News

ಮಳೆ ಎಚ್ಚರಿಕೆ: ಈ ಆರು ರಾಜ್ಯಗಳಲ್ಲಿ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ

13 September, 2022 12:10 PM IST By: Maltesh
Rain warning: Heavy rain is likely to occur in these six states for the next 2 days

ದೆಹಲಿ-ಎನ್‌ಸಿಆರ್‌ನ ಹಲವು ಪ್ರದೇಶಗಳಲ್ಲಿ, ನಿನ್ನೆ ತಡರಾತ್ರಿ ಹಠಾತ್ತನೆ ಹವಾಮಾನದ ಪರಿಸ್ಥಿತಿ ಬದಲಾಗಿದೆ. ಮತ್ತು ಹಲವೆಡೆ ಮಳೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಹವಾಮಾನದ ಬಗ್ಗೆ ಹವಾಮಾನ ಇಲಾಖೆ ಏನೆಲ್ಲಾ ಮುನ್ಸೂಚನೆ ನೀಡಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಈ ವರ್ಷ ದೇಶಾದ್ಯಂತ ಮಾನ್ಸೂನ್ ಸಂಬಂಧಿತ ಚಟುವಟಿಕೆಗಳು ತುಂಬಾ ದುರ್ಬಲವಾಗಿವೆ. ಮುಂಗಾರು ನಿರ್ಗಮಿಸಿದರೂ ಮತ್ತೊಮ್ಮೆ ದೇಶದ ಹಲವೆಡೆ ಸಾಕಷ್ಟು ಮಳೆಯಾಗಬಹುದು. ಈ ನಿಟ್ಟಿನಲ್ಲಿ ಭಾರತೀಯ ಹವಾಮಾನ ಇಲಾಖೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಅಂತಹ ಪರಿಸ್ಥಿತಿಯಲ್ಲಿ, ಇಡೀ ದೇಶದ ಹವಾಮಾನ ಪರಿಸ್ಥಿತಿ ಇಲ್ಲಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ: ಅರ್ಜಿ ಸಲ್ಲಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

ದೆಹಲಿ-ಎನ್‌ಸಿಆರ್‌ನ ಹವಾಮಾನ ಪರಿಸ್ಥಿತಿಯನ್ನು ತಿಳಿಯಿರಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನ ಹಲವು ಪ್ರದೇಶಗಳಲ್ಲಿ ನಿನ್ನೆ ತಡರಾತ್ರಿ ಹವಾಮಾನ ಹಠಾತ್ ತಿರುವು ಪಡೆದುಕೊಂಡಿದ್ದು, ಹಲವೆಡೆ ಮಳೆ ಕಾಣಿಸಿಕೊಂಡಿದೆ. ಇದಾದ ಬಳಿಕ ನಗರದ ಜನತೆಗೆ ತೇವಾಂಶ ಹಾಗೂ ಬಿಸಿಲಿನ ಬೇಗೆಯಿಂದ ಕೊಂಚ ನೆಮ್ಮದಿ ಸಿಕ್ಕಿದೆ. ಇಂದಿನಿಂದ ಅಂದರೆ ಸೆಪ್ಟೆಂಬರ್ 13 ರಿಂದ ಇಲ್ಲಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಆದರೆ, ಹವಾಮಾನ ಇಲಾಖೆ ಸೆ.14 ಮತ್ತು 15ಕ್ಕೆ ಮಾತ್ರ ಭಾರೀ ಮಳೆಯಾಗುವ ಬಗ್ಗೆ ಯೆಲ್ಲೋ ಎಚ್ಚರಿಕೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ

ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ, ಆದರೆ ರಾಜ್ಯದ ಬಹುತೇಕ ಜಿಲ್ಲೆಗಳು ಮಳೆಯಿಲ್ಲದೆ ಉಳಿದಿವೆ. ಈ ಮಧ್ಯೆ, ರಾಜ್ಯದ 33 ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.

ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಹಿತಕರ ವಾತಾವರಣವಿದ್ದರೆ, ಹಲವು ರಾಜ್ಯಗಳಲ್ಲಿ ಮಳೆ ಅನಾಹುತದ ಸೂಚನೆ ನೀಡುತ್ತಿದೆ. ಹೌದು, ಮುಂದಿನ ಮೂರು ದಿನಗಳ ಕಾಲ ಆರು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿರುವ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ತಿಳಿಸಿದೆ. ಈ ಆರು ರಾಜ್ಯಗಳು ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ.

ಮೇಕೆ ಸಾಕಾಣಿಕೆಗೆ 4 ಲಕ್ಷ ರೂ ವರೆಗೆ ಸಾಲ ಸೌಲಭ್ಯ.. 2 ಲಕ್ಷ ರೂ ಗರಿಷ್ಠ ಸಬ್ಸಿಡಿ

ಹವಾಮಾನ ಇಲಾಖೆ ಪ್ರಕಾರ, ಸೆಪ್ಟೆಂಬರ್ 17 ಮತ್ತು 18 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ, ಆದ್ದರಿಂದ ಒಡಿಶಾದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಈ ಕಾರಣಕ್ಕಾಗಿಯೇ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಆಡಳಿತವನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಿದೆ. ಅಷ್ಟೇ ಅಲ್ಲ, ಬೀಚ್‌ಗಳಲ್ಲಿ ಮೀನುಗಾರರಿಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ದಕ್ಷಿಣ ಭಾರತದ ಕೇರಳದ 9 ಜಿಲ್ಲೆಗಳಲ್ಲಿ ಮಳೆಗಾಗಿ ಹಳದಿ ಅಲರ್ಟ್ ಕೂಡ ನೀಡಲಾಗಿದೆ.