News

ರೇಷನ್ ಕಾರ್ಡ್ ಹೊಂದಿದವರಿಗೆ ಸಂತಸದ ಸುದ್ದಿ- ಪ್ರತಿ ಕುಟುಂಬಕ್ಕೆ 2 ಸಾವಿರ ರೂಪಾಯಿಯೊಂದಿಗೆ ಉಚಿತ ಸಕ್ಕರೆ, ಗೋಡಂಬಿ ವಿತರಣೆ

22 December, 2020 5:30 AM IST By:
Ration card

ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳು ಸಾಮಾನ್ಯವಾಗಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವುದಿಲ್ಲ. ಕನಿಷ್ಟ ದಿನನಿತ್ಯದ ಬಳಕೆ ವಸ್ತುಗಳನ್ನು ಖರೀದಿಸಲಾಗದಿರುವದನ್ನು  ಗಮನಿಸಿ ಸರ್ಕಾರ ಪ್ರತಿ ಬಿಪಿಎಲ್ ಕುಟುಂಬಕ್ಕೆ 2500 ನೀಡಲು ನಿರ್ಧರಿಸಿದೆ.

ಹೌದು ತಮಿಳುನಾಡಿನ ಸರ್ಕಾರ ಬಿಪಿಎಲ್ ಕುಟುಂಬಕ್ಕೆ ಈ ವಿಶೇಷ ಕೊಡುಗೆಯನ್ನು ನೀಡಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತದೆ. ಪೊಂಗಲ್ ತಮಿಳುನಾಡಿನ ಪ್ರಮುಖ ಹಬ್ಬವಾಗಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರವು ಪಡಿತರ ಚೀಟಿ ಹೊಂದಿರುವ ತನ್ನ ರಾಜ್ಯದ 2.6 ಕೋಟಿ ಜನರಿಗೆ 2500 ರೂ. ನಗದು ನೀಡಲು ನಿರ್ಧರಿಸಿದೆ. ಈ ಪ್ರೋತ್ಸಾಹ ಧನವನ್ನು ಜನವರಿ 4 ರಿಂದ ವಿತರಿಸಲಾಗುವುದು .

ಪೊಂಗಲ್ ಗಿಫ್ಟ್ ಪ್ಯಾಕೇಜ್ ಗಾಗಿ 5,604 ಕೋಟಿ ರೂ.2.10 ಕೋಟಿ ಪಡಿತರ ಚೀಟಿದಾರರಿಗೆ 2500 ರೂ., ಪೊಂಗಲ್ ಗಿಫ್ಟ್ ಪ್ಯಾಕೇಜ್ ನೀಡಲಾಗಿದೆ. 3,75,235 ಸಕ್ಕರೆ ಕಾರ್ಡ್ ಗಳಿಗೆ ಪೊಂಗಲ್ ಉಡುಗೊರೆ ನೀಡಲಾಗುವುದು, ಇದನ್ನು ಅಕ್ಕಿ ಕಾರ್ಡ್ ಗಳಾಗಿ ಪರಿವರ್ತಿಸಬಹುದು. ಈವರೆಗೆ 1000 ರೂ.ಗಳನ್ನು ಪೊಂಗಲ್ ಉಡುಗೊರೆಯಾಗಿ ನೀಡಲಾಗಿದ್ದು, ಈ ವರ್ಷ 2500 ರೂ. ನೀಡಲಾಗುವುದು.

ಈ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು ಒಂದು ಕೆಜಿ ಅಕ್ಕಿ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬಟ್ಟೆ ಚೀಲ ಮತ್ತು ಕಬ್ಬನ್ನು ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡಲಿದೆ.