News

ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳ ಕೀಟ, ರೋಗ ಹಾಗೂ ಹತೋಟಿಗಾಗಿ ಕ್ಷಿಪ್ರ ಸಂಚಾರ ಪೀಡೆ ಸಮೀಕ್ಷೆಗೆ ಚಾಲನೆ

10 November, 2020 6:38 PM IST By:

ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇವುಗಳ ಸಹಯೋಗದೊಂದಿಗೆ ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳ ಕೀಟ, ರೋಗ ಹಾಗೂ ಹತೋಟಿಗೆ ಸಂಬಂಧಿಸಿದಂತೆ 2020-21ನೇ ಸಾಲಿನ ಕ್ಷಿಪ್ರ ಸಂಚಾರ ಪೀಡೆ ಸಮೀಕ್ಷೆಗೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.

   ಕ್ಷೇತ್ರ ಮಟ್ಟದಲ್ಲಿ ಕೃಷಿ ಇಲಾಖಾ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ತೊಗರಿ ಬೆಳೆ, ಹತ್ತಿ ಬೆಳೆ ಹಾಗೂ ಇತರೆ  ಬೆಳೆಗಳ ಕೀಟ/ರೋಗದ ಸಮೀಕ್ಷೆ ನಡೆಸಿ ಹತೋಟಿ ಕ್ರಮಗಳ ಬಗ್ಗೆ ಕ್ಷೇತ್ರಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲಿದ್ದಾರೆ. ಎಂಟು ವಾರಗಳ ಕಾಲ ಈ ಸಮೀಕ್ಷೆ ನಡೆಯಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಡಾ. ರಿತೇಂದ್ರನಾಥ ಸುಗೂರ, ಕಲಬುರಗಿ-1ರ ಉಪ ಕೃಷಿ ನಿರ್ದೇಶಕಿ ಡಾ. ಅನುಸೂಯಾ, ಸೇಡಂ-2ರ ಉಪ ಕೃಷಿ ನಿರ್ದೇಶಕ ಡಾ. ಸಮದ್ ಪಟೇಲ್, ಕೃಷಿ ವಿಜ್ಞಾನಿಗಳಾದ ಡಾ. ಎಂ.ಎಂ. ಧನಂಜಿ, ಡಾ. ರಾಜು ತೆಗ್ಗಳ್ಳಿ, ಡಾ. ರಾಚಪ್ಪ ಹಾವೇರಿ, ಸಹಾಯಕ ಕೃಷಿ ನಿರ್ದೇಶಕಿ ಡಾ. ಮಧುಮತಿ ಪಾಟೀಲ,  ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ, ಜೇವರ್ಗಿ ಹಾಗೂ ಸೇಡಂ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಕ್ಷೇತ್ರ ಮಟ್ಟದ ಅಧಿಕಾರಿಗಳು, ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪಾಲ್ಗೊಂಡಿದ್ದರು.