News

41 ಸಾವಿರಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಬ್ಯಾಡಗಿ ಮೆಣಸಿನಕಾಯಿ

20 December, 2020 3:07 PM IST By:
chilli

ಹುಬ್ಬಳ್ಳಿಯಲ್ಲಿನ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಶನಿವಾರದ ಟೆಂಡರ್‌ನಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿಗೆ ದಾಖಲೆಯ ದರ ನಿಗದಿಯಾಗಿರುವುದು ಒಂದೆಡೆಯದಾರೆ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಕಾಯಿಯೂ 41 ಸಾವಿರ್ಕಕೆ ಮಾರಾಟವಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಮೆಣಸಿನಕಾಯಿ ಕ್ವಿಂಟಲ್‍ಗೆ. 38,100 ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿದೆ. ಇದು ಇಲ್ಲಿನ ಎಪಿಎಂಸಿಯಲ್ಲಿ ಈ ವರ್ಷ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ಹೊಂದಿದೆ.

ಗದಗ ಎಪಿಎಂಸಿಯಲ್ಲಿ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸುರೇಶ ಜೋಗರಡ್ಡಿ ಎನ್ನುವವರಿಗೆ ಸೇರಿದ ಡಬ್ಬಿ ಒಣಸಿನ ಮೆಣಸಿನಕಾಯಿ ಬರೋಬ್ಬರಿ 41,125 ರೂಪಾಯಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಕೊರೋನಾ ವೈರಸ್ ಹಾವಳಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಗದ್ದಲ, ಅತಿವೃಷ್ಟಿ ಮುಂತಾದ ಸಮಸ್ಯೆಗಳಿದ್ದರೂ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೆ ಆವಕ ಏರಿಕೆಯಿಂದ ರೈತರಿಗೆ ಬಂಪರ್ ದರ ಸಿಗುತ್ತಿದೆ.

‘ಟೆಂಡರ್‌ನಲ್ಲಿ ಸಿ.ಬಿ. ಶಿಗ್ಗಾವ್‌ ಅಂಡ್ ಸನ್ಸ್‌ ದಲ್ಲಾಳಿ ಅಂಗಡಿ ಮಾರಾಟಕ್ಕೆ ಬಂದಿದ್ದ ಬೂದಿಹಾಳ ರೈತ ವಸಂತ ಗೌಡ ಪಾಟೀಲ ಅವರ ಡಬ್ಬಿ ಒಣಮೆಣಸಿನಕಾಯಿಯನ್ನು 38,100 ಬೆಲೆಗೆ ಎ.ಆರ್. ನದಾಫ್ ಖರೀದಿಸಿದ್ದಾರೆ. ಇನ್ನೂ ಕಡ್ಡಿನ ತಳಿಯ ಮೆಣಸಿನಕಾಯಿಗೆ ಪಾಟೀಲ್ ಬ್ರದರ್ಸ್ ಅಂಗಡಿಯಲ್ಲಿ ಕ್ವಿಂಟಾಲಿಗೆ 37100 ರೂಪಾಯಿಗೆ ಮಾರಾಟವಾಗಿದೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆತಿತ್ತು. ಇದಕ್ಕೂ ಮೀರಿದ ಬೆಲೆ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಲಭಿಸಿದೆ. ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರ ಒಣಮೆಣಸಿನಕಾಯಿ ಆವಕ ನಡೆಯುತ್ತದೆ.