News

Rain Forecast : ದೇಶಾದ್ಯಂತ ಭಾರೀ ಮಳೆ ಎಚ್ಚರಿಕೆ ; ಭಾರತೀಯ ಹವಾಮಾನ ಇಲಾಖೆ

30 July, 2023 11:08 AM IST By: Kalmesh T
Heavy rain warning across the country

Indian Meteorological Department : ದೇಶಾದ್ಯಂತ ಇನ್ನೂ ಕೆಲವು ದಿನಗಳ ಕಾಲ ಭಾರಿ ಮಳೆಯಾಗಲಿದೆ (Rain) ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Rain Forecast : ದೇಶದ ಹಲವು ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ (Rain)  ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ (Rain)  ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ಕಡೆ ಸಂಪರ್ಕ ಕಡಿತವಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ಕೆಲವು ಪ್ರದೇಶಗಳಲ್ಲಿ ಮಳೆ ಪ್ರಮಾಣ ತಗ್ಗಿದೆ. ಆದರೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ.

ಮುಂಬರುವ ನಾಲ್ಕರಿಂದ ಐದು ದಿನಗಳ ಕಾಲ ಪೂರ್ವ, ಈಶಾನ್ಯ ಮತ್ತು ಪೂರ್ವ ಮಧ್ಯ ಭಾರತದಲ್ಲಿ ಭಾರೀ ಮಳೆ (Rain) ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಆಗಸ್ಟ್ 1 ಹಾಗೂ 2 ರಂದು ಅತಿ ಹೆಚ್ಚು ಮಳೆ (Rain) ಬೀಳುವ ಸಾಧ್ಯತೆಯಿದೆ.

ಜುಲೈ 30 - ಆಗಸ್ಟ್ 2 : ಈ ಅವಧಿಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮತ್ತು ಆಗಸ್ಟ್ 2 ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ (Rain).

ವಾಯುವ್ಯ ಭಾರತದಲ್ಲಿ ಇಂದು ಭಾರೀ ಮಳೆಯ (Rain)  ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಜುಲೈ 31 ರಿಂದ ಆಗಸ್ಟ್ 1 ರವರೆಗೆ ಕಡಿಮೆಯಾಗುತ್ತದೆ.

ಆಗಸ್ಟ್ 2 ಮತ್ತು 3 ರಂದು ಮಳೆ (Rain)  ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ ಮತ್ತು ಪೂರ್ವ ರಾಜಸ್ಥಾನಗಳಲ್ಲಿ ಆಗಸ್ಟ್ 2 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 2-3 ದಿನಗಳಲ್ಲಿ ಡೆಲ್ಗಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತುಂತುರು ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೆಹಲಿ-ಎನ್‌ಸಿಆರ್‌ನ ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ಹಗುರದಿಂದ ಸಾಧಾರಣ ಮಳೆ (Rain)  ದಾಖಲಾಗಿದೆ. ಏತನ್ಮಧ್ಯೆ, ಯಮುನಾ ನದಿಯಲ್ಲಿ ನೀರಿನ ಮಟ್ಟ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

GI Tag ಎಂದರೇನು? ದೇಶದಲ್ಲೇ ಅತಿ ಹೆಚ್ಚು ಜಿಐ ಟ್ಯಾಗ್‌ ಕರ್ನಾಟಕ ಪಡೆದಿದೆ ಗೊತ್ತೆ?