News

ಜುಲೈ 20 ರಿಂದ ಡಿಡಿ ಚಂದನ (DD chandana) ವಾಹಿನಿಯಲ್ಲಿ ಹೈಸ್ಕೂಲ್ ಮಕ್ಕಳಿಗೆ ಪಾಠ

19 July, 2020 11:54 AM IST By:

ಕೊರೊನಾ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲು, ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಇದೇ ಜುಲೈ 20 ರಿಂದ ಚಂದನ ವಾಹಿನಿಯಲ್ಲಿ ಇ ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ಜುಲೈ 20 ರಿಂದ 31 ರವರೆಗೆ ಪಾಠ ಮಾಡುವ ವಿಷಯಗಳ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ.

ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (DSERT) ಯಿಂದ ಈ ಕಾರ್ಯಕ್ರಮ ರೂಪುಗೊಂಡಿದೆ. 08 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದು.

ಪ್ರತಿ ಅರ್ಧ ಗಂಟೆಗೆ ಒಂದು ವಿಷಯ ಬೋಧನೆ ಮಾಡಲಾಗುವುದು. ದಿನವೊಂದಕ್ಕೆ ನಾಲ್ಕು ಗಂಟೆಗಳಲ್ಲಿ ಎಂಟು ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ.ಮೂರು ವಿಷಯಗಳ ಬೋಧನೆ ನಂತರ ಅರ್ಧಗಂಟೆ ವಿರಾಮ ನೀಡಲಾಗುವುದು.

ಪ್ರತಿದಿನ ಬೆಳಗ್ಗೆ 9.30 ರಿಂದ 11ರವರೆಗೆ ಹಾಗೂ 11.30ರಿಂದ 12 ಗಂಟೆಯವರೆಗೆ ತರಗತಿ ನಡೆಸಲಾಗುವುದು. ಮಧ್ಯಾಹ್ನ 3 ರಿಂದ 4.30ರವರೆಗ ಸಂಜೆ 5 ರಿಂದ 5-30ರವರೆಗೆ ಪ್ರಸಾರ ಮಾಡಲಾಗುವುದು.

ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ವಿಡಿಯೋ...ಪಾಠಗಳನ್ನು ಶಿಕ್ಷಣ ಇಲಾಖೆ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ.

Read More: ಜುಲೈ31ರವರೆಗೆ ಶಿಕ್ಷಕರಿಗೆ (Teachers)ವರ್ಕ್ ಫ್ರಮ್‌ ಹೋಂ