ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿಸುರಿಯುತ್ತಿರುವ ಅಕಾಲಿಕ ಮಳೆ ಬುಧವಾರವೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು ಏಪ್ರೀಲ್ 7 ರಂದು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
. ಸುಡುವ ಈ ಬಿಸಿಲಿನಲ್ಲಿ ಮಳೆ ಹೇಗೆ ಸಾಧ್ಯ ಅಂದು ಕೊಂಡಿದ್ದೀರಾ. ಕಳೆದ ಹದಿನೈದು ದಿನಗಳ ಹಿಂದೆ ಅಲ್ಲಲ್ಲಿ ಮಳೆಯಾಗಿ ಅವಾಂತರ ಸೃಷ್ಟಿ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಅಕಾಲಿಕ ಮಳೆಯಿಂದಾಗಿ ಮಾವು, ತರಕಾರಿ ಸೇರಿದಂತೆ ಇತರ ಬೆಳೆಗಳಿಗೆ ಅಪಾರ ಹಾನಿಯಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಏಪ್ರೀಲ್ 6 ರಿಂದ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ. ಗುಡುಗು ಮಿಂಚಿನ ಆರ್ಭಟವೂ ಇರಲಿದೆ. ಮೈಸೂರಿಲ್ಲಿ ಏಪ್ರೀಲ್ 5, ಮತ್ತು ಆರರಂದು ಸಾಧಾರಣ ಮಳೆಯಾಗಲಿದೆ.
ಒಂದೆರೆಡು ದಿನ ಮಾತ್ರ ಮಳೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾರದಲ್ಲಿ ಒಂದೆರಡು ದಿನ ಮಾತ್ರ ಒಂದು ಸುತ್ತಿನ ಮಳೆ ನಿರೀಕ್ಷೆಯಿದೆ
ಕರಾವಳಿ ಜಿಲ್ಲೆಗಳಲ್ಲಿ 8 ರಂದು ಗುಡುಗು ಮಿಂಚಿನ ಮಎಳೆಯಾಗುವ ನಿರೀಕ್ಷೆಯಿದೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.