ಬೇಸಿಗೆಕಾಲದಲ್ಲಿ ಮಳೆ ಬರುವುದು ಹೇಗೆ ಸಾಧ್ಯ ಎಂದುಕೊಂಡಿದ್ದೀರಾ. ಹೌದು ಕೆಲವು ಸಲ ಬೇಸಿಗೆಕಾಲದಲ್ಲಿಯೂ ಅಕಾಲಿಕವಾಗಿ ಮಳೆ ಸುರಿಯುತದೆ.
ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಫೆ.17 ರಿಂದ 19ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.
ಇಡೀ ಜಿಲ್ಲಾದ್ಯಂತಯಾಗದಿದ್ದರೂ ಕೆಲವು ಪ್ರದೇಶಗಳಲ್ಲಿ ಅಲ್ಪ ಮಳೆಯಾಗಬಹುದು. ಅದರಲ್ಲೂ ಗುಡುಗು ಮಿಂಚಿನ ಮಳೆಯಾಗಬಹುದು. ಫೆ.17 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಫೆ.18 ರಂದು ಗುಡುಗು ಸಹಿತ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಬಹುದು.
ಕೊಯ್ಲು ಮಾಡಿದ ಮೆಣಸಿನಕಾಯಿ, ಹತ್ತಿ, ಕಡಲೆ, ಜೋಳ, ತೊಗರಿ ಗಿಡಗಳನ್ನು ಮಳೆ ನೀರು ತಾಗದಂತೆ ಸುರಕ್ಷಿತ ಜಾಗದಲ್ಲಿರಿಸಬೇಕು. ಸಾಕು ಪ್ರಾಣಿಗಳನ್ನು ಬಯಲು ಪ್ರದೇಶದಲ್ಲಿ ಬಿಡಬಾರದು ಎಂದು ಸಲಹೆ ನೀಡಲಾಗಿದೆ.