News

ಶಾಲಾ ಕಾಲೇಜು ಹೊರತುಪಡಿಸಿ ಸೆ.7ರಿಂದ ಮೆಟ್ರೋ ಸಂಚಾರ

30 August, 2020 10:17 AM IST By:

ಕೊರೋನಾ ಪರಿಣಾಮ ದೇಶದಾದ್ಯಂತ ಲಾಕ್ ಡೌನ್ ಜಾರಿಯಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೆಟ್ರೊ ರೈಲುಗಳ ಸಂಚಾರವನ್ನು ಸೆ.7ರಿಂದ ಹಂತಹಂತವಾಗಿ ಆರಂಭಿಸಲು ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ.ಆದರೆ ಶಾಲಾ ಕಾಲೇಜುಗಳು ಸೆಪ್ಟೆಂಬರ್‌ 30 ರವರೆಗೆ ಮುಚ್ಚಿರುತ್ತವೆ.

ಟ್ಯೂಷನ್‌, ಕೋಚಿಂಗ್ ಸೆಂಟರ್ ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಗಳು ಸೆಪ್ಟೆಂಬರ್‌ 30ರವರೆಗೂ ಬಾಗಿಲು ತೆರೆಯುವಂತಿಲ್ಲ. ಆನ್‍ಲೈನ್ ತರಗತಿಗಳು ಮುಂದುವರಿಯಲಿದೆ.. ಆನ್‍ಲೈನ್ ಕ್ಲಾಸ್ ಅಥವಾ ಟೆಲಿ ಕೌನ್ಸಿಲಿಂಗ್ ಇನ್ನಿತರ ಕಾರ್ಯಗಳಿಗೆ ಶೇ.50 ರಷ್ಟು ಸಿಬ್ಬಂದಿಯನ್ನು ಶಾಲೆಗಳು ಬಳಸಿಕೊಳ್ಳಬೇಕು ಎಂದು ಅನ್ಲಾಕ್ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್‌ 21ರಿಂದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಬಯಲು ರಂಗಮಂದಿರಗಳಿಗೆ ಕೂಡ
ಬಾಗಿಲು ತೆರೆಯಲು ಒಪ್ಪಿಗೆ ನೀಡಲಾಗಿದೆ, ಸೆಪ್ಟೆಂಬರ್ 30ರವರೆಗೂ ಈಜುಕೊಳ, ಥಿಯೇಟರ್‌ಗಳನ್ನು ತೆರೆಯುವುದಿಲ್ಲ. ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸೆ. 21ರಿಂದ ಜಾತ್ರೆ, ಮೆರವಣಿಗೆ, ಕ್ರೀಡಾ ಚಟುವಟಿಕೆ, ಮದುವೆ, ಸಮಾರಂಭಗಳಲ್ಲಿ ನೂರು ಮಂದಿ ಭಾಗವಹಿಸಲು ಅನುಮತಿ ನೀಡಿದೆ. ಸಾಮಾಜಿಕ/ರಾಜಕೀಯ/ಕ್ರೀಡೆ/ಮನೋರಂಜನೆ/ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ 100 ಜನರು ಮಾತ್ರ ಪಾಲ್ಗೊಳ್ಳುವದರ ಜೊತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.