News

ರೈಟ್‌…ರೈಟ್‌… ಬರ್ತಿದೆ ನೋಡ್ರಿ ಬಿಯರ್‌ ಬಸ್‌!

05 May, 2023 4:41 PM IST By: Hitesh
Right…Right…Nodry Beer Bus has arrived!

ದಕ್ಷಿಣ ಭಾರತದ ಈ ಪ್ರದೇಶದಲ್ಲಿ ಬಿಯರ್ ಬಸ್‌ ಪರಿಚಯಿಸಲಾಗಿದೆ! ಆಗಿದ್ದರೆ, ಎಲ್ಲಿ ಬಿಯರ್‌ ಬಸ್‌ ಇದರ ವಿಶೇಷತೆಗಳೇನು ಎನ್ನುವ ವಿವರ ಇಲ್ಲಿದೆ.

ಗೋವಾ ಹಾಗೂ ಪುದುಚೇರಿ ಮದ್ಯ ಪ್ರಿಯರ ಮೆಚ್ಚಿನ ಸ್ಥಳಗಳಾಗಿವೆ. ಇದೀಗ ಪುದುಚೇರಿ ವ್ಯಾಪ್ತಿಯಲ್ಲಿ ಬಿಯರ್‌ ಬಸ್‌ ಅನ್ನು ಸಹ ಪರಿಚಯಿಸಲಾಗಿದೆ.

ಬಿಸಿಲು, ಮರಳು ಮತ್ತು ತಣ್ಣನೆಯ ಬಿಯರ್ ಅನ್ನು ಆನಂದಿಸಲು ಪುದುಚೇರಿಗೆ (ಹಿಂದಿನ ಫ್ರೆಂಚ್ ವಸಾಹತು, ಪಾಂಡಿಚೇರಿ)

ಹೋಗುವ ಪ್ರವಾಸಿಗರಿಗೆ ಈಗ ಸಂತೋಷಪಡಲು ಮತ್ತೊಂದು ಕಾರಣವಿದೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಮೊದಲ ಮೈಕ್ರೋಬ್ರೂವರಿಯಾದ ಕ್ಯಾಟಮಾರನ್ ಬ್ರೂಯಿಂಗ್ ಕೋ,

ಚೆನ್ನೈನಿಂದ ಪುದುಚೇರಿಗೆ ತನ್ನ ಮೊದಲ "ಬಿಯರ್ ಬಸ್ " ಅನ್ನು ಪ್ರಾರಂಭಿಸುತ್ತಿದೆ .

 ಪ್ರತಿ ವ್ಯಕ್ತಿಗೆ 3,000 ಸಾವಿರ ಟಿಕೆಟ್ ದರದೊಂದಿಗೆ ಏಪ್ರಿಲ್ 22 ರಂದು ಬಿಯರ್ ಬಸ್ ತನ್ನ ಮೊದಲ ಪ್ರಯಾಣ ಪ್ರಾರಂಭವಾಗಿದೆ.

ಶನಿವಾರ ಮತ್ತು ಭಾನುವಾರದಂದು ಬಸ್ ಕಾರ್ಯನಿರ್ವಹಿಸಲಿದೆ.

ಚೆನ್ನೈನಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗುವ ಬಸ್‌ನ ಪ್ರಯಾಣ ರಾತ್ರಿ 9ಕ್ಕೆ ಮುಕ್ತಾಯವಾಗಲಿದೆ.

ಪ್ರವಾಸದಲ್ಲಿ ಊಟ, ಅನಿಯಮಿತ ಕ್ರಾಫ್ಟ್ ಬಿಯರ್ ಮತ್ತು ಬ್ರೂವರಿಯ ಅನುಭವವನ್ನು ಸಹ ಒಳಗೊಂಡಿದೆ.

ಆದರೆ, ಬಸ್ಸಿನಲ್ಲಿ ಬಿಯರ್ ನೀಡುವುದಿಲ್ಲ. ಮೊದಲ ಪ್ರವಾಸದ ಪ್ರತಿಕ್ರಿಯೆಯನ್ನು ಆಧರಿಸಿ,

ಕಂಪನಿಯು ಇದನ್ನು ಸಾಮಾನ್ಯ ಪ್ರವಾಸವನ್ನಾಗಿ ಮಾಡಲು ಯೋಜಿಸಿದೆ. 

