ರಾಜ್ಯದಲ್ಲಿ ಹವಾಮಾನ ಭಿನ್ನವಾಗಿದೆ. ಕೆಲವೆಡೆ ಭಾರೀ ಮಳೆ, ಇನ್ನೊಂದಷ್ಟು ಭಾರೀ ಬಿಸಿಲು…
ರಾಜ್ಯದಲ್ಲಿ ಹವಾಮಾನ ಪರಿಸ್ಥಿತಿ ಭಿನ್ನವಾಗಿದೆ. ರಾಜ್ಯದ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಭಾರೀ ಬಿಸಿಲು ಇದೆ.
ಭಾರೀ ಮಳೆ!
ರಾಜ್ಯ (Heavy Rain)ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ.
ಇನ್ನು ಮಂಗಳವಾರ ಹಾಗೂ ಬುಧವಾರ ದಕ್ಷಿಣ ಒಳನಾಡಿನ ಕೊಡಗು & ಮೈಸೂರು ಜಿಲ್ಲೆ (South inland Kodagu & Mysore district)ಗಳ
ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (Indian Meteorological Department forecast) ನೀಡಿದೆ.
ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ
ಹಾಗೂ ಉತ್ತರ ಒಳನಾಡಿನಲ್ಲಿ ಒಂದೆರಡು (Light to moderate rain will occur over many parts of the coastal,
southern interior and northern interior.) ಕಡೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.
ಅಲ್ಲದೇ ಮುಂದಿನ 48 ಗಂಟೆಯ ಅವಧಿಯಲ್ಲಿಯೂ ಕರಾವಳಿಯ ಕೆಲವು ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಒಂದೆರಡು
ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ.
ಉಷ್ಣಾಂಶ ಹೆಚ್ಚಳ ಎಚ್ಚರಿಕೆ!
ರಾಜ್ಯದ ಉತ್ತರ (Temperature rise warning!)ಭಾಗದಲ್ಲಿ ಭಾರೀ ತಾಪಮಾನವಿದ್ದು, ಇದು ಇನ್ನೂ ಹೆಚ್ಚಳವಾಗಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗರಿಷ್ಠ ಉಷ್ಣಾಂಶ: ಕರಾವಳಿಯ (Maximum Temperature) ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, (Udupi, Bagalkote, Belgaum, Dharwad
Gadag, Kalaburagi, Koppal, Raichur, Yadgiri) ರಾಯಚೂರು, ಯಾದಗಿರಿ ಜಿಲ್ಲೆಯ
ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ
ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದಲ್ಲದೇ ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಚಿತ್ರದುರ್ಗ, ಹಾಸನ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ
ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ..ಬೆಂಗಳೂರು ನಗರ, ಬೆಂಗಳೂರು
ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಮೈಸೂರು ತುಮಕೂರು ಜಿಲ್ಲೆಯ ಒಂದೆರಡು ಕಡೆಗಳಲ್ಲಿ 1- 2 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು ಸೋಮವಾರ ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 35.2 ಡಿ.ಸೆ ಚಿ ಕಲಬುರ್ಗಿ ಯಲ್ಲಿ ದಾಖಲಾಗಿದೆ.
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 18.0 ಡಿ.ಸೆ. ವಿಜಯಪುರ ನಲ್ಲಿ ದಾಖಲಾಗಿದೆ.
ಭಾರೀ ಮಳೆ ಮುನ್ನೆಚ್ಚರಿಕೆ:
ಮುಂದಿನ 24 ಗಂಟೆಗಳು: ದಕ್ಷಿಣ ಒಳನಾಡಿನ ಕೊಡಗು & ಮೈಸೂರು ಜಿಲ್ಲೆಗಳ (Heavy Rain)ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆಗಳು ರಾಜ್ಯದ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹವಾಮಾನ ಹೇಗಿದೆ ?
ಬೆಂಗಳೂರಿನಲ್ಲಿ (How is the weather in Bangalore?) ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ
ವಾತಾವರಣವಿರಲಿದ್ದು, ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಬೀಳುವ ಸಾಧ್ಯತೆಯಿದೆ.
ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಸಾಮಾನ್ಯವಾಗಿ (Bengaluru) ಮೋಡ ಕವಿದ ವಾತಾವರಣ, ಸಂಜೆ/ರಾತ್ರಿಯ ವೇಳೆಗೆ ಕೆಲವು ಪ್ರ ಕಡೆಗಳಲ್ಲಿ
ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ
ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ
ನೈಋತ್ಯ ಮುಂಗಾರು (Southwest Monsoon) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಸಾಮಾನ್ಯವಾಗಿತ್ತು
ಹಾಗೂ ಉತ್ತರ ಒಳನಾಡಿನ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ
ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ) ಸಾಲಿಗ್ರಾಮ (ಮೈಸೂರು ಜಿಲ್ಲೆ) 9: ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ) 8 ಸೆಂ.ಮೀ ಮಳೆಯಾಗಿದೆ.
ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನರ್ಲಿ ವಿರಾಜಪೇಟೆ (ಕೊಡಗು ಜಿಲ್ಲೆ) 6, ಮಂಗಳೂರು ವಿಮಾನ ನಿಲ್ದಾಣ 5 ಜಯಪುರ
(ಚಿಕ್ಕಮಗಳೂರು ಜಿಲ್ಲೆ) 4; ಪಣಂಬೂರು, ಉಡುಪಿ, ಟಿ ನರಸೀಪುರ, ಹುಣಸೂರು (ಎರಡೂ ಮೈಸೂರು ಜಿಲ್ಲೆ)
ತಲಾ 3: ಮಾಣಿ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ (ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆ), ಯಲ್ಲಾಪುರ, ಕದ್ರಾ, ಗೋಕರ್ಣ (ಎಲ್ಲಾ ಉತ್ತರ ಕನ್ನಡ ಜಿಲ್ಲೆ)
ಸಿದ್ದಾಪುರ (ಉಡುಪಿ ಜಿಲ್ಲೆ), ಲೋಂಡಾ(ಬೆಳಗಾವಿ ಜಿಲ್ಲೆ), ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ), ಮೈಸೂರು ತಲಾ 2: ಮೂಲ್ಕಿ
ಪುತ್ತೂರು (ಎರಡೂ ದಕ್ಷಿಣ ಕನ್ನಡ ಜಿಲ್ಲೆ) ಕಿಳವತ್ತಿ (ಉತ್ತರ ಕನ್ನಡ ಜಿಲ್ಲೆ), ಕೋಟ, ಕೊಲ್ಲೂರು (ಎರಡೂ ಉಡುಪಿ ಜಿಲ್ಲೆ)
ಎನ್ ಆರ್ ಪುರ, ಕಡೂರು, ತರೀಕೆರೆ, ಕಮ್ಮರಡಿ (ಎಲ್ಲವೂ ಚಿಕ್ಕಮಗಳೂರು: ಜಿಲ್ಲೆ), ಹಾರಂಗಿ
ನಾಪೋಕು (ಎರಡೂ ಕೊಡಗು ಜಿಲ್ಲೆ), ಅರಕಲಗೂಡು ಹಾಸನ, ಬೆಳ್ಳೂರು (ಮಂಡ್ಯ), ಕುಣಿಗಲ್ (ತುಮಕೂರು)
ತಲಾ 1 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ.