News

Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ

11 February, 2023 2:13 PM IST By: Hitesh
Record Tax Collection in January in Gst State!, Here's How Much

ರಾಜ್ಯ ಸರ್ಕಾರವು ಜಿಎಸ್‌ಟಿ ಸಂಗ್ರಹದಲ್ಲಿ ಈ ಬಾರಿ ದಾಖಲೆಯ ಸಾಧನೆಯನ್ನು ಮಾಡಿದೆ.

RBI Repo Rate Hiked: ಆರ್‌ಬಿಐ ರೆಪೋ ದರದಲ್ಲಿ ಮತ್ತೆ ಏರಿಕೆ! 

ಇದಕ್ಕೆ ಹೆಚ್ಚಿದ ಬಳಕೆ, ತೆರಿಗೆ ಅನುಸರಣೆ ಮತ್ತು ಹಣದುಬ್ಬರದ ಪರಿಣಾಮಗಳಿಂದ ಉತ್ತೇಜಿತ ಕ್ರಮವೂ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.  

ರಾಜ್ಯ ಸರ್ಕಾರವು ಜನವರಿಯಲ್ಲಿ 11,317 ಕೋಟಿ ಜಿಎಸ್‌ಟಿ ಮೊತ್ತವನ್ನು ಸಂಗ್ರಹಿಸಿದ್ದು, ಇದು ಸಾರ್ವಕಾಲಿಕ ಮಾಸಿಕ ಗರಿಷ್ಠ ಮೊತ್ತವನ್ನೂ ಹೆಚ್ಚಿಸಿದೆ.

ಇನ್ನು ತಿಂಗಳ ಒಟ್ಟಾರೆ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣವೂ ಒಟ್ಟು 13,141 ಕೋಟಿ ರೂಪಾಯಿಗೆ ತಲುಪಿದೆ.  

Medical Negligence | ವೈದ್ಯಕೀಯ ನಿರ್ಲಕ್ಷ್ಯ ಎಸಗಿದ ಪ್ರಸೂತಿ ತಜ್ಞೆಗೆ 11 ಲಕ್ಷ ದಂಡ!

ಪ್ರಸಕ್ತ ವರ್ಷದ ಜನವರಿಯ ಹಿಂದಿನ ಪ್ರತಿ ತ್ರೈ ಮಾಸಿಕಕ್ಕೆ ಹೋಲಿಕೆ  ಮಾಡಿದರೆ,  ರಾಜ್ಯವು ಜಿಎಸ್‌ಟಿಯಲ್ಲಿ ಬರೋಬ್ಬರಿ 10,000 ಸಾವಿರ ಕೋಟಿಗಿಂತ ಹೆಚ್ಚು ಆದಾಯವನ್ನು ಸಂಗ್ರಹಿಸಿದೆ.

ರಾಜ್ಯವು ಮೋಟಾರು ಇಂಧನಗಳ ಮೇಲಿನ ಮಾರಾಟ ತೆರಿಗೆಯಿಂದಲೇ 1,716.5 ಕೋಟಿ ರೂಪಾಯಿ ಹಾಗೂ ಕಳೆದ ತಿಂಗಳು ವೃತ್ತಿಪರ ತೆರಿಗೆಯಿಂದ 107. 5 ಕೋಟಿ ರೂಪಾಯಿಯನ್ನೂ ಸಂಗ್ರಹಿಸಿದೆ.

ಈ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿರುವುದು ಮುಂದಿನ ದಿನಗಳಲ್ಲಿ ಬಜೆಟ್‌ ಮೇಲಿನ ನಿರೀಕ್ಷೆ ಹೆಚ್ಚಾಗಲೂ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ವಾಣಿಜ್ಯ ತೆರಿಗೆ GST, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಮತ್ತು ವೃತ್ತಿಪರ ತೆರಿಗೆಯನ್ನು ಒಳಗೊಂಡಿದೆ.

PM Krishi Sinchai Yojana : ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನ!

ಆದರೆ, ಇದರ ಹೊರತಾಗಿ ಒಟ್ಟು ಜಿಎಸ್‌ಟಿ ಸಂಗ್ರಹವು ಕೇಂದ್ರ ಘಟಕ (ಸಿಜಿಎಸ್‌ಟಿ) ಮತ್ತು ಇತರ ರಾಜ್ಯಗಳಿಗೆ ಪಾವತಿಸಬೇಕಾದ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ಅನ್ನು ಒಳಗೊಂಡಿರುವುದರಿಂದ ಇವೆಲ್ಲವೂ ರಾಜ್ಯಕ್ಕೆ ಸೇರುವುದಿಲ್ಲ.

ಸಂಗ್ರಹಿಸಲಾದ ಒಟ್ಟಾರೆ GST ಯಿಂದ ರಾಜ್ಯದ ನಿಖರವಾದ ಆದಾಯವು SGST ಮತ್ತು IGSTಗೆ ಸೀಮಿತವಾಗಿದೆ. ಹೀಗಾಗಿ, 11,317 ಕೋಟಿ ರೂಪಾಯಿ ಮೊತ್ತದಲ್ಲಿ ರಾಜ್ಯವು 6,085 ಕೋಟಿ ರೂಪಾಯಿಗಳನ್ನು (ಎಸ್‌ಜಿಎಸ್‌ಟಿಯಲ್ಲಿ 3,280. 8 ಕೋಟಿ ರೂ. ಮತ್ತು ಐಜಿಎಸ್‌ಟಿ ಸೆಟಲ್‌ಮೆಂಟ್‌ನಲ್ಲಿ 2,795. 6 ಕೋಟಿ ರೂ.) ಸರ್ಕಾರಕ್ಕೆ ಸೇರಲಿದೆ.

ಇದು ಯಾವುದೇ ತಿಂಗಳಿನಲ್ಲಿ ಇದುವರೆಗಿನ ಅತಿ ಹೆಚ್ಚು ಸಂಗ್ರಹ ಮೊತ್ತವಾಗಿದೆ. ಜನವರಿಯಲ್ಲಿ ವಾಣಿಜ್ಯ ತೆರಿಗೆಗಳಿಂದ ಬಂದ ಹಣ 7,909.4 ಕೋಟಿ ರೂಪಾಯಿ ಆಗಿದೆ.

ಈ ಏರಿಕೆಯೊಂದಿಗೆ ಕರ್ನಾಟಕ ತನ್ನ ವಾರ್ಷಿಕ ವಾಣಿಜ್ಯ ತೆರಿಗೆ ಗುರಿ 77,010 ಕೋಟಿಯನ್ನು ಮೀರುವ ನಿರೀಕ್ಷೆಯಿದೆ ಎನ್ನಲಾಗಿದೆ.

ಸಂಗ್ರಹಣೆಯು 96,000 ಸಾವಿರ ಕೋಟಿ ರೂಪಾಯಿಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

ಈ ಪ್ರಮಾಣವು ಗುರಿಗಿಂತ ಶೇ 25ರಷ್ಟು ಹೆಚ್ಚಾಗಿದೆ. ಜನವರಿ 31ರ ಹೊತ್ತಿಗೆ ಕರ್ನಾಟಕದಲ್ಲಿ ಒಟ್ಟು ವಾಣಿಜ್ಯ ತೆರಿಗೆಗಳು 71,722.7 ಕೋಟಿ ರೂಪಾಯಿ ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯಿಂದ ಆದಾಯ ಹೆಚ್ಚಳವಾಗಿರುವುದು ಇದಕ್ಕೆ ಒಂದು ಕಾರಣ.

ಆಗಸ್ಟ್ 2022 ರಲ್ಲಿ ವಿರಾಮದ ನಂತರ, ಸಂಗ್ರಹಣೆಗಳು ಶೇ 11. 5 ರಷ್ಟು ಕುಸಿದಿತ್ತು.

ಸುಧಾರಣೆಗಳು ಮತ್ತು ಅನುಸರಣೆ ಬೊಮ್ಮಾಯಿ ಮತ್ತು ತೆರಿಗೆ ಅಧಿಕಾರಿಗಳು ಈ ಹೆಚ್ಚಳಕ್ಕೆ ಬಹು ಕಾರಣಗಳನ್ನು ನೀಡಿದ್ದಾರೆ.

ಆದರೆ, ಹೆಚ್ಚಿದ ಬಳಕೆ ಮತ್ತು ಸುಧಾರಣೆಗಳು ಮತ್ತು ಅನುಸರಣೆಗೆ ಒತ್ತು ನೀಡಿದ್ದಕ್ಕಾಗಿ ಹೆಚ್ಚು ತೆರಿಗೆ ಸಂಗ್ರವಾಗಿದೆ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಪಾಲಿ ಹೌಸ್ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಫೆ.10 ಕೊನೆ ದಿನ!