News

ನಿರಂತರ ಕೃಷಿ ಮಾಡುತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ!

19 June, 2023 5:42 PM IST By: Kalmesh T
Retired Chief Justice of the Supreme Court P. Sadashivam who is continuously farming!

ಭಾರತದ 40ನೇ ಮುಖ್ಯ ನ್ಯಾಯಮೂರ್ತಿ ಮತ್ತು ಕೇರಳದ ಮಾಜಿ ರಾಜ್ಯಪಾಲ ಪಿ. ಸದಾಶಿವಂ (ಪಳನಿಸಾಮಿ ಸದಾಶಿವಂ) ಕಳೆದ ಶುಕ್ರವಾರ ಕೃಷಿ ಜಾಗರಣ್‌ಗೆ ಭೇಟಿ ನೀಡಿದ್ದರು. 

ಆ ಸಮಯದಲ್ಲಿ ಅವರು ಕೃಷಿ ಜಾಗರಣದ ತಂಡದ ಜೊತೆ ಮುಕ್ತ ಮಾತುಕತೆ ನಡೆಸಿದರು. ತಮ್ಮ ಬಾಲ್ಯದಿಂದ ಹಿಡಿದು ಇಂದಿನ ನಿವೃತ್ತ ಜೀವನದವರೆಗಿನ ಜೀವನ ಒಯಣದ ಕುರಿತು ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.

ಪಿ.ಸದಾಶಿವಂ ಅವರು ಪತಂಜಲಿ ಶಾಸ್ತ್ರಿ ನಂತರ ಮುಖ್ಯ ನ್ಯಾಯಮೂರ್ತಿಯಾದ ತಮಿಳುನಾಡಿನ ಎರಡನೇ ನ್ಯಾಯಾಧೀಶರು ಮತ್ತು ರಾಜ್ಯವೊಂದರ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಮಾಜಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನರೇಂದ್ರ ಮೋದಿ ಸರ್ಕಾರದಿಂದ ನೇಮಕಗೊಂಡ ಕೇರಳದ ಮೊದಲ ರಾಜ್ಯಪಾಲರು.

ಸದಾಶಿವಂ ಅವರು ಏಪ್ರಿಲ್ 27, 1949 ರಂದು ಈರೋಡ್ ಜಿಲ್ಲೆಯ ಭವಾನಿ ಬಳಿಯ ಕಡಪನಲ್ಲೂರಿನಲ್ಲಿ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದರು. 

ಶಿವಕಾಶಿಯ ಅಯ್ಯ ನಾಡರ್ ಜಾನಕಿ ಅಮ್ಮಾಳ್ ಕಾಲೇಜಿನಲ್ಲಿ ಬಿಎ ಮುಗಿಸಿದ ನಂತರ ಅವರು ಚೆನ್ನೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. 

ನಂತರ 25 ಜುಲೈ 1973 ರಂದು ಅವರು ಮದ್ರಾಸಿನಲ್ಲಿ ವಕೀಲರಾಗಿ ಸೇರಿಕೊಂಡರು. 1996 ರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಅವರನ್ನು ಏಪ್ರಿಲ್ 2007 ರಲ್ಲಿ ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. 21 ಆಗಸ್ಟ್ 2007 ರಂದು, ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟರು.

ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಅವರು ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಜನರಲ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. 

2014 ರಲ್ಲಿ ನಿವೃತ್ತರಾದ ನಂತರ ಅವರು ಶೀಲಾ ದೀಕ್ಷಿತ್ ಅವರ ನಂತರ 2019 ರವರೆಗೆ ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.ʼ

ನ್ಯಾಯಮೂರ್ತಿ ಪಿ. ಸದಾಶಿವಂ ಅವರ ತೀರ್ಪು

ಸದಾಶಿವಂ ಅವರು ರಿಲಯನ್ಸ್ ಗ್ಯಾಸ್ ತೀರ್ಪು ಸೇರಿದಂತೆ ಹಲವು ತೀರ್ಪುಗಳನ್ನು ನೀಡಿದ್ದಾರೆ. "ನಮ್ಮಂತಹ ರಾಷ್ಟ್ರೀಯ ಪ್ರಜಾಪ್ರಭುತ್ವದಲ್ಲಿ, ರಾಷ್ಟ್ರೀಯ ಆಸ್ತಿಗಳು ಜನರಿಗೆ ಸೇರಿದ್ದು" ಮತ್ತು "ಅಂತಹ ಆಸ್ತಿಗಳು ಜನರ ಹಿತದೃಷ್ಟಿಯಿಂದ ಅವುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರದ ಒಡೆತನದಲ್ಲಿದೆ" ಎಂದು ಅವರು ತೀರ್ಪು ನೀಡಿದರು.

2019 ರ ನಂತರ, ಅವರು ಅಧಿಕೃತ ಜೀವನದಿಂದ ನಿವೃತ್ತರಾದರು ಮತ್ತು ಸಂಪೂರ್ಣವಾಗಿ ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಿದರು.

ಇದೀಗ ಸದ್ಯಕ್ಕೆ ಪೂರ್ತಿ ಪ್ರಮಾಣದಲ್ಲಿ 30 ಎಕರೆ ಹೊಲದಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. 5 ಹಸುಗಳನ್ನು ಕೂಡ ಸಾಕಿರುವುದಾಗಿ ತಿಳಿಸಿದ್ದಾರೆ.