News

Non-veg ಪ್ರಿಯರಿಗೆ Shock! ದರ ಹೆಚ್ಚಿಸಿದ ಕುಕ್ಕುಟೋದ್ಯಮ

23 March, 2022 2:56 PM IST By: Kalmesh T
Shock for non-veg lovers! Rate increased cookout

ಕೊರೋನಾ ಹಾವಳಿಯಿಂದ ಬೆದರಿದ್ದ ಉದ್ಯಮ, ಎರಡು ಕೊರೋನಾ ಅಲೆಗಳಲ್ಲಿ ನಷ್ಟ ಅನುಭವಿಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿತ್ತು. ನಂತರ 3ನೇ ಅಲೆಯಲ್ಲಿ Lockdown​ ಭಯದಲ್ಲಿ ಕೋಳಿ ಉತ್ಪಾದನೆಯನ್ನೇ ಕೈಬಿಟ್ಟಿದ್ದರು. ಆದರೆ ಈಗ ಅದೇ ಉದ್ಯಮ ಮತ್ತೆ ಗರಿಗೆದರಿ ನಿಂತಿದೆ. ಜೊತೆಗೆ ಬೆಲೆ ಏರಿಕೆ ಮೂಲಕ Non veg ಪ್ರಿಯರಿಗೆ ಶಾಕ್​ ನೀಡುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಕುಕ್ಕುಟೋದ್ಯಮವೊಂದು ಬೃಹತ್​ ಉದ್ದಿಮೆಯಾಗಿ ಬೆಳೆದು ನಿಂತಿದೆ, ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಕೋಳಿ ಫಾರಂಗಳಿದ್ದು ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. 

ಇದನ್ನು ಓದಿರಿ:

Zero Budget Natural Farming! #ರಾಸಾಯನಿಕ ಮುಕ್ತ ಕೃಷಿ! ಕೇಂದ್ರ ಸರ್ಕಾರದಿಂದ ದೊಡ್ಡ ಸಹಾಯ?

ಇಲ್ಲಿ ಎಲ್ಲಾ ತರದ ಕೋಳಿಗಳನ್ನು ಉತ್ಪಾದನೆ ಮಾಲಾಗುತ್ತದೆ. ಜೊತೆಗೆ ಹೊರ ರಾಜ್ಯಗಳು ಸೇರಿದಂತೆ ಹೊರ ದೇಶಗಳಿಗೂ ಇಲ್ಲಿಂದ chicken ಹಾಗೂ ಮೊಟ್ಟೆಯನ್ನು ರಫ್ತು ಮಾಡಲಾಗುತ್ತಿದೆ. ಇಂಥ ಉದ್ಯಮ ಕಳೆದ 3-4 ತಿಂಗಳಿಂದ Corona Lockdown ಭಯದಲ್ಲಿ ಕೋಳಿ ಉತ್ಪಾದನೆಯೇ ಕಡಿಮೆಯಾಗಿತ್ತು. ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹಾಕಿ ಕಾರ್ಯಕ್ರಮಗಳು, ಜಾತ್ರೆ, ಹಬ್ಬ ಹರಿದಿನಗಳಿಗೂ ನಿರ್ಬಂಧ ಹಾಕಿದರ ಪರಿಣಾಮ ಕೋಳಿ ಉತ್ಪಾದನೆ ಜೊತೆಗೆ ಬೇಡಿಕೆಯೂ ಕಡಿಮೆಯಾಗಿತ್ತು.

ಇನ್ನಷ್ಟು ಓದಿರಿ:

