News

ಸಂಕ್ರಾಂತಿ ಹಬ್ಬದಿನದಂದೇಕೆ ಎಳ್ಳು ಬೆಲ್ಲೆ ಸವಿಯುತ್ತಾರೆ. ಇದರ ಹಿನ್ನೆಲೆ ನಿಮಗೆ ಗೊತ್ತೇ ?ಇಲ್ಲಿದೆ ಮಾಹಿತಿ.

14 January, 2021 8:33 PM IST By:
sankranti special

 ಸಂಕ್ರಾಂತಿ ಹಬ್ಬವೆಂದರೆ ವಿಶೇಷವಾಗಿ ಹಿಂದೂಗಳಲ್ಲಿ ಸಡಗರ ಸಂಭ್ರಮ ಮನೆ ಮಾಡುತ್ತದೆ. ಪ್ರತಿಯೊಬ್ಬರು ಕಿರಿಯರು ಹಿರಿಯೆರೆನ್ನದೆ ಬಂಧು ಬಳಗದವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಎಳ್ಳು ಹಂಚಿ ಶುಭ ಕೋರುತ್ತಾರೆ.   ಸಂಕ್ರಾಂತಿ ಹಬ್ಬದ ಆಚರಣೆಯ ಪ್ರಕಾರ ಎಳ್ಳು ಬೆಲ್ಲವನ್ನು ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಳ್ಳುವುದರ ಮೂಲಕ ಸವಿಯಲಾಗುವುದು. ಆದರೆ ಎಳ್ಳು ಬೆಲ್ಲೆವೇಕೆ. ಇದರ ವೈಜ್ಞಾನಿಕ ಹಿನ್ನೆಲೆ ಏನಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಎಳ್ಳು ಬೆಲ್ಲದ ಹಿಂದಿದೆ ವೈಜ್ಞಾನಿಕ ಕಾರಣ : 

ಎಳ್ಳು ಬೆಲ್ಲದ ಸಂಯೋಜನೆಯು ಪೂರ್ವಜರ ಕಾಲದಿಂದಲೂ ರೂಢಿಯಲ್ಲಿ ಇರುವ ಒಂದು ವಿಧ. ಇದರಲ್ಲಿ ಇರುವ ವೈಜ್ಞಾನಿಕ ಮತ್ತು ಧಾರ್ಮಿಕ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಶುಭವನ್ನು ತರುವುದು ಎನ್ನುವ ನಂಬಿಕೆಯಿದೆ. ಸಂಕ್ರಾಂತಿ ವೇಳೆ ಮೈಕೊರೆಯುವ ಚಳಿ (Winter) ಇರುತ್ತದೆ. ಈ ಹವೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಎಳ್ಳು ಸಹಕಾರಿಯಾಗುತ್ತದೆ. ಅಲ್ಲದೆ, ಎಳ್ಳು ಮತ್ತು ಬೆಲ್ಲ ದೇಹಕ್ಕೆಅಗತ್ಯವಿರುವ ಪೌಷ್ಠಕಾಂಶವನ್ನು ಒದಗಿಸುತ್ತದೆ. ಇನ್ನು ಕೊಬ್ಬರಿ, ಹುರಿಗಡಲೆ ಚರ್ಮದ ಆರೋಗ್ಯ ಕಾಪಾಡಲು ಸಹಕರಿಸುತ್ತದೆ. 

​ ಎಳ್ಳಿನಲ್ಲಿ ಇರುವ ಆರೋಗ್ಯಕರವಾದ ಎಣ್ಣೆಯಂಶ ಮತ್ತು ಬೆಲ್ಲದಲ್ಲಿ ಇರುವ ಕಬ್ಬಿಣಾಂಶವು ದೇಹಕ್ಕೆ ಶಕ್ತಿ ಹಾಗೂ ಪೋಷಣೆಯನ್ನು ನೀಡುತ್ತದೆ. ಬದಲಾದ ಚಳಿಯ ವಾತಾವರಣಕ್ಕೆ ನಮ್ಮ ದೇಹವು ಹೊಂದಿಕೊಳ್ಳಲು ಸಜ್ಜಾಗುವುದು ಎಂದು ಹೇಳಲಾಗುತ್ತದೆ.

ಎಳ್ಳು ಮತ್ತು ಬೆಲ್ಲದ ಮಿಶ್ರಣದಿಂದ ತಯಾರಿಸಲಾಗುವ ಸಿಹಿ, ಎಳ್ಳುಂಡೆ, ಎಳ್ಳಿನ ಪಂಚಕಜ್ಜಾಯ, ಎಳ್ಳಿನ ಚಿಕ್ಕಿಯ ಸೇವನೆಯಿಂದ ದೀರ್ಘ ಆಯುಷ್ಯ ಹಾಗೂ ಆರೋಗ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೆ ದೀರ್ಘ ಸಮಯದ ವರೆಗೆ ಆರೋಗ್ಯವು ಉತ್ತಮವಾಗಿರುವಂತೆ ಮಾಡುವುದು.