ಕೇಂದ್ರ ಸರ್ಕಾರವು ಗುರುವಾರ ನಡೆಸಿದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಇದರಿಂದ ರೈತರಿಗೆ ಬಂಪರ್ ಕೊಡುಗೆಗಳು ಸಿಕ್ಕಿದೆ.
ರೈತರಿಗೆ ವಿಶಿಷ್ಟ ಪ್ಯಾಕೇಜ್ ಸಹ ಘೋಷಣೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್‌ನಿಂದ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಅವುಗಳಲ್ಲಿ ಪ್ರಮುಖವಾದ ಅಂಶಗಳು ಈ ಲೇಖನದಲ್ಲಿದೆ.
ಕೇಂದ್ರ ಸರ್ಕಾರವು ಘೋಷಿಸಿದ ವಿಶೇಷ ಪ್ಯಾಕೇಜ್‌ನಲ್ಲಿ ಗೋಬರ್ಧನ್ ಘಟಕಗಳಿಂದ ಸಾವಯವ ಗೊಬ್ಬರಗಳನ್ನು ಉತ್ತೇಜಿಸಲು
ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎ) ಯೋಜನೆಗೆ 1451.84 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ.
ಅನುಮೋದಿತ ಪ್ಯಾಕೇಜ್ ಮಾತೃಭೂಮಿಯ ಪುನಃಸ್ಥಾಪನೆ, ಪೋಷಣೆ ಮತ್ತು ಸುಧಾರಣೆಗಾಗಿ ವಿನೂತನ ಪ್ರೋತ್ಸಾಹಕ ಕಾರ್ಯವಿಧಾನವನ್ನು ಒಳಗೊಂಡಿದೆ.
ಸಾವಯವ ಗೊಬ್ಬರಗಳ ಮಾರುಕಟ್ಟೆಯನ್ನು ಬೆಂಬಲಿಸಲು ಜೈವಿಕ ಅನಿಲದಿಂದ ಉಪ-ಉತ್ಪನ್ನವಾಗಿ ಉತ್ಪಾದಿಸಲಾದ ಹುದುಗಿಸಿದ ಸಾವಯವ ಗೊಬ್ಬರಗಳು
(ಎಫ್‌ಒ ಎಂ)/ದ್ರವೀಕೃತ ಎಫ್ ಒ ಎಂ/ಫಾಸ್ಫೇಟ್ ಸಮೃದ್ಧ ಸಾವಯವ ಗೊಬ್ಬರ (PROM) ಗಳಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂ. 1500 ರೂಪದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯ (ಎಂಡಿಎ)
ಯೋಜನೆಯ ಗೊಬರ್ಧನ್ ಉಪಕ್ರಮದ ಅಡಿಯಲ್ಲಿ ಸ್ಥಾಪಿಸಲಾದ ಘಟಕಗಳು/ಕಂಪ್ರೆಸ್ಡ್ ಜೈವಿಕ ಅನಿಲ (ಸಿಬಿಜಿ) ಘಟಕಗಳಿಗೆ ನೀಡಲು ನಿರ್ಧರಿಸಲಾಗಿದೆ.
ಅಂತಹ ಸಾವಯವ ಗೊಬ್ಬರಗಳನ್ನು ಭಾರತ್ ಬ್ರಾಂಡ್ FOM, LFOM ಮತ್ತು PROM ಹೆಸರಿನಲ್ಲಿ ಬ್ರಾಂಡ್ ಮಾಡಲಾಗುತ್ತದೆ.
ಇದು ಒಂದೆಡೆ ಬೆಳೆ ಅವಶೇಷಗಳ ನಿರ್ವಹಣೆಯ ಸವಾಲು ಮತ್ತು ಬೆಳೆ ತ್ಯಾಜ್ಯ ಸುಡುವಿಕೆಯ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ.
ಪರಿಸರವನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತದೆ.
ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಸಾವಯವ ಗೊಬ್ಬರಗಳು (FOM/LFOM/ PROM) ಸಿಗುತ್ತವೆ.
