ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಸಲುವಾಗಿ ಶ್ರಮಿಕ್ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಇದರ ಜೊತೆಗೆ ಕೆಲವೊಂದು ಮಾರ್ಗಗಳಲ್ಲಿ ಕೆಲ ರೈಲುಗಳು ಸಂಚಾರ ಆರಂಭಿಸಿದ್ದವು.
ಆದರೆ ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲು ಸೇವೆ ಹಾಗೂ ಸಬ್ ಅರ್ಬನ್ ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ರದ್ದುಪಡಿಸಲಾಗಿದೆ ಎಂದು ರೈಲ್ವೆ ಮಂಡಳಿಯು ಗುರುವಾರ ಪ್ರಕಟಿಸಿದೆ.
ಆದರೆ, ರಾಜಧಾನಿ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಚರಿಸುತ್ತಿರುವ 12 ವಿಶೇಷ ರೈಲುಗಳು ಹಾಗೂ ಜೂನ್ 1ರಿಂದ ಕಾರ್ಯಾರಂಭ ಮಾಡಿರುವ 100 ಇತರೆ ರೈಲುಗಳ ಸಂಚಾರ ಎಂದಿನಂತೆ ಇರಲಿದೆ. ನಿಯಮಿತ ವೇಳಾಪಟ್ಟಿಯಂತೆ ಜುಲೈ 1ರಿಂದ ಆಗಸ್ಟ್ 12ರವರೆಗೆ ಮುಂಗಡ ಕಾದಿರಿಸಿದ್ದ ಟಿಕೆಟ್‌ಗಳು ರದ್ದಾಗಲಿವೆ. ಪೂರ್ಣ ಪ್ರಮಾಣ
ದಲ್ಲಿ ಹಣವನ್ನು ಹಿಂದಿರುಗಿಸಲಾಗು ವುದು ಎಂದು ಮೂಲಗಳು ಹೇಳಿವೆ.