News

ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ!..ಇಲ್ಲಿವೆ ಸಚಿವ ಸಂಪುಟ ಸಭೆಯ ಮಹತ್ವದ ನಿರ್ಧಾರಗಳು

12 November, 2023 2:36 PM IST By: Maltesh
Relaunch of Krishi Bhagya Yojana!..Here are the important decisions of the Cabinet meeting

ಮಾನ್ಸೂನ್‌ ಮಳೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ನಾಡಿನ ರೈತರಿಗೆ ಸಂಜೀವಿನಿಯಂತಿದ್ದ ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿಹೊಂಡಗಳ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿತಿನ್‌ ಹೊದಿಕೆ, ಹೊಂಡದಿಂದ ನೀರೆತ್ತಲು ಡೀಸೆಲ್‌ ಪಂಪ್‌ ಸೆಟ್‌, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಸಾಧನಗಳು, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣಕ್ಕಾಗಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಸಹಾಯಧನ ಒದಗಿಸಲಾಗುವುದು.

ಸಚಿವ ಸಂಪುಟ ಸಭೆಯ ಇನ್ನಿತರ ಪ್ರಮುಖ ನಿರ್ಣಯಗಳು

ಕೃಷಿಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸುವ ಉದ್ದೇಶದಿಂದ ತಲಾ 1 ಕೋಟಿ ವೆಚ್ಚದಲ್ಲಿ “100 ಹೈ-ಟೆಕ್ ಹಾರ್ವೆಸ್ಟರ್ ಹಬ್'ಗಳ ಸ್ಥಾಪನೆಗೆ ನಿರ್ಧಾರ.

ರಾಮನಗರ ಜಿಲ್ಲೆ ಕನಕಪುರ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸುವ  10.34 ಕೋಟಿ ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.

ರಾಜ್ಯದ ಪ್ರತಿ ಕಂದಾಯ ವಿಭಾಗದ 4 ಪದವಿಪೂರ್ವ ಕಾಲೇಜುಗಳನ್ನು ಒಳಗೊಂಡಂತೆ, ಮಹತ್ವಕಾಂಕ್ಷಿ ತಾಲೂಕುಗಳಲ್ಲಿನ 73 ಕೆ.ಪಿ.ಎಸ್ ಶಾಲೆಗಳು ಹಾಗೂ 50 ಆದರ್ಶ ವಿದ್ಯಾಲಯಗಳಲ್ಲಿ 7 20 ಕೋಟಿ ವೆಚ್ಚದಲ್ಲಿ “ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್'ಗಳ ಸ್ಥಾಪನೆಗೆ ತೀರ್ಮಾನ.

ಸಂವಿಧಾನ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಸಮ್ಮೇಳನ “ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಯ ಸಮಾವೇಶ" ವನ್ನು 7 18 ಕೋಟಿ ವೆಚ್ಚದಲ್ಲಿ ಆಯೋಜಿಸಲು ನಿರ್ಧಾರ.

ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ಬಿ.ಆರ್.ಟಿ ಸೇವೆಗೆ 7 45 ಕೋಟಿ ವೆಚ್ಚದಲ್ಲಿ 100 ಹೊಸ ಬಸ್ ಖರೀದಿಸಲು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಒಟ್ಟು 16.20 ಕೋಟಿ ವೆಚ್ಚದಲ್ಲಿ 24 ಹೊಸ ಬಸ್ ಖರೀದಿಸಲು ಅನುಮೋದನೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ್ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಿಗೆ 28.60 ಕೋಟಿ ವೆಚ್ಚದಲ್ಲಿ ಗ್ರೋಥ್ ಮಾನಿಟರಿಂಗ್ ಡಿವೈಸ್' ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ.

ಯರಗೋಳ್ ಯೋಜನೆಗೆ ಸಿಎಂ ಶಂಕುಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಕೋಲಾರ, ಬಂಗಾರಪೇಟೆ ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಾರಿಯ ಬಜೆಟ್ ನಲ್ಲಿ ಕೆಜಿಎಫ್ ನಲ್ಲಿರುವ 965  ಕೈಗಾರಿಕಾ ಪ್ರದೇಶದವನ್ನು ಬಿ.ಇ.ಎಂ.ಎಲ್ ನಿಂದ ಹಿಂಪಡೆದು ಅಲ್ಲಿ ಹೊಸ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು. ಹಿಂದೆ ಪ್ರತ್ಯೇಕವಾಗಿದ್ದ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಒಂದು ಮಾಡಲಾಗಿತ್ತು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. 

ಪ್ರತಿ 2 ತಿಂಗಳು ವಿದ್ಯುತ್ ಬಿಲ್ಲು ಕಟ್ಟಲಾಗುತ್ತಿತ್ತು. ಅದನ್ನು ತಪ್ಪಿಸಲು 50 ಎಕರೆ ಜಾಗದಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸಲು ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಅನುಕೂಲವಾಗಲಿದೆ. ಬರಗಾರವಿದ್ದರೂ 2,263 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದೇವೆ. ಕೆ.ಹೆಚ್.ಮುನಿಯಪ್ಪ ಅವರು ಸಚಿವರಾಗಿದ್ದಾಗ 83 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವುದಕ್ಕಾಗಿ ಹಾಗೂ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.