರಿಂದ ರಫ್ತನ್ನು ನಿಷೇಧಿಸಲಾಗುತ್ತಿದೆ ಎಂದು ಅಲ್ಲಿನ ಅಧ್ಯಕ್ಷ ಜೊಕೊ ಜೊಕೊಯ್‌ ತಿಳಿಸಿದ್ದಾರೆ. ಏಪ್ರಿಲ್‌ 28ರಿಂದ ನಿಷೇಧ ಜಾರಿಯಾಗಲಿದೆ. ಎರಡನೆಯದಾಗಿ ಇಂಡೊನೇಷ್ಯಾ ಮತ್ತು ಮಲೇಷ್ಯಾ ಜೈವಿಕ ಇಂಧನದ ಜತೆಗೆ ತಾಳೆ ಎಣ್ಣೆ ಮಿಶ್ರಣವನ್ನು ಇತ್ತೀಚೆಗೆ ಕಡ್ಡಾಯಗೊಳಿಸಿವೆ. ಹೀಗಿದ್ದರೂ, ತಾಳೆ ಎಣ್ಣೆ ದಾಸ್ತಾನನ್ನು ಹೆಚ್ಚು ದಿನ ಇಡಲಾಗುವುದಿಲ್ಲ, ಹೀಗಾಗಿ ಇಂಡೊನೇಷ್ಯಾ ದೀರ್ಘಕಾಲ ತಾಳೆ ಎಣ್ಣೆ ರಫ್ತು ನಿಷೇಧಿಸಲಿಕ್ಕಿಲ್ಲ ಎನ್ನುತ್ತಾರೆ ತಜ್ಞರು.

ಈ ರಾಜ್ಯದಲ್ಲಿ 4.3 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ ಸರ್ಕಾರಿ ಸಂಸ್ಥೆಗಳು..!

“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ

ಇಂಡೊನೇಷ್ಯಾ ಜಗತ್ತಿನ ಎರಡನೇ ಅತಿ ದೊಡ್ಡ ತಾಳೆ ಎಣ್ಣೆ ರಫ್ತುದಾರ ರಾಷ್ಟ್ರ

ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವು ಮಲೇಷ್ಯಾದಿಂದ ಹೆಚ್ಚುವರಿ ತಾಳೆ ಎಣ್ಣೆ ಖರೀದಿಸಬಹುದಾದರೂ, ಇಂಡೊನೇಷ್ಯಾ ಜಗತ್ತಿನ ಎರಡನೇ ಅತಿ ದೊಡ್ಡ ತಾಳೆ ಎಣ್ಣೆ ರಫ್ತುದಾರ ರಾಷ್ಟ್ರವಾಗಿರುವುದರಿಂದ ಈ ಕೊರತೆಯನ್ನು ಭರ್ತಿ ಮಾಡುವುದು ಕಷ್ಟಕರ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಭಾರತದ ಒಟ್ಟು ತೈಲ ಆಮದಿನಲ್ಲಿ ಸುಮಾರು ಅರ್ಧದಷ್ಟು ಇಂಡೊನೇಷ್ಯಾದಿಂದ ಬರುತ್ತಿತ್ತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಶೇ.80ರಷ್ಟು ಆಮದನ್ನು ಇಂಡೊನೇಷ್ಯಾದಿಂದ ಮಾಡುತ್ತಿತ್ತು.

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಖಾದ್ಯ ತೈಲ ಆಮದುದಾರ ರಾಷ್ಟ್ರವಾಗಿದ್ದು, ದರಗಳು ಶೇ.5ರಷ್ಟು ಹೆಚ್ಚಳವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಏರಿಕೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಖಾದ್ಯ ತೈಲ ದರಗಳು ದಾಖಲೆಯ ಮಟ್ಟದಲ್ಲಿಜಿಗಿದಿತ್ತು.

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ಈಗಾಗಲೇ ರಷ್ಯಾ-ಉಕ್ರೇನ್‌ ಸಮರದ ಪರಿಣಾಮ ಖಾದ್ಯ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇಂಡೊನೇಷ್ಯಾದ ರಫ್ತು ನಿಷೇಧ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್‌ ಎಣ್ಣೆ ದರ ಶೇ.15ರಷ್ಟು ಏರಿಕೆ ನಿರೀಕ್ಷಿಸಲಾಗಿದೆ. ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತಿನಿಂದ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು, ಖಾದ್ಯ ತೈಲ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಮಲೇಷ್ಯಾ ಸಲಹೆ ನೀಡಿದೆ. ಖಾದ್ಯ ತೈಲ ರಫ್ತುದಾರ ಮತ್ತು ಆಮದುದಾರ ರಾಷ್ಟ್ರಗಳು ತಾತ್ಕಾಲಿಕವಾಗಿ ತಮ್ಮ ಆದ್ಯತೆಗಳನ್ನು ಬದಲಿಸುವುದು ಮತ್ತು ಬಳಕೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ಮಲೇಷ್ಯಾ ತಿಳಿಸಿದೆ.

ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್‌ ಗಿಫ್ಟ್‌ ನೀಡಿದ ಸಿಎಂ ಬೊಮ್ಮಾಯಿ..!

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!