Salary hike:ಸರ್ಕಾರಿ ನೌಕರರಿಗೆ ಬಂಪರ್‌..ಏಪ್ರೀಲ್‌ 1ರಿಂದ ಮೂಲ ವೇತನದಲ್ಲಿ 10% ಹೆಚ್ಚಳ

ದರೆ, ಈಗ ಲಾಕ್ ಡೌನ್​ ತೆರವಾದ ನಂತರ ಎಲ್ಲವೂ ಮಾಮೂಲಿನಂತೆ ನಡೆಯಲು ಆರಂಭಿಸಿದರ ಪರಿಣಾಮ ಮತ್ತೆ ಚಿಕನ್​ ಬೆಲೆ ಏರಿಕೆ ಕಂಡಿದೆ, ಇದು ಕೋಳಿ ಉದ್ಯಮಿಗಳಿಗೆ ಒಂದು ರೀತಿಯ ಸಂತಸದ ವಿಚಾರ ಜೊತೆಗೆ ಸಂಕಷ್ಟದ ದಿನಗಳು ಕೂಡಾ ಯಾಕಂದ್ರೆ ಇವತ್ತಿನ ಬೆಲೆ ಏರಿಕೆ ನಡುವೆ ಬೆಲೆ ಹೆಚ್ಚಾದರೂ ಅಷ್ಟೇನು ಸಂತೋಷ ಪಡುವಂತಿಲ್ಲ ಎನ್ನುವುದು ಉದ್ಯಮದಾರರ ಮಾತು.

ಇನ್ನು ಕೋಳಿ ಸಾಕಾಣಿಕೆದಾರರೂ ಕೊರೋನಾ ಕಾಲದಲ್ಲಿ ಕೋಳಿ ಉದ್ಯಮ ನಷ್ಟವಾಗಿ ಹೋಗಿತ್ತು. ಉದ್ಯಮ ನಂಬಿದ್ದವರು ಇನ್ನೇನು ನಮ್ಮ ಕಥೆ ಮುಗಿದೇ ಹೊಯ್ತು ಎನ್ನವಷ್ಟರ ಮಟ್ಟಿಗೆ ಕುಕ್ಕುಟೋಧ್ಯಮ ನೆಲಕಚ್ಚಿತ್ತು. ಆದರೆ, ಕೊರೊನಾ ಮೂರನೇ ಅಲೆ ಅಷ್ಟೇನು ಪರಿಣಾಮ ಬೀರದ ಪರಿಣಾಮ ಕೆಲವೇ ದಿನಗಳಲ್ಲಿ ಮತ್ತೆ ಚೇತರಿಕೆ ಕಂಡಿದೆ. ಕುಕ್ಕುಟೋಧ್ಯಮ ಈಗ ದಾಖಲೆ ಬರೆಯಲು ನಿಂತಿದೆ.

ಮತ್ತಷ್ಟು ಓದಿರಿ:

ಭಾರತದ ಹೊಸ ಮೈಲಿಗಲ್ಲು! 400 Billion Dollar ಸಾಧನೆ

ಒಂದು ಕೆಜಿ ಚಿಕನ್​ ಬೆಲೆ ಈಗ   250ಕ್ಕೆ ಏರಿಕೆಯಾಗಿದ್ರೆ, ಮೊಟ್ಟೆ ಬೆಲೆ ಕೂಡ 5 ರೂಪಾಯಿಗೆ ಏರಿಕೆಯಾಗಿದೆ. ಇದು ಉದ್ಯಮ ನಂಬಿದವರಲ್ಲಿ ಸಂತಸ ತಂದಿದೆ. ಆದರೆ, ಚಿಕನ್​ ಹಾಗೂ ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆ Shock​ ಶುರುವಾಗಿದೆ. ಸದ್ಯ ಮಾರುಟಕ್ಟೆಯಲ್ಲಿ ತರಕಾರಿ ಬೆಲೆಯ ಜೊತೆಗೆ ಮಾಂಸದ ಬೆಲೆ ಕೂಡಾ ಏರಿಕೆಯಾಗಿರೋದು ಗ್ರಾಹಕರಿಗೆ ಹೊರೆಯಾಗುತ್ತಿದೆ.

ಒಟ್ಟಾರೆ  ಕೊರೋನಾದಿಂದ ಸಂಕಷ್ಟದಲ್ಲಿದ್ದ ಕುಕ್ಕುಟೋದ್ಯಮ ಈಗ ಕೊರೋನಾ  ನಂತರದಲ್ಲಿ ಮತ್ತೆ ಮೇಲೆದ್ದು ನಿಂತಿದೆ.

ರೈತರ ಭೂಮಿ‌ ಸ್ವಾಧೀನ ವೇಳೆ 4 ಪಟ್ಟು ಪರಿಹಾರ!