ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು, ರಾಜ್ಯದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನಲ್ಲಿ ಡಿ.1ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ನ.29ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ಕರಾವಳಿಯಲ್ಲಿ ಶನಿವಾರ ಅಲ್ಲಲ್ಲಿ ಹಗುರ ಮಳೆಯಾಗಲಿದ್ದು, ನ.29ರಿಂದ ಡಿ.1ರವರೆಗೆ ಒಣಹವೆ ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಹಗುರ ಮಳೆಯಾಗುವ ಮತ್ತು ಮುಂಜಾನೆ ಮಂಜು ಬೀಳುವ ಸಾಧ್ಯತೆ ಇದೆ’ ಎಂದರು.
ನಿವಾರ್ ಚಂಡಮಾರುತ ಪರಿಣಾಮ ರಾಜ್ಯದೆಲ್ಲೆಡೆ ಮೋಡಕವಿದ ವಾತಾವರಣವಿರಲಿದ್ದು, ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ. ಮುಂದಿನ 2-3 ದಿನಗಳವರೆಗೆ ರಾಜ್ಯದ್ಯಂತ ಚಳಿ ವಾತಾವರಣ ಮುಂದುವರೆಯಲಿದೆ.
ತುಂತುರು ಮಳೆ:
ಶುಕ್ರವಾರ ಇಡಿದೀನ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿಯೊಂದಿಗೆ ಆಗಾಗ ತುಂತುರು ಮಳೆಯಾಯಿತು. ಅಲ್ಲದೆ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಗರಿಷ್ಠ ತಾಪಮಾನದಲ್ಲಿಯೂ ಕುಸಿತವಾಗಿದ್ದರಿಂದ ಚಳಿ ಹೆಚ್ಚಿತ್ತು.