ಈ ಉಪಕ್ರಮವು ಈ ಬಿಜಿ/ಸಿಬಿಜಿ ಘಟಕಗಳ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಮರುಬಳಕೆ
ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ ಯೋಜನೆಯಡಿಯಲ್ಲಿ 500 ಹೊಸ ತ್ಯಾಜ್ಯದಿಂದ ಸಂಪತ್ತು
ಘಟಕಗಳನ್ನು ಸ್ಥಾಪಿಸುವ ಬಜೆಟ್ ಘೋಷಣೆಯ ಅನುಷ್ಠಾನವನ್ನು ಸುಗಮಗೊಳಿಸುತ್ತದೆ.
ಸುಸ್ಥಿರ ಕೃಷಿ ಪದ್ಧತಿಯಾಗಿ ಸಹಜ ಕೃಷಿಯನ್ನು ಉತ್ತೇಜಿಸುವುದು ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸುತ್ತದೆ ಮತ್ತು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
425 ಕೆವಿಕೆಗಳು (ಕೃಷಿ ವಿಜ್ಞಾನ ಕೇಂದ್ರಗಳು) ಸಹಜ ಕೃಷಿ ಪದ್ಧತಿಗಳ ಪ್ರಾತ್ಯಕ್ಷಿಕೆಗಳನ್ನು ನೀಡಿವೆ ಮತ್ತು 6.80 ಲಕ್ಷ ರೈತರನ್ನು ಒಳಗೊಂಡ 6,777 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಬಿ ಎಸ್ ಸಿ ಮತ್ತು ಎಂ ಎಸ್ ಸಿ ಕೋರ್ಸ್ ನಲ್ಲಿ ಜುಲೈ-ಆಗಸ್ಟ್ 2023 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಹಜ ಕೃಷಿಯ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ.
ಮಣ್ಣಿನ ಸಲ್ಫರ್ ಕೊರತೆಯನ್ನು ನಿವಾರಿಸಲು ಮತ್ತು ರೈತರ ಕೃಷಿ ವೆಚ್ಚವನ್ನು ಉಳಿಸಲು ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನ) ಪರಿಚಯಸಿಲಾಗಿದೆ.
ಪ್ಯಾಕೇಜ್‌ನ ಮತ್ತೊಂದು ಉಪಕ್ರಮವೆಂದರೆ ಸಲ್ಫರ್ ಲೇಪಿತ ಯೂರಿಯಾ (ಯೂರಿಯಾ ಚಿನ್ನ) ವನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.
ಪ್ರಸ್ತುತ ಬಳಸುತ್ತಿರುವ ಬೇವು ಲೇಪಿತ ಯೂರಿಯಾಕ್ಕಿಂತ ಇದು ಹೆಚ್ಚು ಮಿತವ್ಯಯ ಮತ್ತು ಪರಿಣಾಮಕಾರಿಯಾಗಿದೆ.
ಇದು ದೇಶದ ಮಣ್ಣಿನಲ್ಲಿ ಗಂಧಕದ ಕೊರತೆಯನ್ನು ನಿವಾರಿಸುತ್ತದೆ.
ಇದು ರೈತರಿಗೆ ಕೃಷಿ ವೆಚ್ಚವನ್ನು ಉಳಿಸುತ್ತದೆ ಮತ್ತು ವರ್ಧಿತ ಉತ್ಪಾದನೆ ಮತ್ತು ಉತ್ಪಾದಕತೆಯೊಂದಿಗೆ ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಒಂದು ಲಕ್ಷ ಮುಟ್ಟಿದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (ಪಿಎಂಕೆಎಸ್‌ಕೆ);
ದೇಶದಲ್ಲಿ ಈಗಾಗಲೇ ಸುಮಾರು ಒಂದು ಲಕ್ಷ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (ಪಿಎಂಕೆಎಸ್‌ಕೆ) ಇವೆ.
ರೈತರ ಅನುಕೂಲಕ್ಕಾಗಿ, ರೈತರ ಎಲ್ಲಾ ಅಗತ್ಯಗಳಿಗೆ ಒಂದು ನಿಲುಗಡೆ ಪರಿಹಾರವಾಗಿ ಕೃಷಿ ಸಂಬಂಧಿ ಪರಿಕರಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.
ಪ್ರಯೋಜನಗಳು:
ಅನುಮೋದಿತ ಯೋಜನೆಗಳು ರಾಸಾಯನಿಕ ಗೊಬ್ಬರಗಳ ವಿವೇಚನಾಯುಕ್ತ ಬಳಕೆಗೆ ಸಹಾಯ ಮಾಡುತ್ತವೆ.
ಇದರಿಂದಾಗಿ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತವೆ. ಸಹಜಕ/ಸಾವಯವ ಕೃಷಿ, ನವೀನ ಮತ್ತು ಪರ್ಯಾಯ ಗೊಬ್ಬರಗಳಾದ
ನ್ಯಾನೋ ರಸಗೊಬ್ಬರಗಳು ಮತ್ತು ಸಾವಯವ ಗೊಬ್ಬರಗಳನ್ನು ಉತ್ತೇಜಿಸುವುದು ನಮ್ಮ ಭೂಮಿ ತಾಯಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತವೆ.
ಸುಧಾರಿತ ಮಣ್ಣಿನ ಆರೋಗ್ಯವು ಹೆಚ್ಚಿದ ಪೋಷಕಾಂಶದ ದಕ್ಷತೆಗೆ ಕಾರಣವಾಗುತ್ತದೆ ಮತ್ತು ಮಣ್ಣು ಮತ್ತು ನೀರಿನ ಮಾಲಿನ್ಯದ ಕಡಿತದಿಂದಾಗಿ ಸುರಕ್ಷಿತ ವಾತಾವರಣ ಸೃಷ್ಟಿಯಾಗುತ್ತದೆ.
ಸುರಕ್ಷಿತ ಮತ್ತು ಸ್ವಚ್ಛ ಪರಿಸರವು ಮಾನವನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ii ಪರಾಲಿಯಂತಹ ಬೆಳೆ ಅವಶೇಷಗಳ ಉತ್ತಮ ಬಳಕೆಯು ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ
ಮತ್ತು ಸ್ವಚ್ಛತೆ ಮತ್ತು ಜೀವನ ಪರಿಸರವನ್ನು ಸುಧಾರಿಸುತ್ತದೆ ಮತ್ತು ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
Iii ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ - ಅದೇ ಕೈಗೆಟುಕುವ ಬೆಲೆಯಲ್ಲಿ ಯೂರಿಯಾ ಲಭ್ಯವಾಗುವುದರಿಂದ ಅವರು ಹೆಚ್ಚುವರಿಯಾಗಿ ಏನನ್ನೂ ಪಾವತಿಸಬೇಕಾಗಿಲ್ಲ.
ಸಾವಯವ ಗೊಬ್ಬರಗಳು (FOM/PROM) ಸಹ ಅಗ್ಗದ ಬೆಲೆಯಲ್ಲಿ ಲಭ್ಯವಿರುತ್ತವೆ.
ಕಡಿಮೆ ಬೆಲೆಯ ನ್ಯಾನೋ ಯೂರಿಯಾ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮತ್ತು ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಿದರೆ.
ರೈತರಿಗೆ ಕೃಷಿ ವೆಚ್ಚವು ಕಡಿಮೆಯಾಗುತ್ತದೆ.
ಆರೋಗ್ಯಕರ ಮಣ್ಣು ಮತ್ತು ನೀರಿನೊಂದಿಗೆ ಕಡಿಮೆ ಕೃಷಿ ವೆಚ್ಚವು ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಆದಾಯವನ್ನು ಪಡೆಯುತ್ತಾರೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.