News

ಸಿಎನ್‌ಜಿ ಹಾಗೂ PNG ಬೆಲೆಯಲ್ಲಿ ಇಳಿಕೆ

10 April, 2023 4:11 PM IST By: Maltesh
Reduction in CNG and PNG prices

1.. ಬಂಡೀಪುರ ಅರಣ್ಯದಲ್ಲಿ ಮೋದಿ ಸಫಾರಿ..ಖಾಕಿ ಪ್ಯಾಂಟ್, ಟೀ ಶರ್ಟ್ ತೊಟ್ಟು ಮಿಂಚಿದ ನಮೋ

2.. PM MUDRA Yojana: 10 ಲಕ್ಷದವರೆಗಿನ ಸಾಲ ವಿತರಣೆ, ₹23.2 ಲಕ್ಷ ಕೋಟಿ ಮಂಜೂರು

3.. ನಂದಿನಿ  ನಂಬರ್ ಒನ್ ಬ್ರ್ಯಾಂಡ್ ಈ ವಿಚಾರದಲ್ಲಿ ರಾಜಕಾರಣ ಬೇಡ-ಸಿಎಂ ಬೊಮ್ಮಾಯಿ

4.. ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆ- ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ  ಸೀತಾರಾಮನ್ ಭಾಗಿ

5.. ಪ್ರಾಜೆಕ್ಟ್‌ ಟೈಗರ್‌ಗೆ 50 ವರ್ಷ ಮಹತ್ವದ ಮೈಲಿಗಲ್ಲು- ಪ್ರಧಾನಿ ಮೋದಿ

6.. ನೈಸರ್ಗಿಕ ಅನಿಲ ದರ ಪರಿಷ್ಕರಣೆ: ಸಿಎನ್‌ಜಿ ಹಾಗೂ PNG ಬೆಲೆಯಲ್ಲಿ ಇಳಿಕೆ

7.. ರಾಜ್ಯ ಚುನಾವಣೆ: ಖಾಸಗಿ/ಸರ್ಕಾರಿ ಉದ್ಯೋಗಿಗಳಿಗೆ 1 ದಿನ ವೇತನ ಸಹಿತ ರಜೆ ಘೋಷಣೆ

1..

ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ಈ ವೇಳೆ ಅವರು ಖಾಕಿ ಪ್ಯಾಂಟ್, ಟೀ ಶರ್ಟ್ ಮತ್ತು ಗಿಲೆಟ್ ಸ್ಲೀವ್‌ಲೆಸ್ ಜಾಕೆಟ್ ಧರಿಸಿ ಮಿಂಚಿದ್ದಾರೆ. ಈ ಮೂಲಕ ಭಾರತದ ಹುಲಿ ಅಭಯಾರಣ್ಯಗಳಲ್ಲಿ ಅಗ್ರಸ್ಥಾನ ಪಡೆದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

2..

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸ್ಕೀಮ್ ಪ್ರಾರಂಭವಾದಾಗಿನಿಂದ 40.82 ಕೋಟಿ ಸಾಲ ಖಾತೆಗಳಲ್ಲಿ, ಸುಮಾರು ₹23.2 ಲಕ್ಷ ಕೋಟಿ ಮಂಜೂರಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಯೋಜನೆಯಡಿಯಲ್ಲಿ ಸುಮಾರು 68% ಖಾತೆಗಳು ಮಹಿಳಾ ಉದ್ಯಮಿಗಳಿಗೆ ಮತ್ತು 51% ಖಾತೆಗಳು SC/ST ಮತ್ತು OBC ವರ್ಗಗಳ ಉದ್ಯಮಿಗಳಿಗೆ ಸೇರಿವೆ. 2015 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಆದಾಯ ಉತ್ಪಾದಿಸುವ ಚಟುವಟಿಕೆಗಳಿಗಾಗಿ ₹10 ಲಕ್ಷದವರೆಗಿನ ಸುಲಭವಾದ ಮೇಲಾಧಾರ-ಮುಕ್ತ ಮೈಕ್ರೋ ಕ್ರೆಡಿಟ್ ಅನ್ನು ಸುಲಭಗೊಳಿಸುವ ಉದ್ದೇಶದಿಂದ ಇದನ್ನು ಪ್ರಾರಂಭಿಸಿದರು.

3..

ನಂದಿನಿ ನಂಬರ್ ಒನ್ ಬ್ರ್ಯಾಂಡ್  ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ  ಕೈಗೊಳ್ಳಲಾಗುವುದು ಎಂದರು ಇನ್ನು ಕಾಂಗ್ರೆಸ್‌ ಇದಕ್ಕೆ ಪ್ರತಿಯಾಗಿ  ಟ್ವೀಟ್‌ ಮಾಡಿದ್ದು, ನಂದಿನಿ ಎಂದರೆ ಬರೀ ಹಾಲಲ್ಲ, ರಾಜ್ಯದ ರೈತರ ಬೆವರು, ಬದುಕು, ಭವಿಷ್ಯ. ನಂದಿನಿಯನ್ನು ನಂಬಿ ಬದುಕುವ ಕೋಟ್ಯಂತರ ರೈತರ ಬೆನ್ನಿಗೆ ಚೂರಿ ಹಾಕಲು ಈ ಸರ್ಕಾರ ಹೊರಟಿದ್ದು, ರಾಜ್ಯದ ರೈತರ ಹಿತ ಬಲಿ ಕೊಡುತ್ತಿರುವುದು ಅಕ್ಷಮ್ಯ ಎಂದು ವಾಗ್ದಾಳಿ ನಡೆಸಿದೆ.

