News

ನಿರ್ವಹಣಾ ವೆಚ್ಚವಿಲ್ಲದೆ ಉಪಯೋಗಿಸುವ ಬೀಜ ಸ್ವಚ್ಛ ಮಾಡುವ ಯಂತ್ರ (Seed Separator)

14 September, 2020 1:57 PM IST By:

ಈ ಯಂತ್ರದಿಂದ ಸೋಯಾದಂತಹ ದುಂಡನೆಯ ಬೀಜಗಳನ್ನು, ಕಸಕಡ್ಡಿ ಹಾಗೂ ಒಡಕಿನ ಬೀಜ ಇಲ್ಲದಂತೆ ಸ್ವಚ್ಛಗೊಳಿಸುವುದು. ಇದು ಗುರುತ್ವಾಕರ್ಷಣೆಯ ಆಧಾರದ ಮೇಲೆ ಯಾವುದೇ ನಿರ್ವಹಣಾ ವೆಚ್ಚವಿಲ್ಲದೇ ಕಾರ್ಯನಿರ್ವಹಿಸುವುದು. ಜೊತೆಗೆ ಶೇ 100% ರಷ್ಟು ಉಪಯುಕ್ತ ಮತ್ತು ಅನುಪಯುಕ್ತ ಬೀಜ ಹಾಗೂ ಜಡವಸ್ತುಗಳನ್ನು ಬೇರ ಪಡಿಸುವ ಸರಳ ಉಪಕರಣವಾಗಿದೆ.

ಇದರ ನಿಜವಾದ ಸಾಮಥ್ರ್ಯವು ಬೀಜಗಳ ಆಕಾರ ಮತ್ತು ನುಣುಪು ಇದ್ದ ಬೀಜಗಳು ಅತೀ ವೇಗವಾಗಿ ಈ ಯಂತ್ರದ ಹೊರ ಮೇಲ್ಮೈ ಸುತ್ತ ಇರುವ ಸುರುಳಿಯ ಕ್ಷೇತ್ರದಲ್ಲಿ ರಬಸವಾಗಿ ಚಲಿಸಿ ಕೆಳಗಡೆ ಇರುವ outlet ನಲ್ಲಿ  ಬೀಜ ಸಂಗ್ರಹಣೆಯಾಗುತ್ತದೆ. ಅದೇ ರೀತಿ ಒಡೆದ ಬೀಜ / ಕಾಳು, ಸಣ್ಣ ಗಾತ್ರದ ಬೀಜ, ಕಸಕಡ್ಡಿ, ಕಲ್ಲು-ಮಣ್ಣು ಇವುಗಳ ಆಕಾರ ನುಣುಪು ಇಲ್ಲದ ಕಾರಣ ಈ ವಸ್ತುಗಳು ನಿಧಾನವಾಗಿ ಯಂತ್ರದ ಒಳಪದರಿನಿಂದ ಚಲಿಸಿ ಕೆಳಗಡೆ ಇರುವ ಇನ್ನೊಂದು outlet ನಲ್ಲಿ ಶೇಖರಣೆಯಾಗುತ್ತದೆ. ಈ ಯಂತ್ರದಲ್ಲಿ ಇದರ ಸಾಮಥ್ರ್ಯದ ಬೀಜಗಳ ಆಕಾರ ಮತ್ತು ಆ ಬೀಜಗಳು ತನ್ನಷ್ಟಕ್ಕೆ ತಾನೇ ಸುತ್ತುತ್ತ ಒಡುವ ಸಾಮಥ್ರ್ಯದ ಮೇಲೆ ನಿರ್ಧಾರವಾಗುತ್ತದೆ. ಈ ಯಂತ್ರವನ್ನು  ಸೊಯಾಬೀನ್, ತೊಗರಿ, ಹೆಸರು, ಉದ್ದು ಮತ್ತು ಜೋಳ ಮುಂತಾದ ಬೆಳೆಗಳ ಬೀಜಗಳನ್ನು ವರ್ಗೀಕರಣಕ್ಕಾಗಿ ಉಪಯೋಗಿಸಬಹುದು. ಈ ಯಂತ್ರವನ್ನು ಬೀದರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ರೈತರು ಉಪಯೋಗಿಸುತ್ತಿದ್ದಾರೆ.

ಈ ಯಂತ್ರದ ಉಪಯೋಗಗಳು

  • ವಿದ್ಯುತ್ತಿನ ಸಂಪರ್ಕದ ಅವಶ್ಯಕತೆವಿಲ್ಲ.
  • ಬೀಜಗಳನ್ನು ಕಸಕಡ್ಡಿ, ಮಣ್ಣು ಮತ್ತು ಖಂಡಾದ ಧಾನ್ಯಗಳಿಂದ ಬೇರ್ಪಡಿಸುತ್ತದೆ.
  • ಗಾಳಿ ಇರದೇ ಇದ್ದರೂ ಬೀಜಗಳನ್ನು ಸ್ವಚ್ಚಗೊಳಿಸುವುದು ಪ್ರತ್ಯೇಕವಾಗಿ ತೂರುವ ಹಾಗೂ ಕೇರುವ ಅವಶ್ಯಕತೆ ಇಲ್ಲ.
  • ಕಡಿಮೆ ತೂಕವಿರುವುದರಿಂದ ಬೇಕಾದ ಕಡೆ ಒಯ್ಯಬಹುದು.
  • ಯಾವುದೇ ಇಂಧನ ಮತ್ತು ವಿದ್ಯುತ್ತಿನ ಅವಶ್ಯಕತೆ ಇಲ್ಲ
  • ಕೇವಲ 2 ಕೆಲಸ ಆಳುಗಳು ಈ ಉಪಕರಣದ ನಿರ್ವಹಣೆಗೆ ಸಾಕು
  • ಹಗಲು ರಾತ್ರಿಯನ್ನದೇ ಈ ಯಂತ್ರವನ್ನು ಬಳಕೆ ಮಾಡಬಹುದು
  • ಗುಣಮಟ್ಟದ ಹಾಗೂ ಶ್ರೇಣಿಕರಿಸಿದೆ. ಶುದ್ಧವಾದ ಬೀಜ /ಧಾನ್ಯ ಪಡೆಯಬಹುದು
  • ಸ್ವಚ್ಛ / ವರ್ಗಿಕರಣದ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಉತ್ತಮ ಬೆಲೆ ಸಿಗುತ್ತದೆ
  • ಸ್ವ ಸಹಾಯ ಸಂಘದವರಿಗೆ /ನಿರುದ್ಯೋಗ ಯುವಕ / ಯುವತಿಯವರಿಗೆ ಉದ್ಯೋಗ ಅವಕಾಶ
  • ಈ ಯಂತ್ರದ ಸಾಮಥ್ರ್ಯ : 4 ರಿಂದ 5 ಕ್ವಿಂಟಲ್ ಪ್ರತಿ ಗಂಟೆಗೆ.

   

ಲೇಖಕರು:

ಡಾ. ಲೋಕೇಶ ಕೆ.

ಸಹಾಯಕ ಪ್ರಾಧ್ಯಾಪಕರು (ಬೀಜ ವಿಜ್ಞಾನ ವಿಭಾಗ)

ಕೃಷಿ ಮಹಾವಿದ್ಯಾಲಯ, ಕಲಬುರಗಿ -585103

ಮೊಬೈಲ್ ನಂ. 9902050322 / 8618065343