ಶೇರು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸ ಬಹುದಾದರೂ ಅಲ್ಲಿ ಅಪಾಯದ ಸಾಧ್ಯತೆ ಹೆಚ್ಚಾಗಿರುತ್ತದೆ.
ಯಾಕಂದ್ರೆ ಯಾವ ಸಮಯದಲ್ಲಾದರೂ ಕೂಡ ಶೇರು ಮಾರುಕಟ್ಟೆ ತಲ್ಲಗೊಳ್ಳಬಹುದು. ಹೀಗಾಗಿ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಇನ್ವೆಸ್ಟ್ ಮಾಡುವದಕ್ಕಿಂದ ಸರ್ಕಾರಿ ಬ್ಯಾಂಕುಗಳ ಸ್ಕೀಂಗಳಲ್ಲಿ, ಅಥವಾ FD ಗಳಲ್ಲಿ ಹಣವನ್ನು ಹೂಡುವುದು ಉತ್ತಮ ಲಾಭ ಹಾಗೂ ಅಪಾಯದ ಸಮಸ್ಯೆ ಇರುವುದಿಲ್ಲ ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ.
ಸದ್ಯ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ SBI ಒಂದು ವಿಶೇಷವಾದ FD ಯೋಜನೆಯನ್ನು ಪರಿಚಯಿಸಿದ್ದು ಇದರಲ್ಲಿ 10 ವರ್ಷಗಳಲ್ಲಿ ಹಣವನ್ನು ದ್ವಿಗುಣಗೊಳಿಸಕೊಳ್ಳಬಹುದು. ಹಾಗಾದ್ರೆ ಇದು ಯಾವ ಯೋಜನೆ ಇದರಲ್ಲಿ ಲಭ್ಯವಾಗುವ ಬಡ್ಡಿ ದರವೆಷ್ಟು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
SBI ಸಾಮಾನ್ಯ ಗ್ರಾಹಕರಿಗೆ 3.5 ರಿಂದ 6.5 ರವರೆಗೆ FD ಗಳ ಮೇಲೆ ಬಡ್ಡಿಯನ್ನು ವಿಧಿಸುತ್ತದೆ. ಹಿರಿಯ ನಾಗರಿಕರ FDಗಳ ಮೇಲೆ ಗರಿಷ್ಠ 7.5ರವರೆಗೆ ಬಡ್ಡಿಯನ್ನು ವಿಧಿಸುತ್ತದೆ.
SBI ನ ಈ 10 ವರ್ಷಗಳ ಮೆಚುರಿಟಿ ಹೊಂದಿರುವ FD ಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಸಾಮಾನ್ಯ ಗ್ರಾಹಕನು ಕೂಡ 10 ಲಕ್ಷ ರೂಪಾಯಿಗಳ ಪ್ರಯೋಜನವನ್ನು ಪಡೆಯಬಹುದು. SBI FDಯಲ್ಲಿ ಸಾಮಾನ್ಯ ಗ್ರಾಹಕರು 10 ವರ್ಷ ಅವಧಿಯ ಮೆಚ್ಯೂರಿಟಿ ಹೊಂದಿರುವ ಈ FD ಮೇಲೆ ವಾರ್ಷಿಕ 6.5 ಪ್ರತಿಶತದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.
ಎಸ್‌ಬಿಐ ಎಫ್‌ಡಿ ಕ್ಯಾಲ್ಕುಲೇಟರ್ ಪ್ರಕಾರ, ಹೂಡಿಕೆದಾರರು 6.5 ಪ್ರತಿಶತ ವಾರ್ಷಿಕ ಬಡ್ಡಿದರದಲ್ಲಿ ಮೆಚ್ಯೂರಿಟಿಯಲ್ಲಿ ಒಟ್ಟು 19 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.
ಇದರಲ್ಲಿ ಬಡ್ಡಿಯಿಂದ ರೂ 905,585 ಸ್ಥಿರ ಆದಾಯವಿರುತ್ತದೆ. ಮತ್ತೊಂದೆಡೆ, ಎಸ್‌ಬಿಐನ 10 ವರ್ಷಗಳ ಮೆಚ್ಯೂರಿಟಿ ಯೋಜನೆಯಲ್ಲಿ ಹಿರಿಯ ನಾಗರಿಕರು ಒಟ್ಟು 10 ಲಕ್ಷ ರೂ. ಪಡೆಯುತ್ತಾರೆ. ಹಿರಿಯ ನಾಗರಿಕರು 7.5 ಪರ್ಸೆಂಟ್ ವಾರ್ಷಿಕ ಬಡ್ಡಿ ದರದಲ್ಲಿ ಮೆಚ್ಯೂರಿಟಿಯಲ್ಲಿ ಒಟ್ಟು 21,02,459 ರೂಗಳನ್ನು ಪಡೆಯುತ್ತಾರೆ.