4..

ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ  ಸೀತಾರಾಮನ್,  ಇಂದು ಅಮೆರಿಕಕ್ಕೆ  ಅಧಿಕೃತ ಭೇಟಿ ನೀಡಲಿದ್ದು, ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ   ಭಾಗಿಯಾಗಲಿದ್ದಾರೆ. ವಾಷಿಂಗ್ಟನ್  ಡಿಸಿಯಲ್ಲಿ  ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆ ಆರಂಭವಾಗಲಿದೆ.  ಇದೇ ವೇಳೆ  ಅವರು, ಜಿ-೨೦ ರಾಷ್ಟ್ರಗಳ  ತಮ್ಮ ಸಹವರ್ತಿ ಸಚಿವರು ಹಾಗೂ ವಿವಿಧ ನಿಯೋಗಗಳ ಮುಖ್ಯಸ್ಥರೊಂದಿಗೂ  ಸಮಾಲೋಚನೆ ನಡೆಸಲಿದ್ದು, ಅವರ ಸಮ್ಮುಖದಲ್ಲಿ ದ್ವಿಪಕ್ಷೀಯ ಒಪ್ಪಂದಗಳಿಗೆ  ಸಹಿ  ಹಾಕುವ  ನಿರೀಕ್ಷೆಯಿದೆ.

5..ಭಾರತದಲ್ಲಿ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೈಸೂರಿನಲ್ಲಿ ಹುಲಿ ಯೋಜನೆಯ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಹುಲಿ ಯೋಜನೆಗೆ ೫೦ ವರ್ಷ ತುಂಬಿರುವುದು ಮಹತ್ವದ ಮೈಲುಗಲ್ಲಾಗಿದೆ. ಭಾರತ ಕೇವಲ ಹುಲಿಗಳನ್ನು ಸಂರಕ್ಷಿಸಿರುವುದಲ್ಲದೇ, ಇವುಗಳ ಸಂತತಿ ವೃದ್ಧಿಗೆ ಅತ್ಯುತ್ತಮ ವಾತಾವರಣವನ್ನು ನಿರ್ಮಿಸಿಕೊಟ್ಟಿದೆ. ಹುಲಿ ಯೋಜನೆಯು ಚಿರತೆಗಳ ಸಂರಕ್ಷಣೆಗೂ ನೆರವಾಗಿದೆ. ಹುಲಿ ಯೋಜನೆಯ ಯಶಸ್ಸು ಕೇವಲ ಭಾರತಕ್ಕಷ್ಟೇ ಅಲ್ಲದೇ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

6..ನೈಸರ್ಗಿಕ ಅನಿಲದ ಬೆಲೆ ನಿಗದಿ ಸೂತ್ರವನ್ನು ಕೇಂದ್ರ ಸರ್ಕಾರ  ಪರಿಷ್ಕರಿಸಿದ ಬೆನ್ನಲ್ಲೇ, ಗೇಲ್‌ ಗ್ಯಾಸ್ ಲಿಮಿಟೆಡ್ ಸಿಎನ್‌ಜಿ ಹಾಗೂ PNG  ಅಡುಗೆ ಅನಿಲದ ಬೆಲೆಯನ್ನು ಇಳಿಕೆ ಮಾಡಿದೆ. ಯೂನಿಟ್‌ಗೆ  7 ರೂಪಾಯಿ ಇಳಿಕೆ ಮಾಡಲಾಗಿದೆ.  ಕರ್ನಾಟಕದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬೆಲೆ ಇಳಿಕೆಯ ಪ್ರಮಾಣವು ಬೇರೆಕಡೆಗಳಿಗಿಂತ ಇಲ್ಲಿ ಹೆಚ್ಚಾಗಿದೆ. CNG ಇದೀಗ ಅಗ್ಗವಾದ ಬೆನ್ನಲ್ಲೇ 82.50ಕ್ಕೆ ತಲುಪಿದೆ. ಇನ್ನು ಇತರ ಕಡೆಗಳಲ್ಲಿ ಸಿಎನ್‌ಜಿ ಬೆಲೆ ಇಳಿಕೆಯು ಕೆ.ಜಿ.ಗೆ ₹ 6ರಷ್ಟು ಇಳಿಕೆ ಆಗಿದೆ.

7..ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಆಗಿದ್ದು, ಎಲ್ಲ ಪಕ್ಷಗಳು ಪ್ರಚಾರದಲ್ಲಿ ಬ್ಯೂಸಿಯಾಗಿವೆ. ಇನ್ನು ಮೇ 10  ರಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ವೇತನ ಸಹಿತ ರಜೆ ಲಭ್ಯವಾಗಲಿದೆ. ವೋಟಿಂಗ್‌ ನಡೆಯುವ ದಿನದಂದು ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ರಜೆ  ನೀಡಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಇದರ ಬೆನ್ನಲ್ಲೇ ಆಯೋಗವು ಈ ಎರಡು ಕ್ಷೇತ್ರದ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕೆಂದು ಕಟ್ಟು ನಿಟ್ಟಾಗಿ ಆದೇಶ ಮಾಡಿದೆ.

ಇದನ್ನೂ ಓದಿರಿ: ಭಾರತೀಯ ರೈಲ್ವೆ: ರೈಲು ಅಪಘಾತದಲ್ಲಿ ಸಾವಿರಾರು ಜಾನುವಾರು ಸಾವು! 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ!