News

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ

02 August, 2020 1:26 PM IST By:

ಕರಾವಳ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆ (Heavy rain) ಯಾಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬೆಳಿಗ್ಗೆ ಉತ್ತಮ, ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟಾರೆ 5 ಸೆಂ.ಮೀ. ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ 15 ಸೆಂ.ಮೀ. ಮಳೆಯಾಗಿದೆ. ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಧಾರವಾಡ ನಗರದ ಟೋಲ್‌ನಾಕಾ ಬಳಿ ರಸ್ತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಜಿಲ್ಲೆಯ ಕಲಘಟಗಿ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದೆ.

ಮಳೆ ಪ್ರಮಾಣ:

ಹೊನ್ನಾವರ, ಕುಮಟಾ, ಅಂಕೋಲಾ ತಲಾ 8 ಸೆಂ.ಮೀ, ಪಣಂಬೂರು, ಗೋಕರ್ಣ, ಲಿಂಗಮನಮಕ್ಕಿ, ತಾಳಗುಪ್ಪ ತಲಾ 6 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ, ಭಟ್ಕಳ, ಶಿರಾಲಿ ತಲಾ 5 ಸೆಂ.ಮೀ, ಬ್ರಹ್ಮಾವರ, ಉಡುಪಿ ತಲಾ 4 ಸೆಂ.ಮೀ, ಮೂಡುಬಿದಿರೆ, ಕೋಟ ತಲಾ 3 ಸೆಂ.ಮೀ, ಮೂಲ್ಕಿ, ಮಾಣಿ, ಪುತ್ತೂರ, ಸುಬ್ರಹ್ಮಣ್ಯ, ಕಾರ್ಕಳ, ಕದ್ರಾ, ಕಾರವಾರ, ಭಾಗಮಂಡಲ, ಮಡಿಕೇರಿ, ಆಗುಂಬೆ ತಲಾ 2 ಸೆಂ.ಮೀ, ಮಳೆಯಾಗಿದೆ.