News

Ration Card ಶೀಘ್ರ ನೂತನ ರೇಷನ್‌ ಕಾರ್ಡ್‌ ವಿತರಣೆ: ಏನು ವಿಶೇಷ ?

16 November, 2023 12:39 PM IST By: Hitesh
ರೇಷನ್‌ ಕಾರ್ಡ್‌ನ ಹೊಸ ಅಪ್ಡೇಟ್ಸ್‌ ಇಲ್ಲಿದೆ

ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.

ರಾಜ್ಯ ಸರ್ಕಾರವು ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಇದೀಗ ಹೊಸ ಪಡಿತರ ಚೀಟಿಗಾಗಿ 2.90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಶೀಲನೆ ಮಾಡಿ,

ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು

ಸಚಿವ ಕೆ.ಎಚ್‌. ಮುನಿಯಪ್ಪ ಅವರು ಹೇಳಿದ್ದಾರೆ.  

ವಿದ್ಯುತ್‌ ಯೋಜನೆ: ಸರ್ಕಾರದಿಂದ 389 ಕೋಟಿ ರೂ ಬಾಕಿ ಬಿಲ್‌ ಮನ್ನಾ

ವಿವಿಧ ವಿದ್ಯುತ್‌ ಯೋಜನೆಗಳ 389 ಕೋಟಿ ಬಾಕಿ ಬಿಲ್‌ ಅನ್ನು ರಾಜ್ಯ ಸರ್ಕಾರ ಮನ್ನಾ ಮಾಡಿ ಆದೇಶ ಮಾಡಿದೆ.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೆ ಹಿಂದೆ 18 ಯೂನಿಟ್‍ಗಳ ಮಿತಿಯಿತ್ತು.

ಅದನ್ನು 40 ಯೂನಿಟ್‍ಗಳಿಗೆ  ಸರ್ಕಾರ ಹೆಚ್ಚಳ ಮಾಡಿತ್ತು.

ಈಗ ಗೃಹಜ್ಯೋತಿ ಯೋಜನೆ ಜಾರಿಯ ನಂತರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿಗಳನ್ನು ಈ ಯೋಜನೆಯಡಿ

ಸೇರಿಸಿ, 58 ಯೂನಿಟ್‍ವರಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ

ಯೋಜನೆಗಳಡಿ ರೂ.389 ಕೋಟಿ ಬಾಕಿ ಬಿಲ್‌ ಇತ್ತು. ಇದೀಗ ಸರ್ಕಾರವು ಬಾಕಿ ಮೊತ್ತವನ್ನು ಮನ್ನಾ ಮಾಡಿದೆ.

ಬರ ನಿರ್ವಹಣೆ: ಪ್ರತಿ ತಾಲ್ಲೂಕಿಗೆ ಬರೋಬ್ಬರಿ 50 ಲಕ್ಷ ರೂ.

ರಾಜ್ಯದ ಬರದ ಹಿನ್ನೆಲೆಯಲ್ಲಿ ಎಲ್ಲ ತಾಲ್ಲೂಕುಗಳಿಗೆ ತಲಾ 50 ಲಕ್ಷ ರೂಪಾಯಿ ಕುಡಿಯುವ ನೀರು ಪೂರೈಸಲು

ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬರಪರಿಹಾರ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಜಾನುವಾರುಗಳಿಗೆ 24 ತಿಂಗಳಿಗೆ

ಆಗುವಷ್ಟು ಮೇವಿನ ಸಂಗ್ರಹ ಇದೆ. ಅಲ್ಲದೇ ಜನ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ.

ಗೋವುಗಳ ಮೇವು ಬೆಳೆಯುವುದಕ್ಕೂ ಹಣ ನೀಡಲಾಗಿದೆ.

ತೆಂಗಿನ ಬೆಳೆಗೆ ರೋಗ ಬಂದು ಬೆಳೆ ನಾಶ ಆಗಿದೆ. ರೈತರಿಗೆ ಪರಿಹಾರ ನೀಡಬೇಕು ಎನ್ನುವ ಬೇಡಿಕೆ ಇದ್ದು,

ಎನ್‌ಡಿಆರ್‌ಎಫ್‌ ನಿಂದ ಇನ್ನೂ ಪರಿಹಾರ ಹಣ ಬಂದಿಲ್ಲ. ರಾಜ್ಯ ಸರ್ಕಾರದಿಂದಲೇ ಹಣ ಬಿಡುಗಡೆ ಮಾಡಲಾಗಿದೆ.

ಇನ್ನು ತೆಂಗು ಬೆಳೆ ನಾಶ ಪರಿಹಾರಕ್ಕಾಗಿ ಅಗತ್ಯ ಹಣಕ್ಕೆ ಬೇಡಿಕೆ ಸಲ್ಲಿಸಿ ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯಬೇಕು

ಎಂದು ಸೂಚನೆ ನೀಡಿದರು. ಅಲ್ಲದೇ  ಫಸಲ್ ವಿಮಾ ಯೋಜನೆಯ ಸ್ಕೀಂನಲ್ಲಿ ಹಲವು ಅವೈಜ್ಞಾನಿಕ ತೊಡಕುಗಳಿವೆ.

ಆದರೆ, ಕಂತು ಕಟ್ಟಿದವರಿಗೆ ವಿಮೆ ಹಣ ಬೇಗವಾಗಿ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.