News

ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯಬ್ಬರ; ಇನ್ನೂ 4-5 ದಿನಗಳ ಕಾಲ ಭಾರೀ ಮಳೆ..!

06 July, 2022 12:08 PM IST By: Kalmesh T
Rain will continue in the state for another 4-5 days..!

ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದ್ದು, ಮುಂದಿನ 4-5 ದಿನಗಳ ಕಾಲವೂ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿರಿ: 2022ರಲ್ಲಿ ಭಾರತದ ಕಾಫಿ ರಫ್ತು 19 ರಷ್ಟು ಏರಿಕೆ; 1,88,736 ಟನ್‌ ರಫ್ತು!

ಬೆಂಗಳೂರಲ್ಲೂ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ IMD ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಪ್ರದೇಶಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರತಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.

187.89 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ; ₹37,859.34 ಲಕ್ಷ ಕೋಟಿ ಲಾಭ!

ಮಳೆ

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮೋಡ ಮುಸುಕಿದ ವಾತಾವರಣ ಇರಲಿದೆ. ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಮುಂದಿನ 5 ದಿನ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊನೆಯ ಮೂರು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿಗೆ ಆರೆಂಜ್ ಅಲರ್ಟ್ ಹಾಗೂ ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹಸುವಿನ ಸಗಣಿಯಿಂದ ಆಭರಣ ತಯಾರಿಸಿ ಆದಾಯ ಗಳಿಸುತ್ತಿರುವ ಸ್ವಾವಲಂಬಿ ಮಹಿಳೆಯರು! ಹೇಗೆ ಗೊತ್ತೆ?

ದಕ್ಷಿಣ ಒಳನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆಯಿಂದ ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿಗೆ ಆರೆಂಜ್ ಅಲರ್ಟ್ ಹಾಗೂ ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆಯಿಂದ ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

ಈ ಬಾರಿ ನೈಋತ್ಯ ಮಾನ್ಸೂನ್ ಮೇ 29 ರಂದು ಕೇರಳಕ್ಕೆ ಪ್ರವೇಶ ಪಡೆದರೂ, ಅದರ ಪ್ರಗತಿ ಮಂದಗತಿಯಲ್ಲಿದೆ ಈ ಬಾರಿ ದಕ್ಷಿಣ ಪರ್ಯಾಯ ದ್ವೀಪ , ಪೂರ್ವ , ಈಶಾನ್ಯ ಮತ್ತು ಕೇಂದ್ರ ಭಾರತಗಳಲ್ಲಿ ಮಳೆಯ ತೀವ್ರ ಕೊರತೆಯುಂಟಾಗಿದೆ.

ಈ ಬಾರಿ ನೈಋತ್ಯ ಮಾನ್ಸೂನ್ ಮೇ 29 ರಂದು ಕೇರಳಕ್ಕೆ ಪ್ರವೇಶ ಪಡೆದರೂ, ಅದರ ಪ್ರಗತಿ ಮಂದಗತಿಯಲ್ಲಿದೆ ಈ ಬಾರಿ ದಕ್ಷಿಣ ಪರ್ಯಾಯ ದ್ವೀಪ , ಪೂರ್ವ , ಈಶಾನ್ಯ ಮತ್ತು ಕೇಂದ್ರ ಭಾರತಗಳಲ್ಲಿ ಮಳೆಯ ತೀವ್ರ ಕೊರತೆಯುಂಟಾಗಿದೆ.