ಕಟಮಾರನ್ ಬ್ರೂಯಿಂಗ್ ಕೋ ಸಂಸ್ಥಾಪಕ ಪ್ರಸಾದ್ ರಾಧಾಕೃಷ್ಣನ್ ಮಾತನಾಡಿ, ಗ್ರಾಹಕರೊಬ್ಬರು ಬಿಯರ್ ಬಸ್ ಸಾರಿಗೆ

ಸೇವೆಯ ಬಗ್ಗೆ ತಮಾಷೆಯಾಗಿ ಕೇಳಿದಾಗ ಬಸ್‌ನ ಕಲ್ಪನೆ ಮೂಡಿರುವುದಾಗಿ ಹೇಳಿದ್ದಾರೆ.

ಈಚೆಗೆ ಬಿಯರ್ ಬಸ್‌ಗಾಗಿ ಕಂಪನಿ ಬಿಡುಗಡೆ ಮಾಡಿದ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಇದು ವೈರಲ್ ಆಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ.

ಕೆಲವರು ನಮ್ಮನ್ನು ಬಸ್ ಓಡಿಸುವಂತೆ ಕೇಳುತ್ತಿದ್ದಾರೆ ಎಂದು ರಾಧಾಕೃಷ್ಣನ್ ಹಾಸ್ಯವಾಗಿ ಹೇಳಿದ್ದಾರೆ.  

ರಾಧಾಕೃಷ್ಣನ್ ಮತ್ತು ಅವರ ವ್ಯಾಪಾರ ಪಾಲುದಾರ ರಂಗರಾಜು ನಾರಾಯಣಸ್ವಾಮಿ ಅವರು 2017ರಲ್ಲಿ ಕಟಮಾರನ್ ಬ್ರೂಯಿಂಗ್ ಕಂಪನಿಯನ್ನು ಸ್ಥಾಪಿಸಿದರು.

ಕಂಪನಿಯು ಒಂಬತ್ತು ಮಾದರಿಯ ಕ್ರಾಫ್ಟ್ ಬಿಯರ್ಗಳನ್ನು ಸರಬರಾಜು ಮಾಡುತ್ತಿದೆ.

ಇಂಡಿಯನ್ ಸಮ್ಮರ್ (ಬೆಲ್ಜಿಯನ್ ವಿಟ್ಬಿಯರ್),ಹಾಪ್ಸುನಾಮಿ (ಭಾರತೀಯ ಪೇಲ್ ಆಲೆ),

ಚಿಂಗಾರಿ ಸೈಡರ್ (ಒಣ ಸೇಬು ಸೈಡರ್), ಮತ್ತು ವೋಕ್ಸ್ ಪಾಪುಲಿ (ಡಾರ್ಕ್ ಲಾಗರ್)ಗಳು ಇದರಲ್ಲಿ  ಜನಪ್ರಿಯವಾಗಿವೆ.

ರಾಧಾಕೃಷ್ಣನ್ ಅವರು ಹೇಳುವಂತೆ, ಕ್ರಾಫ್ಟ್ ಬಿಯರ್‌ಗಳು, ವಾಣಿಜ್ಯ ಬಿಯರ್‌ಗಳಿಗಿಂತ ಭಿನ್ನವಾಗಿರುತ್ತವೆ.

ಒಂದು ಧಾನ್ಯವು ಹೇಗೆ ಬಿಯರ್ ಆಗಿ ರೂಪಾಂತರಗೊಳ್ಳುತ್ತದೆ ಎಂಬುದನ್ನು ಸಂದರ್ಶಕರಿಗೆ ವಿವರಿಸುವ

ಗುರಿಯನ್ನು ಬಸ್ ಪ್ರವಾಸ ಮಾಡಲಾಗುವುದು ಎಂದು ಅವರು ಹೇಳಿದರು.

ಆದರೆ ಬಸ್‌ನಲ್ಲಿ ಬಿಯರ್ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇತರರಿಗೆ ತೊಂದರೆ ನೀಡುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ಇಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಬಸ್ ಯೋಜನೆ ಯಶಸ್ವಿಯಾದರೆ ಬೆಂಗಳೂರಿನಂತಹ ಇತರ ನಗರಗಳಿಂದ ಬಸ್ ಓಡಿಸಲು

ನಿರ್ಧರಿಸಲಾಗುವುದು ಎಂದು ಕಟಮಾರನ್ ಬ್ರೂಯಿಂಗ್ ಕಂಪನಿ ತಿಳಿಸಿದೆ.