News

ಇಂದಿನಿಂದ ರಾಜ್ಯದಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ

07 December, 2020 7:37 AM IST By:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಡಿ. 7 ರಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚುಮುಚುಮು ಚಳಿಯೊಂದಿಗೆ ಮಳೆ:

ಈಗಾಗಲೇ ರಾಜ್ಯದಲ್ಲಿ ಹಲವು ಕಡೆ ಭಾನುವಾರ ಅಲ್ಲಲ್ಲಿ ತುಂತುರು ಮಳೆಯಾಗಿದೆ.  ಬೆಂಗಳೂರು ನಗರದಲ್ಲಿ ಇಡೀ ದಿನ ಚಳಿಯ ವಾತಾವರಣವಿತ್ತು.

ದೊಮ್ಮಲೂರಿನಲ್ಲಿ 9.5 ಮಿಲಿಮೀಟರ್ ಮಳೆ ಸುರಿದಿದೆ. ಹಾಗೆಯೇ ಮಹಾದೇವಪುರದಲ್ಲಿ 8.5 ಮಿಲಿ ಮೀಟರ್, ಕೆ.ಆರ್ ಪುರ ಮತ್ತು ಲಕ್ಕಸಂದ್ರ ಮತ್ತು ಆವಲಹಳ್ಳಿಯಲ್ಲಿ ತಲಾ 8 ಮಿಲಿ ಮೀಟರ್, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ 6 ಮೀಲಿ ಮೀಟರ್, ದಯಾನಂದನಗರ, ಹಂಪನಗರ, ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ 3 ಮೀಟರ್ ಮಳೆಯಾಗಿದೆ.

ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಡಿ. 7 ರಿಂದ 10ರವರೆಗೆ ಅಲ್ಲಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಸದ್ಯ ಮೋಡ ಕವಿದ ವಾತಾವರಣವಿದ್ದು, ಈ ಹಿನ್ನೆಲೆಯಲ್ಲಿ ಮಳೆ ಜೊತೆಗೆ ಚಳಿಯೂ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.