News

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನೂಮುಂದೆ ನೆನಪು ಮಾತ್ರ

08 June, 2020 12:25 PM IST By:

2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ  ಕನ್ನಡದ ನಾಯಕ ನಟ ಚಿರಂಜೀವಿ ಸರ್ಜಾ (39)  ಬೆಂಗಳೂರಿನ ಆಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಕೊನೆಯುಸಿರೆಳೆದಿದ್ದಾರೆ
1980ರ ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅದಕ್ಕೂ ಮೊದಲು ಸುಮಾರು ನಾಲ್ಕು ವರ್ಷಗಳ ಕಾಲ ಅರ್ಜುನ್ ಸರ್ಜಾ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.ಕನ್ನಡ ಖ್ಯಾತ ಖಳನಟರಾಗಿದ್ದ ಶಕ್ತಿಪ್ರಸಾದ್ ಅವರ ಮೊಮ್ಮಗರಾಗಿದ್ದ, ಚಿರಂಜೀವಿ, ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸೋದರಳಿರಾಗಿದ್ದರು. ಕನ್ನಡದ ನಾಯಕ ನಟ ಧ್ರುವ ಸರ್ಜಾರ ಸಹೋದರ.2017 ರ ಅಕ್ಟೋಬರ್ ನಲ್ಲಿ ನಟಿ ಮೇಘನಾ ರಾಜ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ 2018ರ ಮೇ 2 ರಂದು ವಿವಾಹವಾಗಿದ್ದರು.

ವಾಯುಪುತ್ರ' ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಲೋಕಕ್ಕೆ ಎಂಟ್ರಿ


ವಾಯುಪುತ್ರ' ಚಿತ್ರದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 'ದಂಡಂ ದಶಗುಣಂ', 'ವರದ ನಾಯಕ', 'ಸಿಂಗ', 'ಚಿರು', 'ಸಿಂಗ', 'ಗಂಡೆದೆ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದರು. ಸುದೀಪ್ ಜೊತೆಗೆ ಅವರು 'ವರದ ನಾಯಕ' ಸಿನಿಮಾದಲ್ಲಿ ನಟಿಸಿದ್ದರು.

ಮೊದಲ ಚಿತ್ರ ವಾಯುಪುತ್ರದ ನಟನೆಗಾಗಿ ಅತ್ಯುತ್ತಮ ಯುವ ನಾಯಕ ನಟ ಎಂಬ ಪ್ರಶಸ್ತಿ ಪಡೆದಿದ್ದರು. 2010ರಲ್ಲಿ ನಟಿಸಿದ್ದ ಚಿರು ಚಿತ್ರ ಭಾರಿ ಯಶಸ್ಸು ಗಳಿಸಿತ್ತು. ನಂತರ ಗಂಡೆದೆ, ದಂಡಂ ದಶಗುಣಂ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮಲೀಲಾ, ಆಕೆ, ಸಂಹಾರ, ಸೀಜರ್ ಮುಂತಾದ ಸಾಲು ಸಾಲು ಚಿತ್ರಗಳಲ್ಲಿ ಸರ್ಜಾ ನಟಿಸಿದ್ದರು.

ಸದಾ ನಗುಮುಖದಲ್ಲಿರುತ್ತಿದ್ದರು ಚಿರು

ಚಿತ್ರರಂಗದಲ್ಲಿ ಸದಾ ನಗುಮುಖದಿಂದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಚಿತ್ರರಂಗದಲ್ಲಿ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ತುಂಬ ಆತ್ಮೀಯತೆ, ಪ್ರೀತಿಯಿಂದ ಇರುತ್ತಿದ್ದರು. ಲಾಕ್ ಡೌನ್ ಟೈಮ್‌ನಲ್ಲಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದ ಚಿರಂಜೀವಿ ಅವರು ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು.