News

Breaking: SBI ನಿಂದ 15 ಜನರ ಅಕೌಂಟ್ಗೆ ₹1.5 ಕೋಟಿ ಜಮಾ! ಮೋದಿ ಹಾಕಿದ್ದೆಂದು ತಿಳಿದ ಗ್ರಾಹಕರು.. ನಿಜಕ್ಕೂ ನಡೆದದ್ದೇನು?

17 May, 2022 11:18 AM IST By: Kalmesh T
SBI deposite 1.5 crore to bank holders by mistake

15 ಜನ ಎಸ್‌ಬಿಐ ಗ್ರಾಹಕರ ಅಕೌಂಟ್‌ಗೆ ಒಟ್ಟು 15 ಕೋಟಿ ರೂಪಾಯಿ ಜಮೆ ಆಗಿದೆ.  ಇವರಲ್ಲಿ ಬಹುಪಾಲು ಜನರು ಈ ಹಣ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಕೌಂಟ್‌ಗೆ ಹಾಕಿದ್ದಾರೆಂದು ನಂಬಿ ಕುಣಿದಾಡಿದ್ದಾರೆ.

ಇದನ್ನೂ ಓದಿರಿ:ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

 IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!

ಕಳೆದ ಬಾರಿ ಚುಣಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಹೇಳಿದಂತೆ ಎಲ್ಲರ ಖಾತೆಗೆ 15 ಲಕ್ಷ ಇನ್ನೂ ಬಂದಿಲ್ಲ. ಆದರೆ, ಇದರ ನಡುವೆ ತೆಲಂಗಾಣದಲ್ಲಿ 15 ಮಂದಿ ಎಸ್‌ಬಿಐ ಗ್ರಾಹಕರ ಅಕೌಂಟ್‌ಗೆ ತಲಾ 10 ಲಕ್ಷ ರೂಪಾಯಿ ಅಂದರೆ ಒಟ್ಟು 15 ಕೋಟಿ ರೂಪಾಯಿ ಜಮೆ ಆಗಿ ಗದ್ದಲ ಸೃಷ್ಟಿಸಿದೆ.

ಇವರ ಪೈಕಿ ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಅಕೌಂಟ್‌ಗೆ ಹಣವನ್ನು ಹಾಕಿದ್ದಾರೆಂದು ನಂಬಿ ಕುಣಿದಾಡಿದ್ದಾರೆ. ಅದರೆ ಈ ಹಣ ಪಡೆದವರ ಪೈಕಿ ಒಬ್ಬ ಗ್ರಾಹಕ ಮಾತ್ರ ದೊಡ್ಡ ಪೇಚಿಗೆ ಸಿಲುಕಿಬಿಟ್ಟಿದ್ದು, ತಮ್ಮದಲ್ಲದ ತಪ್ಪಿಗೆ ತಲೆ ಮರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 

ಅಸಲಿಗೆ ಆಗಿದ್ದೇನು?

ಈ ಎಲ್ಲಾ ಗ್ರಾಹಕರ ಬ್ಯಾಂಕ್‌ಗೆ ತಲಾ 10 ಲಕ್ಷ ರೂಪಾಯಿ ಬಂದಿರುವುದು ನಿಜ. ಆದರೆ ಅಸಲಿಗೆ ಆಗಿದ್ದೇನೆಂದರೆ, ಎಸ್‌ಬಿಐ ಸಿಬ್ಬಂದಿ ಏನೋ ಟೈಪ್ ಮಾಡುವಾಗ ಮಾಡಿದ ಎಡವಟ್ಟೇ ಇದಕ್ಕೆ ಕಾರಣವಾಗಿದೆ.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಸರ್ಕಾರದ ದಲಿತ ಬಂಧು ಯೋಜನೆಗಾಗಿ ಇರಿಸಲಾಗಿದ್ದ ಹಣ ಈ ರೀತಿ ತಪ್ಪಾಗಿ ವರ್ಗಾಯಿಸಲಾಗಿದೆ. ಹಣವನ್ನು ಜಮೆ ಮಾಡುವಾಗ ಏನನ್ನೋ ಟೈಪ್ ಮಾಡಲು ಹೋಗಿ ಇನ್ನೇನೋ ಟೈಪ್ ಮಾಡಿದ್ದೇ ಇಲ್ಲಾ ಅವಾಂತರಕ್ಕೆ ಕಾರಣವಾಗಿದ್ದು, 15 ಮಂದಿ ಅಕೌಂಟ್‌ಗೆ ತಲಾ 10 ಲಕ್ಷ ರೂಪಾಯಿ ಹೋಗಿಬಿಟ್ಟಿದೆ.

ಮೋದಿ ಹಣ ಹಾಕಿದ್ದೆಂದು ಭಾವಿಸಿದ ಗ್ರಾಹಕರು

ಒಂದೆರಡು ದಿನಗಳಲ್ಲಿ ಈ ತಪ್ಪಿನ ಅರಿವಾದದ್ದೇ ತಡ, ಎಲ್ಲಾ ಗ್ರಾಹಕರನ್ನೂ ಸಂಪರ್ಕಿಸಿ ಹಣವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಕೋರಿಕೊಂಡಿದೆ. ತಮ್ಮ ಬ್ಯಾಂಕ್ ಅಕೌಂಟ್‌ಗೆ ಪ್ರಧಾನಿ ಮೋದಿಯವರೇ ಹಣ ಕಳುಹಿಸಿದ್ದಾರೆ ಎಂದು ನಂಬಿದ್ದ ಬಹುತೇಕ ಗ್ರಾಹಕರು ತುಂಬಾ ನಿರಾಸೆಯಿಂದ ಹಣವನ್ನು ವಾಪಸ್ ಕೊಟ್ಟಿದ್ದಾರೆ.

PM GatiShakti: ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ನೀಡಲು “GatiShakti Sanchar” ಪೋರ್ಟಲ್ ಪ್ರಾರಂಭ!

G7: ಉಕ್ರೇನ್ ವಿಶ್ವದ ಪ್ರಮುಖ ಧಾನ್ಯ ಪೂರೈಕೆದಾರರ ಪ್ರಭಾವಶಾಲಿ ಸಂಘಟನೆ ರಚಿಸಲು ಸಲಹೆ ನೀಡಿದೆ!

ಈ ಹಣದಿಂದ ತಾವು ಏನೇನು ಮಾಡಬಹುದು ಎಂದು ಕನಸು ಕಂಡಿದ್ದ ಗ್ರಾಹಕರಿಗೆ ದೊಡ್ಡ ಶಾಕ್ ಎದುರಾದರೂ ಆ ದುಡ್ಡು ಕಣ್ಣಿನಿಂದ ಬಂದದ್ದು ಎಂದು ತಿಳಿದು ವಾಪಸ್ ಕೊಟ್ಟರು.

14 ಮಂದಿಯೇನೋ ಹಣವನ್ನು ವಾಪಸ್ ಮಾಡಿದರು. ಆದರೆ ಓರ್ವ ಗ್ರಾಹಕ ಮಾತ್ರ ಈ ಹಣವನ್ನು ತಮ್ಮ ವೈಯಕ್ತಿಕ ಸಾಲ ತೀರಿಸಲು ಬಳಸಿಕೊಂಡು ಬಿಟ್ಟಿದ್ದಾರೆ ಮಹೇಶ್ ಎಂಬುವವರು ಇಂಥದ್ದೊಂದು ಕೃತ ಮಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿಯಿಂದ ಕರೆ ಬಂದಾಗ ಅವರಿಗೆ ಶಾಕ್ ಆಗಿದೆ.

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!

ಬ್ಯಾಂಕ್‌ನವರು ಹಣವನ್ನು ವಾಪಸ್ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಇನ್ನೆಲ್ಲೋ ಸಾಲ ಮಾಡಿ ಆರು ಲಕ್ಷ ರೂಪಾಯಿಯನ್ನು ಮಹೇಶ್ ಬ್ಯಾಂಕ್‌ಗೆ ಮರಳಿಸಿದ್ದಾರೆ. ಆದರೆ ಉಳಿದ ಹಣ ವಸೂಲಿಗೆ ಅವರು ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದು ಬ್ಯಾಂಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.