News

ಚಹಾ ಖರೀದಿಗೆ ಭಾರತದತ್ತ ಮುಖ ಮಾಡಿದ ರಷ್ಯಾ!

09 November, 2022 5:14 PM IST By: Hitesh
Russia turned to India to buy tea!

ರಷ್ಯಾ ಮತ್ತು ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ವಿಶ್ವದ ಹಲವು ದೇಶಗಳಲ್ಲಿ ಹಲವು ಸಮಸ್ಯೆಗಳು ಸೃಷ್ಟಿ ಆಗಿವೆ.

ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಅಧ್ಯಕ್ಷರೇ ಇಲ್ಲ: ರೈತರ ಸಮಸ್ಯೆಗಳಿಗೆ ಮುಕ್ತಿ ಇಲ್ಲ! 

ಕೇಂದ್ರ ಸರ್ಕಾರವು ಗೋದಿ ಮತ್ತು ಸಕ್ಕರೆಯನ್ನು ರಫ್ತು ಮಾಡುವುದನ್ನು ತಡೆ ಹಿಡಿದಿರುವುದರಿಂದ ಕೆಲವು ನಿರ್ದಿಷ್ಟ ದೇಶಗಳಲ್ಲಿ ಈಗಾಗಲೇ ಸಕ್ಕರೆ ರಫ್ತಿನಲ್ಲಿ ಸಮಸ್ಯೆ ಆಗಿರುವುದು ವರದಿ ಆಗಿದೆ.

ಇತ್ತೀಚಿಗೆ ಬಂದ ವರದಿಯಂತೆ ಕೀನ್ಯಾದಲ್ಲಿ ಚಹಾ ದರ ಏರಿಕೆಯಾಗಿದ್ದು, ಆಮದು ದುಬಾರಿ ಆಗುತ್ತಿದ್ದು, ರಷ್ಯಾವು ಚಹಾ ರಫ್ತಿಗೆ ಭಾರತದ ಕಡೆ ಮುಖ ಮಾಡಿದೆ.  

ಇದನ್ನೂ ಓದಿರಿ: ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ರಷ್ಯಾವು ಭಾರತದಿಂದ ಅಗ್ಗದ ದರದಲ್ಲಿ ಹೆಚ್ಚಿನ ಚಹಾ ಪುಡಿಯನ್ನು (Tea) ಖರೀದಿಸುತ್ತಿದೆ.  ರಷ್ಯಾದಿಂದ ಭಾರತ ಈಗಾಗಲೇ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! 

ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ಕಡಿಮೆ ಮೊತ್ತದಲ್ಲಿ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಅಮೆರಿಕಾ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಇ

ದರ ನಡುವೆಯೂ ಕೇಂದ್ರ ಸರ್ಕಾರವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಮುಂದುವರಿದಿದೆ.   

ರಾಜ್ಯದ ರೈತರಿಗೆ ಸಿಹಿಸುದ್ದಿ: ಪ್ರಮುಖ ಜಲಾಶಯಗಳು ಭರ್ತಿ!  

Russia turned to India to buy tea!

ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರ ಮೊದಲ ಎಂಟು ತಿಂಗಳಲ್ಲಿ ರಷ್ಯಾಕ್ಕೆ ಭಾರತದಿಂದ ಶೇ. 5ರಷ್ಟು ಹೆಚ್ಚಿನ ಚಹಾ ರಫ್ತಾಗಿದೆ.

ರಷ್ಯಾವು ದಕ್ಷಿಣ ಭಾರತದಿಂದ ಹೆಚ್ಚಿನ ಚಹಾವನ್ನು ಖರೀದಿಸುತ್ತಿದ್ದು ಒಂದು ಕೆ.ಜಿಗೆ ಶೇ. 13ರಷ್ಟು ಕಡಿಮೆ ದರದಲ್ಲಿ ಚಹಾ ಕೊಳ್ಳುತ್ತಿದೆ.

ಇದನ್ನೂ ಓದಿರಿ: ಬೆಂಗಳೂರು ಬಸವನಗುಡಿ ಕಡಲೆ ಪರಿಷೆ: ಈ ಬಾರಿ ತೆಪ್ಪೋತ್ಸವದ ಮೆರುಗು!  

Russia turned to India to buy tea!

ಸಾಂಪ್ರದಾಯಿಕ ಚಹಾಕ್ಕೆ ರಷ್ಯಾ ಆದ್ಯತೆ ನೀಡುತ್ತದೆಯಾದರೂ, ಇದೀಗ ದೇಶದಲ್ಲಿ ಟೀ ಬ್ಯಾಗ್ ಸಂಸ್ಕೃತಿ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಸಿಟಿಸಿ ಟೀ ಮಾದರಿಯ ಚಹಾವನ್ನೂ ರಷ್ಯಾ ಖರೀದಿಸಲು ಮುಂದಾಗಿದೆ.  

Russia turned to India to buy tea!

ರಷ್ಯಾ ಕೀನ್ಯಾದ ಚಹಾವನ್ನು ಆಮದು ಮಾಡಿಕೊಳ್ಳುವ ಐದನೇ ದೊಡ್ಡ ಖರೀದಿದಾರ ದೇಶವಾಗಿದೆ.

ಆದರೆ, ಇತ್ತೀಚಿನ ವಾರಗಳಲ್ಲಿ ಕೀನ್ಯಾದ ಚಹಾ ಬೆಲೆಗಳು ಏರಿಕೆಯಾಗಿರುವುದು ಈಗಾಗಲೇ ಯುದ್ಧದಿಂದ ಆರ್ಥಿಕ ಸಂಕಷ್ಟ ಎದುರಾಗುವ ಆತಂಕದಲ್ಲಿರುವ ರಷ್ಯಾಗೆ ಸಮಸ್ಯೆ ಆಗಿದೆ.  

ಇದನ್ನೂ ಸೇರಿದಂತೆ ವಿವಿಧ ಕಾರಣಗಳಿಂದ ರಷ್ಯಾವು ಕೀನ್ಯಾದಿಂದ ಟೀ ಖರೀದಿಯಲ್ಲಿ ಅಂತರ ಕಾಪಾಡಿಕೊಳ್ಳುತ್ತಿದೆ.

ಈಸ್ಟ್‌ ಆಫ್ರಿಕನ್ ಟೀ ಟ್ರೇಡ್ ಅಸೋಸಿಯೇಷನ್‌ನ ಮಾಹಿತಿಯ ಪ್ರಕಾರ ಕೆಲವು ವಾರಗಳ ಹಿಂದೆ ಕೆಜಿಗೆ 2.27 ಡಾಲರ್‌ ಇದ್ದ ಚಹಾದ ಬೆಲೆಯು ಇದೀಗ ಕೆಜಿಗೆ 2.37 ಡಾಲರ್‌ (193 ರೂ.)ಗೆ ಏರಿಕೆಯಾಗಿದೆ.   

ಭಾರತೀಯ ಮಾತೃ ಭಾಷೆಗಳ ಸಮೀಕ್ಷೆ ಪೂರ್ಣ, ಇದರ ಲಾಭವೇನು?