News

ಎಸ್ ಬಿಐ ಗ್ರಾಹಕರಿಗೆ ಬ್ಯಾಂಕನಿಂದ ಖಡಕ ಸೂಚನೆ, ಅಪಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯ

04 May, 2021 3:22 PM IST By:

ಈ ತಿಂಗಳ ಕೊನೆಯೊಳಗೆ ಅಂದರೆ ಮೇ31ರೊಳಗೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಗ್ರಾಹಕರು ತಮ್ಮ ಖಾತೆಗೆ KYC ಅಪಡೇಟ್ ಮಾಡದಿದ್ದರೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಕೊರೊನ್ ಮಹಾಮಾರಿಯ ದಿನೇ-ದಿನೇ ಹರಡುತ್ತಿರುವುದರಿಂದ ಲಾಕಡೌನ್ ಜಾರಿಯಲ್ಲಿದೆ. ಆದ್ದರಿಂದ ಎಲ್ಲ ಗ್ರಾಹಕರಿಗೆ ಬ್ಯಾಂಕ್ ಗೆ ಹೋಗುವುದು ಹಾಗೂ ಅಲ್ಲಿ ವಹಿವಾಟು ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ SBI ಜನಪರ ನಿಯಮ ಜಾರಿಗೆ ತಂದಿದೆ.

ಯಾರು KYC ಅಪಡೇಟ್ ಮಾಡಿಸಬೇಕು?

ಉಳಿತಾಯ,ಆರ್-ಡಿ, ಚಾಲ್ತಿ ಖಾತೆ ಹಾಗೂ ಯಾವುದೇ ಬ್ಯಾಂಕ್ ವ್ಯವಹಾರವಿರುವ ಗ್ರಾಹಕರು KYC ಅಪಡೇಟ್ ನ್ನು ಮಾಡಿಸಬೇಕೆಂದು SBI ಹೇಳಿದೆ.

ಹಾಗಾದರೆ KYC ಅಪಡೇಟ್ ಹೇಗೆ ಮಾಡಬೇಕು?

ಗ್ರಾಹಕರ ಹಿತದೃಷ್ಟಿಯನ್ನು ನೋಡಿಕೊಂಡು ಬ್ಯಾಂಕ್ ಒಂದು ಒಳ್ಳೆಯ ಮಾರ್ಗವನ್ನು ತನ್ನ ಗ್ರಾಹಕರಿಗೆ ಸೂಚಿಸಿದೆ. ಅಂಚೆ ಹಾಗೂ ಇಮೇಲ್ ಮುಖಾಂತರ ಗ್ರಾಹಕರು ತಮ್ಮ KYC ಅಪಡೇಟ್ ಮಾಡಿಕೊಳ್ಳಬಹುದು, ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡುವ ಅಗತ್ಯವಿಲ್ಲವೆಂದು SBI ಹೇಳಿಕೊಂಡಿದೆ‌. ಗುರುತು,ವಿಳಾಸ,ಫೋನ್ ನಂಬರ್ ಸೇರಿದಂತೆ KYC ಪೂರ್ಣಗೊಳಿಸಿದ ಗ್ರಾಹಕರು, ಕೂಡಲೇ ಅಪಡೇಟ್ ಮಾಡಬೇಕು ಎಂದು ಬ್ಯಾಂಕ್ ತಿಳಿಸಿದೆ.

KYCಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು  ಬ್ಯಾಂಕ್ ಗೆ ಇಮೇಲ್ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.ಇವುಗಳಿಗೆ ಮಾನ್ಯತೇ ನೀಡಬೇಕೆಂದು SBI ತನ್ನ ಅಧಿಕಾರಿಗಳಿಗೆ ಹೇಳಿದೆ. ಬೇರೇ ಬ್ಯಾಂಕ್ ಗಳಿಗೂ ಇದೆ ನಿಯಮ ಅನ್ವಯವಾಗುವ ಸಾಧ್ಯತೆ ಇದ್ದರೂ ಇನ್ನೂ ಅಧಿಕೃತವಾಗಿ SBI ಹೊರತುಪಡಿಸಿ ಯಾವುದೇ ಬ್ಯಾಂಕ್ ಗಳು ಹೇಳಿಕೊಂಡಿಲ್ಲ.