News

ಓಮೈಕ್ರೊನ್ ನ ಹಾವಳಿ! ಮತ್ತೆ ಹೆಚ್ಚಾಗುತ್ತಿದೆ ಓಮೈಕ್ರೊನ್ ವೈರೆಂಟ್ 'ನ' ಸಂಖ್ಯೆ!

13 December, 2021 11:41 AM IST By: Ashok Jotawar
The Mask wearing Travelers

ಓಮೈಕ್ರೊನ್ ನಿಂದ ಪ್ರಭಾವಕ್ಕೆ ಒಳಗಾದವರ  ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರ, ಕರ್ನಾಟಕ, ಚಂಡೀಗಡ್ ನಲ್ಲಂತೂ ಮತ್ತೆ ಈ ಒಂದು ಮಹಾಶಯನ ಹಾವಳಿ ಹೆಚ್ಚಾಗುತ್ತಿದೆ. ಕಳೆದ ರವಿವಾರ 33 ರಿಂದ ನೇರವಾಗಿ 38 ರ ಸಂಖ್ಯೆಗೆ ಎಗರಿದ ಈ ಒಂದು ವೇರಿಯಂಟ್ ನ ಸಂಖ್ಯೆ ನಿಜಕ್ಕೂ ತುಂಬಾ ಚಿಂತಾಜನಕವಾಗಿದೆ. ಮಹಾರಾಷ್ಟ್ರ ಕರ್ನಾಟಕ, ಕೇರಳ, ಚಂಡೀಗಡ್ ನಲ್ಲಂತೂ ರವಿವಾರ ಒಂದೊಂದು ಕೇಸು ಹೆಚ್ಚಾಗಿದೆ.

ಉಳಿದ 2 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲೂ ಈ ಒಂದು ಹೊಸ ವೈರಸ್ ನ ಆಗಮನ ಕಂಡು ಬಂದಿದೆ. ವಿಜ್ಯಾನಿ ಗಳಪ್ರಕಾರ ಈ ಒಂದು ಸೋಂಕಿನಲ್ಲಿ ಹೆಚ್ಚಳಕ್ಕೆ, ನೇರ ಕಾರಣ ವೆಂದರೆ ಹೊರ ದೇಶ ದಿಂದ ಬರುವ ಯಾತ್ರಿಗಳು. ಮತ್ತು ಸುಮಾರು ಈ ಒಂದು ಹೊಸ ಅತಿಥಿ ಯ ಆಗಮನವು ಕೂಡ ಹೊರದೇಶದಿಂದ ಬಂದ ವ್ಯಕ್ತಿಗಳಿಂದಲೇ ಆರಂಭ ವಾಯಿತು.

ಮಹಾರಾಷ್ಟ್ರ ದಲ್ಲಿ 18 ನೇ ಕೇಸು ಕಂಡು ಬಂದಿದೆ, ಚಂಡೀಗಢ ನಲ್ಲಿ ಈ ಒಂದು ವೆರಿಎನ್ಟ್ ಕಂಡಿದ್ದು ಒಬ್ಬ 20 ವರ್ಷದ ಯುವಕ ತನ್ನ ಎಲ್ಲ ಕೋವಿಡ್ ಡೋಸ್ ಲಸಿಕೆ ಹಾಕಿಕೊಂಡರು ಕೂಡ ಈ ಒಂದು ವಿವೆರಿಯಂಟ್ 'ನ' ಬಲೆಗೆ ಬಿದ್ದ. ಮತ್ತು ಈ ವ್ಯಕ್ತಿ ಇಟಲಿ ಯಿಂದ ತನ್ನ ಕುಟುಂಬ ವನ್ನು ಭೇಟಿಯಾಗಲು ಬಂದಿದ್ದ.

ಅಂದ್ರಪ್ರದೇಶ ನಲ್ಲಿ ಮೊದಲನೆಯ ಓಮೈಕ್ರೋನ್ ಕೇಸು ಕಂಡು ಬಂದಿದೆ. 34  ವರ್ಷದ ಈ ವ್ಯಕ್ತಿ ತಮ್ಮ ಊರಿಗೆ, ಐರ್ಲೆಂಡ್ ನಿಂದ ಮರಳುತ್ತಿದ್ದ. ಮೊದಲನೇ ದಾಗಿ ಈ ವ್ಯಕ್ತಿಯ ಎಲ್ಲ ರಿಪೋರ್ಟ್ಗಳು   ನೆಗೆಟಿವ್ ಆಗಿಯೇ ಬಂದಿದ್ದವು . ಮತ್ತು ಇವನಿಗೆ ಮುಂಬೈ ನಿಂದ ವಿಶಾಖಪಟ್ಟಣಂಮ್ ಗೆ ಹೋಗಲು ಅನುಮತಿ ಕೂಡ ಸಿಕ್ಕಿತ್ತು ಆದರೆ ವಿಶಾಖಪಟ್ಟಣಂಮ್ ವಾಯು ನಿಲ್ದಾಣದಲ್ಲಿ ಮತ್ತೆ ಓಮೈಕ್ರೋನ್ ನ ಟೆಸ್ಟ್ ಮಾಡಿದಾಗ ಈ ವ್ಯಕ್ತಿ ಪಾಸಿಟಿವ್ ಆಗಿದ್ದ.

ಇನ್ನಷ್ಟು ಓದಿರಿ: