News

ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜಿನಿಂದ ಸರಣಿ ಅಪಘಾತ, 30ಕ್ಕೂ ಹೆಚ್ಚು ವಾಹನಗಳು ಜಖಂ!

19 December, 2022 12:03 PM IST By: Hitesh
Serial accident due to fog on Haryana's national highway, more than 30 vehicles damaged!

ಹರಿಯಾಣದ ಕರ್ನಾಲ್ ರಾಷ್ಟ್ರೀಯ ಹೆದ್ದಾರಿ- 44ರಲ್ಲಿ ಮಂಜಿನಿಂದಾಗಿ ಭಾನುವಾರ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದು, 30ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಮೂರೂ  ಪ್ರತ್ಯೇಕ ಸ್ಥಳಗಳಲ್ಲಿ 30 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಇದರಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.  

ಕುಟೆಲ್ ಮೇಲ್ಸೇತುವೆ ಬಳಿ ಮೊದಲ ಅಪಘಾತ ಸಂಭವಿಸಿದೆ. ಈ ವೇಳೆ 15 ರಿಂದ 16 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಟ್ರಕ್‌ಗಳು, ಕಾರುಗಳು, ಟ್ರ್ಯಾಕ್ಟರ್ ಟ್ರ್ಯಾಲಿಗಳು ಮತ್ತು ಬಸ್‌ಗಳು ಪರಸ್ಪರ ಅಪಘಾತಕ್ಕೀಡಾಗಿ
ರುವುದು ವರದಿ ಆಗಿದೆ.   

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ದುಪ್ಪಟ್ಟು ಹೆಚ್ಚಳ!

ಸರಣಿ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗದಲ್ಲಿ ತಾಸುಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೇ ಒಮ್ಮಿಂದೊಮ್ಮೆಲೇ ಅಪಘಾತಗಳು ಸಂಭವಿಸಿದ್ದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

 ಸರಣಿ ಅಪಘಾತದಿಂದ ಗಾಯಾಳುಗಳ ನರಳಾಡುವುದು ದೂರದವರೆಗೆ ಕೇಳಿಸುತ್ತಿತ್ತು. ಅಲ್ಲದೇ ಹರಿಯಾಣ ರಸ್ತೆ ಮಾರ್ಗದಲ್ಲಿ ಎರಡು ಬಸ್‌ಗಳು ಕೂಡ ಅಪಘಾತಕ್ಕೀಡಾಗಿವೆ. ಇದರಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಇನ್ನು ಡಸ್ಟರ್ ಕಾರೊಂದು ಹರಿಯಾಣ ರೋಡ್‌ವೇಸ್ ಬಸ್‌ನಡಿಗೆ ಸಿಲುಕಿದೆ. ಸರಣಿ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಅವಶೇಷಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಮತ್ತೊಂದೆಡೆ, ಮಧುಬನ್ ಬಳಿ ಎರಡನೇ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 10 ರಿಂದ 12 ವಾಹನಗಳು ಜಕ್ಕಂ ಆಗಿವೆ. ಅಪಘಾತದಲ್ಲಿ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಕರ್ನಾಲ್ ಟೋಲ್ ಬಳಿಯೂ ಅಪಘಾತ ಸಂಭವಿಸಿದ್ದು, ಮಂಜಿನಿಂದಾಗಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.  

ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹವಾಮಾನ ಬದಲಾಗಿದೆ. ಮುಂಜಾನೆಯ ಸಮಯದಲ್ಲಿ ಮಂಜುಮುಸುಕಿದ ವಾತಾವರಣ ಹೆಚ್ಚಾಗುತ್ತಿರುವುದರಿಂದ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆಯೂ ಮಂಜು ಹೆಚ್ಚಾಗಿದ್ದ ಸಂದರ್ಭದಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದರೂ, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.   

Sugarcane Growers| ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ!